ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ICC World Cup 2023: ಬಾಂಗ್ಲಾ ಏಕದಿನ ಕ್ರಿಕೆಟ್‌‌ ತಂಡಕ್ಕೆ ಶಕೀಬ್‌ ಸಾರಥ್ಯ

Published 11 ಆಗಸ್ಟ್ 2023, 13:05 IST
Last Updated 11 ಆಗಸ್ಟ್ 2023, 13:05 IST
ಅಕ್ಷರ ಗಾತ್ರ

ಡಾಕಾ: ಅನುಭವಿ ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಅವರು ಮುಂಬರುವ ಏಷ್ಯಾ ಕಪ್‌ ಮತ್ತು ಏಕದಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಬಾಂಗ್ಲಾದೇಶ ತಂಡವನ್ನು ಮುನ್ನಡೆಸಲಿದ್ದಾರೆ.

ಈ ಎರಡು ಟೂರ್ನಿಗಳ ಹೊರತಾಗಿ ಬಾಂಗ್ಲಾ ತಂಡವು ಸೆಪ್ಟೆಂಬರ್‌ ಅಂತ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ ಸೀಮಿತ ಓವರ್‌ಗಳ ಸರಣಿಯನ್ನು ಆಡಲಿದೆ.

‘ಏಷ್ಯಾ ಕಪ್‌ ಮತ್ತು ವಿಶ್ವಕಪ್‌ ಟೂರ್ನಿಗೆ ಶಕೀಬ್‌ ಅವರನ್ನು ನಾಯಕರನ್ನು ಆಯ್ಕೆ ಮಾಡಿದ್ದೇವೆ. ಈ ಎರಡೂ ಟೂರ್ನಿಗೆ 17 ಸದಸ್ಯರ ತಂಡವನ್ನು ನಾಳೆ ಪ್ರಕಟಿಸಲಾಗುವುದು’ ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಅಧ್ಯಕ್ಷ ನಜ್ಮುಲ್ ಹಸನ್ ಹೇಳಿದ್ದಾರೆ.‌‌‌

ತಂಡವನ್ನು ಮುನ್ನಡೆಸುತ್ತಿದ್ದ ತಮೀಮ್ ಇಕ್ಬಾಲ್‌ ಅವರು ಬೆನ್ನುನೋವಿನ ಕಾರಣದಿಂದ ಏಷ್ಯಾ ಕಪ್‌ ಕ್ರಿಕೆಟ್‌ ಟೂರ್ನಿಯಿಂದ ದೂರ ಉಳಿದಿದ್ದಾರೆ. ಹೀಗಾಗಿ, ಜವಾಬ್ದಾರಿ 36 ವರ್ಷದ ಶಕೀಬ್‌ ಮೇಲೆ ಬಿದ್ದಿದೆ.

ಈ ಬೆಳವಣಿಗೆಯಿಂದಾಗಿ ಶಕೀಲ್‌ ಮೂರು ಮಾದರಿಯ ಪಂದ್ಯಗಳಲ್ಲಿ ಬಾಂಗ್ಲಾದೇಶ ತಂಡದ ನಾಯಕರಾಗಿದ್ದಾರೆ. ಕಳೆದ ವರ್ಷದಿಂದ ಅವರು ಟೆಸ್ಟ್ ಮತ್ತು T20 ತಂಡದ ನಾಯಕರಾಗಿದ್ದಾರೆ.

ಶಕೀಬ್‌ ಈ ಹಿಂದೆಯೂ ಏಕದಿನ ಪಂದ್ಯಗಳಲ್ಲಿ ಬಾಂಗ್ಲಾ ತಂಡದ ನಾಯಕರಾಗಿ ಕಾರ್ಯ ನಿರ್ವಹಿಸಿದ್ದರು. 2017ರ ಮೇ 12ರಂದು ಐರ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಕೊನೆಯ ಬಾರಿ ತಂಡವನ್ನು ಮುನ್ನಡೆಸಿದ್ದರು. ಆ ಪಂದ್ಯವು ಫಲಿತಾಂಶವಿಲ್ಲದೆ ಕೊನೆಗೊಂಡಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT