ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ: ಅರಿಂದಮ್, ಅವಿನಾಶ್ ಹೊಳಪು

ಕೆಟ್ಟ ಹವಾಮಾನದಲ್ಲಿ ಕರ್ನಾಟಕದ ಬೌಲರ್‌ಗಳಿಗೆ ನಿರಾಸೆ
Last Updated 28 ಜನವರಿ 2020, 19:59 IST
ಅಕ್ಷರ ಗಾತ್ರ

ನವದೆಹಲಿ: ಮಂಗಳವಾರ ಇಡೀ ದಿನ ಕರ್ನೇಲ್ ಸಿಂಗ್ ಮೈದಾನದಲ್ಲಿ ಮಳೆ ಮತ್ತು ಮಂಜಿನ ಆಟ. ಅದರ ನಡುವೆ ರೈಲ್ವೇಸ್ ತಂಡದ ಅರಿಂದಮ್ ಘೋಷ್ ಮತ್ತು ಅವಿನಾಶ್ ಯಾದವ್ ಅವರ ಅರ್ಧಶತಕಗಳ ಹೋರಾಟ. ಮಂದಬೆಳಕಿನಿಂದ ದಿನದಾಟ ಮುಗಿಯುವ ಮುನ್ನ ಕರ್ನಾಟಕದ ಬುಟ್ಟಿಗೆ ಬಿದ್ದಿದ್ದು ಒಂದು ವಿಕೆಟ್ ಮಾತ್ರ!

ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ‘ಬಿ’ ಗುಂಪಿನ ಪಂದ್ಯದ ಎರಡನೇ ದಿನದ ಸಾರಾಂಶ ಇದು. ಮೊದಲ ದಿನವಾದ ಸೋಮವಾರ 98 ರನ್‌ಗಳಿಗೆ 6 ವಿಕೆಟ್‌ ಕಳದುಕೊಂಡಿದ್ದ ರೈಲ್ವೇಸ್ ಚೇತರಿಸಿಕೊಂಡಿತು. 72 ಓವರ್‌ಗಳಲ್ಲಿ 7ಕ್ಕೆ160 ರನ್‌ ಗಳಿಸಿತು. ಇಡೀ ದಿನದಲ್ಲಿ ಕೇವಲ 23 ಓವರ್‌ಗಳ ಆಟ ಮಾತ್ರ ನಡೆಯಿತು. ಊಟದ ವಿರಾಮಕ್ಕೂ ಮುನ್ನ ಆಟ ನಡೆದಯಲಿಲ್ಲ. ತುಂತುರು ಮಳೆ, ಚಳಿ ಮತ್ತು ಮಂಜು ಕವಿದ ವಾತಾವರಣದಲ್ಲಿ ಬೌಲರ್‌ಗಳು ಏಕಾಗ್ರತೆ ಸಾಧಿಸಲು ಹರಸಾಹಸಪಟ್ಟರು. ತೂತು ಬಿದ್ದಿದ್ದ ಹೊದಿಕೆಗಳಲ್ಲಿ ಪಿಚ್‌ ರಕ್ಷಿಸಲು ಆಯೋಜಕರು ಪರದಾಡಿದರು. ಈ ಮಧ್ಯೆ 114 ನಿಮಿಷಗಳ ಆಟ ಮಾತ್ರ ಸಾಧ್ಯವಾಯಿತು. ಅದರಲ್ಲಿ ಅರಿಂದಮ್ (ಔಟಾಗದೆ 50; 155ಎಸೆತ 7ಬೌಂಡರಿ) ಮತ್ತು ಅವಿನಾಶ್ (62; 143ಎ, 10ಬೌಂ) ಏಳನೇ ವಿಕೆಟ್ ಜೊತೆಯಾಟದಲ್ಲಿ 97 ರನ್‌ ಸೇರಿಸಿದರು. ಈ ಜೊತೆಯಾಟ ಮುರಿಯುವಲ್ಲಿ ರೋನಿತ್ ಮೋರೆ ಯಶಸ್ವಿಯಾದರು. ದೊಡ್ಡ ಹೊಡೆತಕ್ಕೆ ಯತ್ನಿಸಿದ ಅವಿನಾಶ್ ಅವರು ದೇವದತ್ತಗೆ ಕ್ಯಾಚಿತ್ತರು.

ಇಬ್ಬರು ಕನ್ನಡಿಗರ ಶತಕ ಸಾಧನೆ

ಕೋಲ್ಕತ್ತ/ಪೋರ್ವರಿಂ: ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಮಂಗಳವಾರ ಇಬ್ಬರು ಕನ್ನಡಿಗರು ಶತಕ ದಾಖಲಿಸಿದರು.

ಕೋಲ್ಕತ್ತದಲ್ಲಿ ನಡೆಯುತ್ತಿರುವ ಪ್ಲೇಟ್‌ ಗುಂಪಿನ ಪಂದ್ಯದಲ್ಲಿ ಮೈಸೂರು ಹುಡುಗ ಕೆ.ಬಿ. ಪವನ್ (ಔಟಾಗದೆ 129) ಅವರ ಶತಕದ ಬಲದಿಂದ ಮಿಜೋರಾಂ ತಂಡವು ನಾಗಾಲ್ಯಾಂಡ್ ಎದುರು ಮೊದಲ ಇನಿಂಗ್ಸ್ ಮುನ್ನಡೆ ಗಳಿಸಿತು.

ಪೋರ್ವರಿಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಗೋಪಾ ತಂಡದಲ್ಲಿ ಆಡುತ್ತಿರುವ ಕರ್ನಾಟಕದ ಅಮಿತ್ ವರ್ಮಾ (122 ರನ್) ಮೊದಲ ಇನಿಂಗ್ಸ್‌ನಲ್ಲಿ ಶತಕ ದಾಖಲಿಸಿದರು. ಇದರಿಂದಾಗಿ ಗೋವಾ ತಂಡವು 124ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 589 ರನ್‌ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಎದುರಾಳಿ ಅರುಣಾಚಲಪ್ರದೇಶ ತಂಡವು ಮೊದಲ ಇನಿಂಗ್ಸ್‌ನಲ್ಲಿ 43. 5 ಓವರ್‌ಗಳಲ್ಲಿ 83 ರನ್‌ಗಳಿಗ ಆಲೌಟ್ ಆಯಿತು. ಬೌಲಿಂಗ್ ನಲ್ಲಿ ಮಿಂಚಿದ ಅಮಿತ್ ಮೂರು ವಿಕೆಟ್ ಕಬಳಿಸಿದರು. ಫಾಲೋ ಆನ್ ಪಡೆದ ಅರುಣಾಚಲಪ್ರದೇಶವು ಎರಡನೇ ಇನಿಂಗ್ಸ್‌ನಲ್ಲಿ 10 ಓವರ್‌ಗಳಲ್ಲಿ 3ಕ್ಕೆ 19 ರನ್ ಗಳಿಸಿದೆ.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಕೋಲ್ಕತ್ತ: ಬಂಗಾಳ: 98.4 ಓವರ್‌ಗಳಲ್ಲಿ 318 (ಕೌಶಿಕ್ ಘೋಷ್ 46, ಅನುಸ್ತೂಪ್ ಮಜುಂದಾರ್ 99, ಶ್ರೀವತ್ಸ ಗೋಸ್ವಾಮಿ 59, ಶಹಭಾಜ್ 46, ಸಿಮ್ರನ್‌ಜೀತ್ ಸಿಂಗ್ 77ಕ್ಕೆ4, ವಿಕಾಸ್ ಮಿಶ್ರಾ 78ಕ್ಕೆ3) ದೆಹಲಿ: 65.4 ಓವರ್‌ಗಳಲ್ಲಿ 6ಕ್ಕೆ192 (ಹಿತೇನ್ ದಲಾಲ್ 40, ಧ್ರುವ ಶೋರೆ 65, ನಿತೀಶ್ ರಾಣಾ 24, ಜಾಂಟಿ ಸಿಧು ಔಟಾಗದೆ 32, ಮುಖೇಶ್ ಕುಮಾರ್ 57ಕ್ಕೆ2, ನೀಲಕಂಠ ದೇಸಾಯಿ 36ಕ್ಕೆ2, ಶಹಬಾಜ್ 11ಕ್ಕೆ2)

ಕೋಲ್ಕತ್ತ: ಪ್ಲೇಟ್ ಗುಂಪು: ನಾಗಾಲ್ಯಾಂಡ್: 243; ಮಿಜೋರಾಂ: 94 ಓವರ್‌ಗಳಲ್ಲಿ 3ಕ್ಕೆ318 (ಕೆ.ಬಿ. ಪವನ್ ಔಟಾಗದೆ 129, ತರುವರ್ ಕೊಹ್ಲಿ 127)

ಪೋರ್ವರಿಂ: ಗೋವಾ: 124 ಓವರ್‌ಗಳಲ್ಲಿ 2ಕ್ಕೆ 589 ಡಿಕ್ಲೆರ್ಡ್(ಸುಮೀರನ್ ಆಮೋಣಕರ್ 160, ವೈಭವ್ ಗೋವೆಕರ್ 160, ಎಸ್‌.ಕೆ. ಪಟೇಲ್ ಔಟಾಗದೆ 137, ಅಮಿತ್ ವರ್ಮಾ ಔಟಾಗದೆ 122) ಅರುಣಾಚಲಪ್ರದೇಶ: 43.5 ಓವರ್‌ಗಳಲ್ಲಿ 83 (ಕಮ್ಷಾ ಯಾಂಗ್ಫೋ 22, ಅಮೂಲ್ಯ ಪಂಡ್ರೇಕರ್ 19ಕ್ಕೆ2, ದರ್ಶನ್ ಮಿಸಾಳ್ 24ಕ್ಕೆ4, ಅಮಿತ್ ವರ್ಮಾ 2ಕ್ಕೆ3), ಎರಡನೇ ಇನಿಂಗ್ಸ್: ಅರುಣಾಚಲಪ್ರದೇಶ: 10 ಓವರ್‌ಗಳಲ್ಲಿ 3ಕ್ಕೆ19 (ರಾಹುಲ್ ದಲಾಲ್ ಔಟಾಗದೆ 5, ಅಮಿತ್ ವರ್ಮಾ 3ಕ್ಕೆ3)

ಅಂಗೋಲೆ: ಕೇರಳ: 49.5 ಓವರ್‌ಗಳಲ್ಲಿ 162 (ಬಾಸಿಲ್ ಥಂಪಿ 42, ಸಮದ್ ರಫಿ 62ಕ್ಕೆ5, ಪೃಥ್ವಿ ರಾಜ್ ಯೆರ್ರಾ 37ಕ್ಕೆ3, ಕೆ.ವಿ ಶಶಿಕಾಂತ್ 38ಕ್ಕೆ2), ಆಂಧ್ರ: 111.1 ಓವರ್‌ಗಳಲ್ಲಿ 255 (ಡಿ.ಬಿ. ಪ್ರಶಾಂತಕುಮಾರ್ 79, ಯು.ಎಂ.ಎಸ್. ಗಿರಿನಾಥ್ 41, ಕೆ. ನಿತೀಶಕುಮಾರ್ ರೆಡ್ಡಿ 39, ಬಾಸಿಲ್ ಥಂಪಿ 43ಕ್ಕೆ3, ಜಲಜ್ ಸಕ್ಸೆನಾ 56ಕ್ಕೆ3)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT