ಗುರುವಾರ , ಜೂನ್ 17, 2021
27 °C

ಮಾಜಿ ಕ್ರಿಕೆಟರ್ ರಾಜೇಂದ್ರ ಜಡೇಜ ಕೋವಿಡ್‌ನಿಂದ ಸಾವು

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ರಾಜ್‌ಕೋಟ್‌: ಸೌರಾಷ್ಟ್ರದ ಮಾಜಿ ವೇಗದ ಬೌಲರ್ ಹಾಗೂ ಬಿಸಿಸಿಐ ಮ್ಯಾಚ್ ರೆಫರಿ ಆಗಿದ್ದ ರಾಜೇಂದ್ರ ಸಿನ್ಹ ಜಡೇಜ (66) ಕೋವಿಡ್‌ನಿಂದ ನಿಧನರಾಗಿದ್ದಾರೆ ಎಂದು ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ (ಎಸ್‌ಸಿಎ) ಭಾನುವಾರ ತಿಳಿಸಿದೆ. 

‘ರಾಜೇಂದ್ರ ಸಿನ್ಹ ಅವರ ಅಕಾಲಿಕ ಮರಣ ಎಲ್ಲರನ್ನು ದು:ಖದ ಕಡಲಿನಲ್ಲಿ ಮುಳುಗಿಸಿದೆ. ಸೌರಾಷ್ಟ್ರದ ಕ್ರಿಕೆಟ್ ಬೆಳವಣಿಗೆಯಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದಾರೆ. ಕೋವಿಡ್‌ ವಿರುದ್ಧ ಹೋರಾಡಿ ಭಾನುವಾರ ಬೆಳಿಗ್ಗೆ ಅವರು ಕೊನೆಯುಸಿರೆಳೆದರು’ ಎಂದು ಎಸ್‌ಸಿಎ ತಿಳಿಸಿದೆ.

1975ರಿಂದ 1987ರ ವರೆಗೆ ಕ್ರಿಕೆಟ್ ಆಡಿದ್ದ ಜಡೇಜ ಅತ್ಯುತ್ತಮ ಮಧ್ಯಮ ವೇಗಿಯಾಗಿದ್ದರು. ಆಲ್‌ರೌಂಡರ್ ಆಗಿಯೂ ಹೆಸರು ಮಾಡಿದ್ದಾರೆ. 50 ಪ್ರಥಮ ದರ್ಜೆ ಪಂದ್ಯ ಮತ್ತು 11 ಲಿಸ್ಟ್ ’ಎ‘  ಪಂದ್ಯಗಳನ್ನು ಆಡಿರುವ ಅವರು ಕ್ರಮವಾಗಿ 134 ಮತ್ತು 14 ವಿಕೆಟ್ ಉರುಳಿಸಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 1536 ರನ್ ಗಳಿಸಿರುವ ಆವರು ಲಿಸ್ಟ್‌ ‘ಎ’ಯಲ್ಲಿ 104 ರನ್ ಕಲೆ ಹಾಕಿದ್ದಾರೆ.

53 ಏಕದಿನ ಪಂದ್ಯಗಳಲ್ಲಿ, 18 ಲಿಸ್ಟ್ ಎ ಪಂದ್ಯಗಳಲ್ಲಿ ಮತ್ತು 34 ಟಿ20 ಪಂದ್ಯಗಳಲ್ಲಿ ರಾಜೇಂದ್ರ ಸಿನ್ಹ ರೆಫರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಆಯ್ಕೆ ಸಮಿತಿ ಮುಖ್ಯಸ್ಥ, ಕೋಚ್ ಮತ್ತು ತಂಡದ ಮ್ಯಾನೇಜರ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು