ಜನಾಂಗೀಯ ನಿಂದನೆ ಮಾಡಿದ ಸರ್ಫರಾಜ್

7

ಜನಾಂಗೀಯ ನಿಂದನೆ ಮಾಡಿದ ಸರ್ಫರಾಜ್

Published:
Updated:
Prajavani

ಡರ್ಬನ್‌ (ಪಿಟಿಐ): ದಕ್ಷಿಣ ಆಫ್ರಿಕಾ ಎದುರಿನ ಎರಡನೇ ಏಕದಿನ ಪಂದ್ಯದ ಸಂದರ್ಭದಲ್ಲಿ ಎದುರಾಳಿ ತಂಡದ ಆಟಗಾರನ ಜನಾಂ ಗೀಯ ನಿಂದನೆ ಮಾಡಿ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಸರ್ಫರಾಜ್ ಅಹಮ್ಮದ್ ವಿವಾದಕ್ಕೆ ಒಳಗಗಾಗಿದ್ದಾರೆ.

ಪಾಕಿಸ್ತಾನ ನೀಡಿದ ಗುರಿ ಬೆನ್ನ ತ್ತಿದ ಆತಿಥೇಯರ ಇನಿಂಗ್ಸ್‌ನ 37ನೇ ಓವರ್‌ನಲ್ಲಿ ಆ್ಯಂಡಿಲೆ ಪಿಶು ವಾಯೊ ಅವರ ಬಗ್ಗೆ ವಿಕೆಟ್ ಕೀಪರ್ ಕೂಡ ಆಗಿರುವ ಸರ್ಫರಾಜ್‌ ಆಡಿದ ಮಾತುಗಳು ಸ್ಟಂಪ್‌ಗೆ ಅಳವಡಿಸಿರುವ ಮೈಕ್‌ನಲ್ಲಿ ದಾಖಲಾಗಿವೆ.

ಪಿಶುವಾಯೊ ರನ್‌ಗಾಗಿ ಓಡು ತ್ತಿದ್ದಾಗ ಸರ್ಫರಾಜ್‌ ಉರ್ದುವಿನಲ್ಲಿ ‘ಅಬೆ ಕಾಲೆ...’ (ಏ ಕರಿಯಾ) ಎಂದು ನಿಂದಿಸಿರುವುದಾಗಿ ಕ್ರಿಕ್‌ ಇನ್ಫೊ ವೆಬ್‌ಸೈಟ್ ಸುದ್ದಿ ಮಾಡಿದೆ. ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಐದು ವಿಕೆಟ್‌ಗಳಿಂದ ಗೆದ್ದಿದೆ. ಪಿಶುವಾಯೊ ಅಜೇಯ 69 ರನ್ ಗಳಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !