ಶಿವು ಅಜೇಯ 416 ರನ್ ಸಾಧನೆ

ಬೆಂಗಳೂರು: ಶಿವು ಎಂ. ಗಳಿಸಿದ ಅಜೇಯ 416 ರನ್‌ಗಳ ಬಲದಿಂದ ಗಿರಿಧನ್ವ ಸ್ಕೂಲ್ ತಂಡವು ಬಿಟಿಆರ್ ಶೀಲ್ಡ್ 14 ವರ್ಷದೊಳಗಿನವರ ಒಂದನೇ ಗುಂಪು ಎರಡನೇ ಡಿವಿಷನ್ ಕ್ರಿಕೆಟ್ ಟೂರ್ನಿಯಲ್ಲಿ ಭರ್ಜರಿ ಜಯ ಸಾಧಿಸಿತು.
ಇಲ್ಲಿ ನಡೆದ ಪಂದ್ಯದಲ್ಲಿ ಗಿರಿಧನ್ವ 414 ರನ್‌ಗಳಿಂದ ಜೈನ್ ಇಂಟರ್‌ನ್ಯಾಷನಲ್ ರೆಸಿಡೆನ್ಸಿಯಲ್ ಸ್ಕೂಲ್ ತಂಡದ ವಿರುದ್ಧ ಗೆದ್ದಿತು. ಮೊದಲು ಬ್ಯಾಟ್ ಮಾಡಿದ ಗಿರಿಧನ್ವ ತಂಡವು 40 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 595 ರನ್ ಗಳಿಸಿತು. 197 ಎಸೆತಗಳಲ್ಲಿ ಎದುರಿಸಿದ ಶಿವು 86 ಬೌಂಡರಿ ಮತ್ತು ಒಂದು ಸಿಕ್ಸರ್ ಸಿಡಿಸಿದರು. ಗುರಿ ಬೆನ್ನತ್ತಿದ ಜೈನ್ ಸ್ಕೂಲ್ ತಂಡ 40.3 ಓವರ್‌ಗಳಲ್ಲಿ 181 ರನ್‌ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡು ಸೋಲನುಭವಿಸಿತು.
ಸಂಕ್ಷಿಪ್ತ ಸ್ಕೋರ್: ಗಿರಿಧನ್ವ ಸ್ಕೂಲ್: 50 ಓವರ್‌ಗಳಲ್ಲಿ 4 ವಿಕೆಟ್‌ಗೆ 595 (ಆದಿತ್ಯ ಮಯೂರ್ 60, ಶಿವು ಎಂ. ಔಟಾಗದೆ 416; ಮೆಹಿತ್ ಕನುಂಗಾ 137ಕ್ಕೆ 2). ಜೈನ್ ಇಂಟರ್‌ನ್ಯಾಷನಲ್ ರೆಸಿಡೆನ್ಸಿಯಲ್ ಸ್ಕೂಲ್: 40.3 ಓವರ್‌ಗಳಲ್ಲಿ 181 (ಧೈರ್ಯ ಗಬಾನಿ 21, ಸ್ವರೂಪ್ ಜೈನ್ 28, ಚೆದಾ ದೇವ್ ಜಿಗರ್ 49; ಗಗನ್ ಸಾಯಿ ಕೆ. 33ಕ್ಕೆ 3, ರೋಹಿತ್ ಸಾಯಿ ಕೇಟಿರೆಡ್ಡಿ
38ಕ್ಕೆ 3).
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.