ಶನಿವಾರ, ಜನವರಿ 23, 2021
25 °C
ಕೆಎಸ್‌ಸಿಎ 23 ವರ್ಷದೊಳಗಿನವರ ಅಂತರವಲಯ ಕ್ರಿಕೆಟ್ ಟೂರ್ನಿ

ಕೃತಿಕ್ ಕೈತಪ್ಪಿದ ಶತಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೃತಿಕ್ ಕೃಷ್ಣ (94, 115 ಎಸೆತ, 4 ಬೌಂಡರಿ, 3 ಸಿಕ್ಸರ್‌) ಕೇವಲ ಆರು ರನ್‌ಗಳಿಂದ ಶತಕ ತಪ್ಪಿಸಿಕೊಂಡರು. ಅವರ ಭರ್ಜರಿ ಆಟದ ಬಲದಿಂದ ಮೈಸೂರು ವಲಯ ತಂಡವು ಜಯಭೇರಿ ಬಾರಿಸಿತು. ಕೆಎಸ್‌ಸಿಎ 23 ವರ್ಷದೊಳಗಿನವರ ಅಂತರವಲಯ ಕ್ರಿಕೆಟ್‌ ಟೂರ್ನಿಯಲ್ಲಿ ಬುಧವಾರ 70 ರನ್‌ಗಳಿಂದ ಶಿವಮೊಗ್ಗ ತಂಡವನ್ನು ಮಣಿಸಿತು.

ಬಿಜಿಎಸ್‌ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೈಸೂರು ನಿಗದಿತ 50 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 267 ರನ್‌ ಗಳಿಸಿತು. ಧೀಮಂತ್‌  ಬಿ.(ಔಟಾಗದೆ 71) ಅರ್ಧಶತಕ ಗಳಿಸಿದರು. ಗುರಿ ಬೆನ್ನತ್ತಿದ ಶಿವಮೊಗ್ಗ 8 ವಿಕೆಟ್‌ ಕಳೆದುಕೊಂಡು 197 ರನ್‌ ಗಳಿಸಲಷ್ಟೇ ಶಕ್ತವಾಯಿತು.

ಮಳೆಯಿಂದ ಅಡ್ಡಿಯಾದ ಇತರ ಎರಡು ಪಂದ್ಯಗಳಲ್ಲಿ ರಾಯಚೂರು ಹಾಗೂ ಧಾರವಾಡ ವಲಯ ತಂಡಗಳು ಜಯ ಸಾಧಿಸಿದವು.

ಸಂಕ್ಷಿಪ್ತ ಸ್ಕೋರುಗಳು: ಮೈಸೂರು ವಲಯ: 50 ಓವರ್‌ಗಳಲ್ಲಿ 2 ವಿಕೆಟ್‌ಗೆ 267 (ಕೃತಿಕ್ ಕೃಷ್ಣ 94, ಧೀಮಂತ್‌ ಬಿ. ಔಟಾಗದೆ 71, ಕಿಶನ್ ಎಸ್‌.ಬೆದಾರೆ ಔಟಾಗದೆ 25). ಶಿವಮೊಗ್ಗ ವಲಯ: 50 ಓವರ್‌ಗಳಲ್ಲಿ 8 ವಿಕೆಟ್‌ಗೆ 197 (ಮುಬಾರಕ್ ಎಸ್‌. 30, ಸೌರಭ್‌ ಎಸ್‌.ಆರ್‌. 40, ನಿಕ್ಷೇಪ್‌ ಪಿ. ಖಾನಾಪುರ ಔಟಾಗದೆ 37; ಶಶಾಂಕ್ ಕೆ. 48ಕ್ಕೆ 3,  ಸಾಯಿಶಿವ ನಾರಾಯಣ್ ಎಲ್‌. 32ಕ್ಕೆ 2). ಫಲಿತಾಂಶ: ಮೈಸೂರು ವಲಯಕ್ಕೆ 70 ರನ್‌ಗಳ ಜಯ.

ಆದಿತ್ಯ ಗ್ಲೋಬಲ್‌ ಒಂದನೇ ಕ್ರೀಡಾಂಗಣ: ರಾಯಚೂರು ವಲಯ: 49.4 ಓವರ್‌ಗಳಲ್ಲಿ 255 (ರಾಘವೇಂದ್ರ ಎನ್‌. 75, ಸೌರಭ್ ಮಿತ್ತೂರ್‌ 41, ಅಭಿಷೇಕ್‌ ಎಸ್‌.ಕೆ. 34, ವಿದ್ಯಾಧರ ಪಾಟೀಲ್‌ 27, ಮಾಧವ ಪಿ.ಬಜಾಜ್‌ 34, ಮಂಜುನಾಥ ಜಿ. 42ಕ್ಕೆ 2; ಸಂಜಯ್‌ ಬಿ. 52ಕ್ಕೆ 4, ಚಂದನ್ ಎಸ್‌. ಗುಜ್ಜರ್‌ 21ಕ್ಕೆ 2). ತುಮಕೂರು ವಲಯ: 38.1 ಓವರ್‌ಗಳಲ್ಲಿ 9 ವಿಕೆಟ್‌ಗೆ 158 (ಪುನೀತ್ ಔಟಾಗದೆ 66, ಅಭಿಷೇಕ್ ಎಚ್‌.ಪಿ. 25; ವಿದ್ಯಾಧರ ಪಾಟೀಲ್‌ 32ಕ್ಕೆ 5, ರಾಘವೇಂದ್ರ ಎನ್‌. 3ಕ್ಕೆ 2). ಫಲಿತಾಂಶ: ಮಳೆ ಅಡ್ಡಿ, ರನ್‌ರೇಟ್ ಆಧಾರದಲ್ಲಿ ರಾಯಚೂರು ವಲಯಕ್ಕೆ ಜಯ.

ಗ್ರೀನ್ ಸ್ಪೋರ್ಟ್ಸ್ ವಿಲೇಜ್ ಕ್ರೀಡಾಂಗಣ: ಮಂಗಳೂರು ವಲಯ: 42.2 ಓವರ್‌ಗಳಲ್ಲಿ 152 (ಆರ್ಯನ್‌ 21, ಮೊಹಮ್ಮದ್ ಅರ್ಮಾನ್‌ 50, ಅಭಿಷೇಕ್‌ 22; ಮುದ್ದಸ್ಸೀರ್‌ ನಜರ್‌ 16ಕ್ಕೆ 3, ಇಂದ್ರಸೇನ್ ಟಿ.ದಾನಿ 40ಕ್ಕೆ 3, ರೋಹಿತ್ ಕುಮಾರ್ ಎ.ಸಿ. 26ಕ್ಕೆ 2). ಧಾರವಾಡ ವಲಯ: 21 ಓವರ್‌ಗಳಲ್ಲಿ 2 ವಿಕೆಟ್‌ಗೆ 75 (ಪರೀಕ್ಷಿತ್ ಒಕ್ಕುಂದ ಔಟಾಗದೆ 33). ಫಲಿತಾಂಶ: ಮಳೆ ಅಡ್ಡಿ, ರನ್‌ರೇಟ್ ಆಧಾರದ ಮೇಲೆ ಧಾರವಾಡ ವಲಯಕ್ಕೆ ಜಯ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು