ಗುರುವಾರ , ನವೆಂಬರ್ 21, 2019
20 °C

ಧೋನಿ ಭವಿಷ್ಯದ ಕುರಿತು ಆಯ್ಕೆಗಾರರ ಅಭಿಪ್ರಾಯ ತಿಳಿಯುವೆ: ಗಂಗೂಲಿ

Published:
Updated:
Prajavani

ಕೋಲ್ಕತ್ತ: ‘ಭಾರತ ಕ್ರಿಕೆಟ್ ಅನುಭವಿ ಆಟಗಾರ ಮಹೇಂದ್ರಸಿಂಗ್ ಧೋನಿ ಅವರ ಭವಿಷ್ಯದ ಕುರಿತು ಕ್ರಿಕೆಟ್ ಆಯ್ಕೆ ಸಮಿತಿಯ ಸದಸ್ಯರು ಏನು ಹೇಳುತ್ತಾರೆಂದು ತಿಳಿದುಕೊಳ್ಳುತ್ತೇನೆ. ನಂತರ ನನ್ನ ಅಭಿಪ್ರಾಯ ತಿಳಿಸುತ್ತೇನೆ’ ಎಂದು ಬಿಸಿಸಿಐ ನಿಯೋಜಿತ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.

39 ಧೋನಿ ಅವರನ್ನು ಮುಂದಿನ ವರ್ಷದ ಟ್ವೆಂಟಿ 20 ವಿಶ್ವಕಪ್ ಟೂರ್ನಿಯಲ್ಲಿ ಕಣಕ್ಕಿಳಿಸುವ ಕುರಿತು ಇನ್ನೂ ನಿರ್ಧಾರವಾಗಿಲ್ಲ. ಅವರು ನಿವೃತ್ತಿ ಪಡೆಯಬೇಕು ಎಂಬ ಸಲಹೆಗಳೂ ಈಗಾಗಲೇ ಕೆಲವರಿಂದ ಬಂದಿವೆ.

‘ಅಕ್ಟೋಬರ್ 24ರಂದು ಆಯ್ಕೆ ಸಮಿತಿಯೊಂದಿಗಿನ ಸಭೆಯಲ್ಲಿ ಧೋನಿ ಭವಿಷ್ಯದ ಕುರಿತು ತಿಳಿದುಕೊಳ್ಳುತ್ತೇನೆ. ಇದೆಲ್ಲದರ ಜೊತೆಗೆ ಧೋನಿ ಅವರ ಮನದಲ್ಲೇನಿದೆ ಎಂಬುದನ್ನು ತಿಳಿದುಕೊಳ್ಳುವುದು ಸಹ ಮುಖ್ಯ. ಅವರೊಂದಿಗೂ ಚರ್ಚಿಸುತ್ತೇನೆ’ ಎಂದು ಗಂಗೂಲಿ ಸುದ್ದಿಗಾರರಿಗೆ ತಿಳಿಸಿದರು.

ಪ್ರತಿಕ್ರಿಯಿಸಿ (+)