ಬ್ರಿಸ್ಬೇನ್: ಇಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೆ ಮತ್ತು ಅಂತಿಮ ಟೆಸ್ಟ್ ಪಂದ್ಯದ ಎರಡನೇ ದಿನದ ಮೂರನೇ ಅವಧಿಯ ಆಟ ಮಳೆಗೆ ಆಹುತಿಯಾಗಿದೆ.

ಟೀ ವಿರಾಮದ ಸಂದರ್ಭ ಅಧಿಕ ಮಳೆ ಆರಂಭವಾಗಿದ್ದರಿಂದ ಪಂದ್ಯ ವಿಳಂಬವಾಯಿತು. ಮಳೆ ಆರಂಭವಾದ ಕೆಲವೇ ಸಮಯದಲ್ಲಿ ಮೈದಾನ ಕೆರೆಯಂತಾಗಿತ್ತು. ಮಳೆ ನಿಂತ ಬಳಿಕ ಅಂಪೈರ್‌ಗಳು ಮೈದಾನವನ್ನು ಪರೀಕ್ಷೆ ನಡೆಸಿದರು. ಮೈದಾನಹೆಚ್ಚು ಒದ್ದೆಯಾಗಿದ್ದರಿಂದ ಎರಡನೇ ದಿನಾದಾಟದ ಮೂರನೇ ಅವಧಿಯ ಪಂದ್ಯವನ್ನು ರದ್ದು ಮಾಡಿ ಆಟವನ್ನು ಕೊನೆಗೊಳಿಸಲಾಯಿತು.

ಇದಕ್ಕೂ ಮುನ್ನ, ಆಸ್ಟ್ರೇಲಿಯಾವನ್ನು 369 ರನ್‌ಗಳಿಗೆ ನಿಯಂತ್ರಿಸಿದ ಭಾರತ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿತು. ವೇಗವಾಗಿ ರನ್ ಗಳಿಸುತ್ತಿದ್ದ ರೋಹಿತ್ ಶರ್ಮಾ(44) ನಥನ್ ಲಯೋನ್‌ಗೆ ಮತ್ತು ಶುಭ್ಮನ್ ಗಿಲ್(7) ಪ್ಯಾಟ್ ಕಮಿನ್ಸ್‌ಗೆ ವಿಕೆಟ್ ಒಪ್ಪಿಸಿದರು. ಸದ್ಯ, ಭಾರತ 2 ವಿಕೆಟ್ ನಷ್ಟಕ್ಕೆ 62 ರನ್ ಗಳಿಸಿದ್ದು, ಅಜಿಂಕ್ಯ ರಹಾನೆ (8) ಮತ್ತು ಚೇತೇಶ್ವರ್ ಪೂಜಾರ (2) ಕ್ರೀಸ್‌ನಲ್ಲಿದ್ದಾರೆ.

ಮೊದಲ ಟೆಸ್ಟ್ ಪಂದ್ಯ ಆಡುತ್ತಿರುವ ವಾಷಿಂಗ್ಟನ್ ಸುಂದರ್ ಮತ್ತು ಶಾರ್ದೂಲ್ ಠಾಕೂರ್ ತಲಾ 3 ವಿಕೆಟ್ ಪಡೆದಿದ್ದು, ಇಂದಿನ ಪಂದ್ಯದ ವಿಶೇಷ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.