ಶನಿವಾರ, ಅಕ್ಟೋಬರ್ 24, 2020
28 °C

ಡಿಡಿಸಿಎ ಚುನಾವಣೆ: ರೋಹನ್ ಜೇಟ್ಲಿ, ಗುಲಾಟಿ ನಾಮಪತ್ರ ಸಲ್ಲಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೇಂದ್ರ ಸರ್ಕಾರದ ಮಾಜಿ ಸಚಿವ ದಿವಂಗತ ಅರುಣ್ ಜೇಟ್ಲಿ ಅವರ ಮಗ ರೋಹನ್ ದೆಹಲಿ ಡಿಸ್ಟ್ರಿಕ್ಟ್ಸ್‌ ಕ್ರಿಕೆಟ್ ಸಂಸ್ಥೆ (ಡಿಡಿಸಿಎ) ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಸಂಸದ ಮತ್ತು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರ ಸೋದರಮಾವ ಪವನ್ ಗುಲಾಟಿ ಅವರು ಖಜಾಂಚಿ ಸ್ಥಾನದ ಆಕಾಂಕ್ಷಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ‌

ಬುಧವಾರ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿತ್ತು.  ಅರುಣ್ ಜೇಟ್ಲಿ ಅವರು ಹೋದ ವರ್ಷ ನಿಧನರಾಗಿದ್ದರು. ಕೆಲವು ವರ್ಷಗಳ ಹಿಂದೆ ಡಿಡಿಸಿಎ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಇದೀಗ ಅವರ ಹಾದಿಯಲ್ಲಿ ಮಗ ರೋಹನ್ ಇದ್ದಾರೆ.

‘ಇವತ್ತು ನಾಮಪತ್ರ ಸಲ್ಲಿಸಿದ್ದೇನೆ. ಡಿಡಿಸಿಎ ಸುಧಾರಣೆಗೆ ಕಾರ್ಯನಿರ್ವಹಿಸುವ ಗುರಿ ನನ್ನದು. ಈ ಸಂಸ್ಥೆಯ ಘನತೆಯನ್ನು ಮರಳಿ ಗಳಿಸಿಕೊಡುವುದು ನನ್ನ ಧ್ಯೇಯ. ಸದಸ್ಯರು ನನ್ನನ್ನು ಬೆಂಬಲಿಸುತ್ತಾರೆ’ ಎಂದು 31 ವರ್ಷದ ರೋಹನ್ ಭರವಸೆ ವ್ಯಕ್ತಪಡಿಸಿದರು.

ಈ ಮುಂಚೆ ಅಧ್ಯಕ್ಷಸ್ಥಾನದ ಸ್ಪರ್ಧಿಯಾಗಿದ್ದ ಸುನೀಲ್ ಗೋಯೆಲ್ ಅವರು ತಮ್ಮ ನಾಮಪತ್ರ ಮರಳಿ ಪಡೆದಿದ್ದಾರೆ. ಆದ್ದರಿಂದ ಈಗ ಕಣದಲ್ಲಿ ರೋಹನ್ ಒಬ್ಬರೇ ಉಳಿದಂತಾಗಿದೆ. ಅವರು ವೃತ್ತಿಯಿಂದ ವಕೀಲರಾಗಿದ್ದಾರೆ.

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ಪರ್ಧೆ ಇರುವುದು ಒಳ್ಳೆಯದು. ಉತ್ತಮ ವ್ಯಕ್ತಿಗಳನ್ನು ಆಡಳಿತಕ್ಕೆ ತರಲು ಇದು ಅವಶ್ಯಕ’ ಎಂದು ರೋಹನ್ ಹೇಳಿದ್ಧಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.