ಭಾನುವಾರ, ಜುಲೈ 3, 2022
24 °C
ಭಾರತ ತಂಡದ ಯುವ ವಿಕೆಟ್‌ ಕೀಪರ್‌ಗೆ ಗೌರವ

ರಿಷಭ್‌ ಪಂತ್‌ ‘ಐಸಿಸಿ ತಿಂಗಳ ಆಟಗಾರ’

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ದುಬೈ: ಭಾರತದ ವಿಕೆಟ್‌ ಕೀಪರ್ ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಮೊದಲ ಬಾರಿಗೆ ನೀಡುತ್ತಿರುವ ‘ತಿಂಗಳ ಆಟಗಾರ‘ ಗೌರವಕ್ಕೆ ‍ಪಾತ್ರರಾಗಿದ್ದಾರೆ. ಜನವರಿ ತಿಂಗಳಿನಲ್ಲಿ ಆಸ್ಟ್ರೇಲಿಯಾ ಎದುರು ನಡೆದ ಸರಣಿಯ ಎರಡು ಟೆಸ್ಟ್ ಪಂದ್ಯಗಳಲ್ಲಿ ಉತ್ತಮ ಸಾಮರ್ಥ್ಯ ತೋರಿದ್ದಕ್ಕಾಗಿ ಪಂತ್‌ ಅವರಿಗೆ ಈ ಗೌರವ ಸಂದಿದೆ.

ಪಂತ್‌ ಅವರು ಸಿಡ್ನಿ ಹಾಗೂ ಬ್ರಿಸ್ಬೇನ್‌ನಲ್ಲಿ ನಡೆದ ಟೆಸ್ಟ್ ಪಂದ್ಯಗಳಲ್ಲಿ ಕ್ರಮವಾಗಿ 97 ಮತ್ತು ಅಜೇಯ 89 ರನ್‌ ಸಿಡಿಸಿದ್ದರು. ಅವರ ಆಟದ ಬಲದಿಂದ ಭಾರತ 2–1ರಿಂದ ಆಸ್ಟ್ರೇಲಿಯಾವನ್ನು ಮಣಿಸಿ ಸರಣಿ ಗೆದ್ದುಕೊಂಡಿತ್ತು.

ಪ್ರಶಸ್ತಿ ಕುರಿತು ಪ್ರತಿಕ್ರಿಯಿಸಿರುವ ಪಂತ್‌, ‘ತಂಡದ ಗೆಲುವಿಗೆ ಕೊಡುಗೆ ನೀಡುವುದೇ ಆಟಗಾರನಿಗೆ ಸಲ್ಲುವ ಸೂಕ್ತ ಪ್ರಶಸ್ತಿ. ಇಂತಹ ಪ್ರಶಸ್ತಿಗಳು ನನ್ನಂತಹ ಯುವ ಆಟಗಾರರಿಗೆ ಇನ್ನಷ್ಟು ಸಾಧನೆ ಮಾಡಲು ಪ್ರೇರಣೆ ನೀಡುತ್ತವೆ. ಈ ಪ್ರಶಸ್ತಿಯನ್ನು ಭಾರತದ ಗೆಲುವಿನ ಪ್ರಮುಖ ಪಾತ್ರ ವಹಿಸಿದ ತಂಡದ ಎಲ್ಲ ಸದಸ್ಯರಿಗೆ ಅರ್ಪಿಸುತ್ತೇನೆ‘ ಎಂದಿದ್ದಾರೆ.

ದಕ್ಷಿಣ ಆಫ್ರಿಕಾದ ಶಬ್ನಿಮ್ ಇಸ್ಮಾಯಿಲ್ ಅವರು ಐಸಿಸಿಯ ‘ತಿಂಗಳ ಆಟಗಾರ್ತಿ‘ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಪಾಕಿಸ್ತಾನ ವಿರುದ್ಧ ನಡೆದ ಏಕದಿನ ಸರಣಿಯಲ್ಲಿ ಅವರು ಏಳು ವಿಕೆಟ್ ಗಳಿಸಿದ್ದರು. ಅದೇ ತಂಡದ ಎದುರು ನಡೆದಿದ್ದ ಟ್ವೆಂಟಿ–20 ಸರಣಿಯ ಎರಡನೇ ಪಂದ್ಯದಲ್ಲಿ ಐದು ವಿಕೆಟ್ ತಮ್ಮದಾಗಿಸಿಕೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು