ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್‌: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್ ಆಗಿ ಪಾಂಟಿಂಗ್ ಮುಂದುವರಿಕೆ?

Published 14 ಜೂನ್ 2023, 15:59 IST
Last Updated 14 ಜೂನ್ 2023, 15:59 IST
ಅಕ್ಷರ ಗಾತ್ರ

ನವದೆಹಲಿ: ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರನ್ನು ಐಪಿಎಲ್‌ನಲ್ಲಿ ಆಡುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್ ಆಗಿ ಮುಂದುವರಿಸುವ ಸಾಧ್ಯತೆ ಇದೆ.

ಈಚೆಗೆ ಮುಗಿದ 16ನೇ ಆವೃತ್ತಿಯ ಐಪಿಎಲ್‌ನಲ್ಲಿ ಡಲ್ಲಿ ತಂಡವು ಒಂಬತ್ತನೇ ಸ್ಥಾನ ಪಡೆದಿತ್ತು. ಅದರಿಂದಾಗಿ ಮುಖ್ಯ ಕೋಚ್ ಬದಲಾವಣೆಯಾಗುವ  ಮಾತುಗಳು ಕೇಳಿಬಂದಿದ್ದರು. ಆದರೆ ತಂಡದ ಸಹ ಮಾಲೀಕರಾದ ಪಾರ್ಥ್ ಜಿಂದಾಲ್ ಅವರು ಪಾಂಟಿಂಗ್ ಅವರನ್ನೇ ಮುಂದುವರಿಸುವ ಕುರಿತು ಸೂಚ್ಯವಾಗಿ ಹೇಳಿದ್ದಾರೆ.

‘ಮುಂದಿನ ವರ್ಷಗಳ ಐಪಿಎಲ್‌ಗಾಗಿ ಸಿದ್ಧತೆಗಳನ್ನು ಆರಂಭಿಸಿದ್ದೇವೆ. ಗಂಗೂಲಿ (ಸೌರವ್) ಮತ್ತು ರಿಕಿ ಪಾಂಟಿಂಗ್ ಅವರೊಂದಿಗೆ ನಾನು, ಕಿರಣ್ ಕೂಡ ತಂಡದ ಬೆಳವಣಿಗೆಗಾಗಿ ಅಪಾರ ಶ್ರಮವಹಿಸಿ ಕಾರ್ಯನಿರ್ವಹಿಸುತ್ತಿದ್ದೇವೆ. ಈ ಫ್ರ್ಯಾಂಚೈಸಿಯನ್ನು ಉನ್ನತಕ್ಕೇರಿಸಲು ಶ್ರಮಿಸುತ್ತಿದ್ದೇವೆ‘ ಎಂದೂ ಜಿಂದಾಲ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT