ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಚಿನ್ ರವೀಂದ್ರ ದ್ವಿಶತಕ

Published 5 ಫೆಬ್ರುವರಿ 2024, 18:27 IST
Last Updated 5 ಫೆಬ್ರುವರಿ 2024, 18:27 IST
ಅಕ್ಷರ ಗಾತ್ರ

ಮೌಂಟಾ ಮಾಂಗಾನೂಯಿ (ನ್ಯೂಜಿಲೆಂಡ್‌). (ಎಪಿ): ಮಧ್ಯಮ ಕ್ರಮಾಂಕದ ಬ್ಯಾಟರ್ ರಚಿನ್ ರವೀಂದ್ರ ಅವರ ದ್ವಿಶತಕದ (240) ನೆರವಿನಿಂದ ನ್ಯೂಜಿಲೆಂಡ್ ತಂಡ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದ ಆಟದಲ್ಲಿ ದಕ್ಷಿಣ ಆಫ್ರಿಕಾ ಮೇಲುಗೈ ಸಾಧಿಸಿದೆ. ನ್ಯೂಜಿಲೆಂಡ್ ತಂಡ ಮೊದಲ ಇನಿಂಗ್ಸ್‌ನಲ್ಲಿ 511 ರನ್‌ಗಳ ಭಾರಿ ಮೊತ್ತ ಗಳಿಸಿದೆ.

ಸೋಮವಾರ ಎರಡನೇ ದಿನದಾಟದ ಕೊನೆಗೆ ಪ್ರವಾಸಿ ದಕ್ಷಿಣ ಆಫ್ರಿಕಾ 80 ರನ್ನಿಗೆ 4 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಮೊದಲ ಇನಿಂಗ್ಸ್‌ ಬಾಕಿ ತೀರಿಸಲು ಇನ್ನೂ 431 ರನ್ ಗಳಿಸಬೇಕಾಗಿದೆ. ಒಂದು ಹಂತದಲ್ಲಿ ತಂಡ 30 ರನ್ನಿಗೆ 3 ವಿಕೆಟ್‌ ಕಳೆದುಕೊಂಡಿತ್ತು

ಆತಿಥೇಯರ ಪರ ಕೇನ್‌ ವಿಲಿಯಮ್ಸನ್ 118 ರನ್ ಗಳಿಸಿದರು. ರಚಿನ್ ಅವರ 366 ಎಸೆತಗಳ ಇನಿಂಗ್ಸ್‌ನಲ್ಲಿ ಮೂರು ಸಿಕ್ಸರ್‌, 24 ಬೌಂಡರಿಗಳಿದ್ದವು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್‌:  ನ್ಯೂಜಿಲೆಂಡ್‌: 144 ಓವರುಗಳಲ್ಲಿ 511 (ಕೇನ್ ವಿಲಿಯಮ್ಸನ್ 118, ರಚಿನ್ ರವೀಂದ್ರ 240, ಡೇರಿಲ್ ಮಿಚೆಲ್ 34, ಗ್ಲೆನ್‌ ಫಿಲಿಪ್ಸ್‌ 39; ನೀಲ್‌ ಬ್ರಾಂಡ್‌ 119ಕ್ಕೆ6); ದಕ್ಷಿಣ ಆಫ್ರಿಕಾ: 4 ವಿಕೆಟ್‌ಗೆ 80 (ಡೇವಿಡ್‌ ಬೆಡ್ಡಿಂಗಂ ಬ್ಯಾಟಿಂಗ್ 29; ಕೈಲ್ ಜೇಮಿಸನ್ 21ಕ್ಕೆ2).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT