ಹರಾರೆ: ಜುಲೈ6 ರಿಂದ ಆರಂಭವಾಗಲಿರುವ ಐದು ಪಂದ್ಯಗಳ ಟಿ20 ಸರಣಿಗಾಗಿ ಎರಡನೇ ಹಂತದ ಆಟಗಾರರನ್ನು ಒಳಗೊಂಡ ಭಾರತ ತಂಡವು ಜಿಂಬಾಬ್ವೆ ಪ್ರವಾಸ ಕೈಗೊಳ್ಳಲಿದೆ ಎಂದು ಇಲ್ಲಿನ ಕ್ರಿಕೆಟ್ ಮಂಡಳಿ ಮಂಗಳವಾರ ಪ್ರಕಟಿಸಿದೆ.

ಅಮೆರಿಕ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ಟಿ20 ವಿಶ್ವಕಪ್ ಜೂನ್ 29ರಂದು ಮುಗಿದ ತಕ್ಷಣ ನಡೆಯಲಿರುವ ಈ ಸರಣಿಯಲ್ಲಿ ಭಾರತದ ಪ್ರಮುಖ ಆಟಗಾರರು ಭಾಗವಹಿಸುವ ಸಾಧ್ಯತೆಯಿಲ್ಲ. ಈ ಹಿಂದೆಯೂ, ಈ ದಕ್ಷಿಣ ಆಫ್ರಿಕಾ ರಾಷ್ಟ್ರದ ಪ್ರವಾಸಕ್ಕೆ ಪ್ರಮುಖ ಆಟಗಾರರು ಹೋಗುತ್ತಿರಲಿಲ್ಲ.

ಐದು ಪಂದ್ಯಗಳು ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಜುಲೈ 6, 7, 10, 13 ಮತ್ತು 14 ರಂದು ನಡೆಯಲಿವೆ.

‘ಭಾರತ ತಂಡ ಐದು ಟಿ20 ಪಂದ್ಯಗಳಿಗಾಗಿ ಜಿಂಬಾಬ್ವೆಯು ಆತಿಥ್ಯ ವಹಿಸಲಿದೆ ಎಂದು ಕ್ರಿಕೆಟ್ (ಝಡ್‌ಸಿ) ಮತ್ತು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಂಗಳವಾರ ಪ್ರಕಟಿಸಿವೆ’ ಎಂದು ಝಡ್‌ಸಿ ಹೇಳಿಕೆಯಲ್ಲಿ ತಿಳಿಸಿದೆ.

ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮಾತನಾಡಿ, ‘ಜಾಗತಿಕ ಕ್ರಿಕೆಟ್ ಸಮುದಾಯಕ್ಕೆ ಕೊಡುಗೆ ನೀಡುವಲ್ಲಿ ಬಿಸಿಸಿಐ ಯಾವಾಗಲೂ ಪ್ರಮುಖ ಪಾತ್ರ ವಹಿಸಿದೆ. ಇದು ಜಿಂಬಾಬ್ವೆಗೆ ಪುನರ್ನಿರ್ಮಾಣದ ಅವಧಿ ಮತ್ತು ಈ ಹಂತದಲ್ಲಿ ಜಿಂಬಾಬ್ವೆ ಕ್ರಿಕೆಟ್‌ಗೆ ನಮ್ಮ ಬೆಂಬಲ ಅಗತ್ಯವಿದೆ ಎಂಬುದನ್ನು ಅರ್ಥಮಾಡಿಕೊಂಡಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.