ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಕ್ವಾರ್ಟರ್‌ಫೈನಲ್: ಕಷ್ಟದ ಹಾದಿಯಲ್ಲಿ ಕರ್ನಾಟಕ

Last Updated 16 ಜನವರಿ 2019, 10:37 IST
ಅಕ್ಷರ ಗಾತ್ರ

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್‌ಫೈನಲ್‌ನ ಎರಡನೇ ದಿನ ಆತಿಥೆಯ ಕರ್ನಾಟಕ ತಂಡವು ಮೊದಲ ಇನಿಂಗ್ಸ್‌ ಮುನ್ನಡೆ ಪಡೆಯುವ ಹಾದಿಯನ್ನು ರಾಜಸ್ಥಾನ ತಂಡದ ಬೌಲರ್‌ಗಳು ಕಠಿಣಗೊಳಿಸಿದ್ದಾರೆ.

ಪಂದ್ಯದ ಮೊದಲ ದಿನವಾದ ಮಂಗಳವಾರ ರಾಜಸ್ಥಾನ ತಂಡವು 224 ರನ್‌ಗಳಿಗೆ ಆಲೌಟ್ ಆಗಿತ್ತು. ಅದಕ್ಕುತ್ತರವಾಗಿ ದಿನದಾಟದ ಅಂತ್ಯಕ್ಕೆ ಕರ್ನಾಟಕವು ವಿಕೆಟ್‌ ನಷ್ಟವಿಲ್ಲದೇ 12 ರನ್‌ ಗಳಿಸಿತ್ತು. ಆದರೆ ಎರಡನೇ ದಿನದ ಊಟದ ವಿರಾಮದ ವೇಳೆಗೆ 38 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 115 ರನ್‌ ಗಳಿಸಿದೆ. ಇನಿಂಗ್ಸ್ ಲೀಡ್ ಪಡೆಯಲು ಇನ್ನೂ 109 ರನ್‌ ಗಳಿಸಬೇಕಿದೆ. ಅರ್ಧಶತಕ ಗಳಿಸಿರುವ ಕೆ.ವಿ. ಸಿದ್ಧಾರ್ಥ್ (ಬ್ಯಾಟಿಂಗ್ 50 ) ಮತ್ತು ಶ್ರೇಯಸ್ ಗೋಪಾಲ್ (ಬ್ಯಾಟಿಂಗ್ 14) ಕ್ರೀಸ್‌ನಲ್ಲಿದ್ದಾರೆ.

ರಾಜಸ್ಥಾನ ತಂಡದ ತನ್ವೀರ್ ಉಲ್ ಹಕ್ ಎರಡು ವಿಕೆಟ್ ಗಳಿಸಿದರು. ದೀಪಕ್ ಚಾಹರ್ ಮತ್ತು ರಾಹುಲ್ ಚಾಹರ್ ತಲಾ ಒಂದು ವಿಕೆಟ್ ಗಳಿಸಿದರು. ಅನುಭವಿ ಬ್ಯಾಟ್ಸ್‌ಮನ್‌ಗಳಾದ ಆರ್. ಸಮರ್ಥ್ (32 ರನ್), ಕರುಣ್ ನಾಯರ್ (4 ರನ್) ಮತ್ತು ನಾಯಕ ಮನೀಷ್ ಪಾಂಡೆ (7 ರನ್) ಬೇಗನೆ ಔಟಾದರು. ಇದರಿಂದಾಗಿ ತಂಡದ ರನ್‌ ಗಳಿಕೆ ಕುಂಠಿತವಾಯಿತು. ಉತ್ತಮ ಬೌಲಿಂಗ್ ಮಾಡುತ್ತಿರುವ ರಾಜಸ್ಥಾನ ಬೌಲರ್‌ಗಳ ಮುಂದೆ ಕರ್ನಾಟಕದ ಬ್ಯಾಟ್ಸ್‌ಮನ್‌ಗಳು ಪರದಾಡುತ್ತಿದ್ದಾರೆ.

ಸ್ಕೋರ್

ಮೊದಲ ಇನಿಂಗ್ಸ್

ರಾಜಸ್ಥಾನ 224 (77.1 ಓವರ್‌ಗಳಲ್ಲಿ)

ಕರ್ನಾಟಕ ; 4ಕ್ಕೆ 115(38 ಓವರ್‌ಗಳಲ್ಲಿ; ಊಟದ ವಿರಾಮದ ವೇಳೆಗೆ)

ಆರ್. ಸಮರ್ಥ್ ಎಲ್‌ಬಿಡಬ್ಲ್ಯು ಬಿ ರಾಹುಲ್ ಚಾಹರ್ 32

ಡೇಗಾ ನಿಶ್ಚಲ್ ಸಿ ಚೇತನ್ ಬಿಷ್ಠ್ ಬಿ ದೀಪಕ್ ಚಾಹರ್ 06

ಕೆ.ವಿ. ಸಿದ್ಧಾರ್ಥ್ ಬ್ಯಾಟಿಂಗ್ 50

ಕರುಣ್ ನಾಯರ್ ಸಿ ಮತ್ತು ಬಿ ತನ್ವೀರ್ ಉಲ್ ಹಕ್ 04

ಮನೀಷ್ ಪಾಂಡೆ ಬಿ ತನ್ವೀರ್ ಉಲ್ ಹಕ್ 07

ಶ್ರೇಯಸ್ ಗೋಪಾಲ್ ಬ್ಯಾಟಿಂಗ್ 14

ಇತರೆ: 02

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT