ಇದಕ್ಕೆ ಮೊದಲು ಬ್ಯಾಟ್ ಮಾಡಲು ಕಳುಹಿಸಲ್ಪಟ್ಟ ಲಂಕಾ ಆರಂಭದಲ್ಲಿ ಅಲ್ಪಮೊತ್ತಕ್ಕೆ ಕುಸಿಯುವ ಅಪಾಯದಲ್ಲಿತ್ತು. ನಾಯಕ ಧನಂಜಯ ಡಿ ಸಿಲ್ವ ಮತ್ತು ಕಮಿಂದು ಮೆಂಡಿಸ್ ಆರನೇ ವಿಕೆಟ್‌ಗೆ 202 ರನ್ ಸೇರಿಸಿ ತಂಡಕ್ಕೆ ಆಸರೆಯಾದರು. ಲಂಚ್ ನಂತರ ಇವರಿಬ್ಬರದೇ ಆಟವಾಗಿತ್ತು. ಮೂರು ಸಿಕ್ಸರ್, 11 ಬೌಂಡರಿಗಳನ್ನು ಬಾರಿಸಿದ ಕಮಿಂದು ಅವರಿಗೆ ಇದು ಚೊಚ್ಚಲ ಶತಕ. ಧನಂಜಯ ಅವರ 12ನೇ ಶತಕದಲ್ಲಿ ಒಂದು ಸಿಕ್ಸರ್, 12 ಬೌಂಡರಿಗಳಿದ್ದವು.