ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

RCB IPL 2024 full schedule: ಆರ್‌ಸಿಬಿ ತಂಡದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

Published 26 ಮಾರ್ಚ್ 2024, 2:56 IST
Last Updated 26 ಮಾರ್ಚ್ 2024, 2:56 IST
ಅಕ್ಷರ ಗಾತ್ರ

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2024ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದೆ.

ಈ ಹಿಂದೆ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೊದಲ ಹಂತದ ವೇಳಾಪಟ್ಟಿ ಪ್ರಕಟಿಸಲಾಗಿತ್ತು. ಈಗ ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿರುವ ಬೆನ್ನಲ್ಲೇ ಐಪಿಎಲ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಬಿಡುಗಡೆಗೊಳಿಸಿದೆ.

ಮೇ 26ರಂದು ಫೈನಲ್...

ಫೈನಲ್ ಪಂದ್ಯ ಮೇ 26ರಂದು ಚೆನ್ನೈನಲ್ಲಿ ನಡೆಯಲಿದೆ. ಚಿಪಾಕ್‌ನಲ್ಲೇ ಮೇ 24ರಂದು ಎರಡನೇ ಕ್ವಾಲಿಫೈಯರ್‌ ಪಂದ್ಯ ನಿಗದಿಯಾಗಿದೆ. ಅಹಮದಾಬಾದ್‌ನಲ್ಲಿ ಮೊದಲ ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಪಂದ್ಯಗಳು ಅನುಕ್ರಮವಾಗಿ ಮೇ 21 ಹಾಗೂ 22ರಂದು ನಡೆಯಲಿವೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈಗಾಗಲೇ ಆಡಿರುವ ಎರಡು ಪಂದ್ಯಗಳಲ್ಲಿ ತಲಾ ಒಂದು ಗೆಲುವು ಹಾಗೂ ಸೋಲು ಕಂಡಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಳಾಪಟ್ಟಿ: (ದಿನಾಂಕ, ಯಾವ ತಂಡದ ವಿರುದ್ಧ, ತಾಣ)

 • ಮಾರ್ಚ್ 22: ಸಿಎಸ್‌ಕೆ ವಿರುದ್ಧ, ಚೆನ್ನೈ (ಚೆನ್ನೈಗೆ ಗೆಲುವು)

 • ಮಾರ್ಚ್ 25: ಪಂಜಾಬ್ ಕಿಂಗ್ಸ್ ವಿರುದ್ಧ, ಬೆಂಗಳೂರು (ಆರ್‌ಸಿಬಿಗೆ ಗೆಲುವು)

 • ಮಾರ್ಚ್ 29: ಕೆಕೆಆರ್ ವಿರುದ್ಧ, ಬೆಂಗಳೂರು

 • ಏಪ್ರಿಲ್ 02: ಲಖನೌ ವಿರುದ್ಧ, ಬೆಂಗಳೂರು

 • ಏಪ್ರಿಲ್ 06: ರಾಜಸ್ಥಾನ ವಿರುದ್ಧ, ಜೈಪುರ

 • ಏಪ್ರಿಲ್ 11: ಮುಂಬೈ ವಿರುದ್ಧ, ಮುಂಬೈ

 • ಏಪ್ರಿಲ್ 15: ಹೈದರಾಬಾದ್ ವಿರುದ್ಧ, ಬೆಂಗಳೂರು

 • ಏಪ್ರಿಲ್ 21: ಕೆಕೆಆರ್ ವಿರುದ್ಧ, ಕೋಲ್ಕತ್ತ

 • ಏಪ್ರಿಲ್ 25: ಹೈದರಾಬಾದ್ ವಿರುದ್ಧ, ಹೈದರಾಬಾದ್

 • ಏಪ್ರಿಲ್ 28: ಗುಜರಾತ್ ವಿರುದ್ಧ, ಅಹಮದಾಬಾದ್

 • ಮೇ 04: ಗುಜರಾತ್ ವಿರುದ್ಧ, ಬೆಂಗಳೂರು

 • ಮೇ 09: ಪಂಜಾಬ್ ವಿರುದ್ಧ, ಧರ್ಮಶಾಲಾ

 • ಮೇ 12: ಡೆಲ್ಲಿ ವಿರುದ್ಧ, ಬೆಂಗಳೂರು

 • ಮೇ 18: ಸಿಎಸ್‌ಕೆ ವಿರುದ್ಧ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT