ಮಂಗಳವಾರ, ಫೆಬ್ರವರಿ 25, 2020
19 °C

ಗಿಲ್‌ ದ್ವಿಶತಕ: ಸೋಲಿನಿಂದ ಪಾರಾದ ಭಾರತ ‘ಎ’’

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕ್ರೈಸ್ಟ್‌ಚರ್ಚ್‌: ಭಾರತ ಟೆಸ್ಟ್‌ ತಂಡದಲ್ಲಿ ಮರಳಿ ಸ್ಥಾನ ಪಡೆಯಲು ಹವಣಿಸುತ್ತಿರುವ ಶುಭಮನ್‌ ಗಿಲ್‌ ಶುಕ್ರವಾರ ರಾತ್ರಿ ಭರ್ಜರಿ ದ್ವಿಶತಕ (ಔಟಾಗದೆ 204) ಬಾರಿಸಿದರು. ಅವರ ಬ್ಯಾಟಿಂಗ್‌ ಬಲದಿಂದ ಭಾರತ ‘ಎ’ ತಂಡ ನ್ಯೂಜಿಲೆಂಡ್‌ ‘ಎ’ ವಿರುದ್ಧದ ಎರಡನೇ, ನಾಲ್ಕು ದಿನಗಳ ‘ಟೆಸ್ಟ್‌’ ಪಂದ್ಯವನ್ನು ಡ್ರಾ ಮಾಡಿಕೊಂಡಿತು.

ಹೆಗ್ಲೆ ಓವಲ್‌ ಮೈದಾನದಲ್ಲಿ ಎರಡು ವಿಕೆಟ್‌ಗೆ 127 ರನ್‌ನಿಂದ ನಾಲ್ಕನೇ ದಿನದ ಆಟ ಆರಂಭಿಸಿದ ಹನುಮ ವಿಹಾರಿ ನೇತೃತ್ವದ ಭಾರತ ‘ಎ’, ಎರಡನೇ ಇನಿಂಗ್ಸ್‌ನಲ್ಲಿ ಕೇವಲ 3 ವಿಕೆಟ್‌ ಕಳೆದುಕೊಂಡು 448 ರನ್‌ ಪೇರಿಸಿತು. 

ಗಿಲ್‌ ಹಾಗೂ ವಿಹಾರಿ ( ಔಟಾಗದೆ 100, 113 ಎಸೆತ, 11 ಬೌಂಡರಿ, 3 ಸಿಕ್ಸರ್‌ ) ಮುರಿಯದ ನಾಲ್ಕನೇ ವಿಕೆಟ್‌ ಜೊತೆಯಾಟದಲ್ಲಿ 222 ರನ್‌ ಕಲೆಹಾಕಿದರು. ಪ್ರಿಯಾಂಕ್‌ ಪಾಂಚಾಲ್‌ ಕೂಡ ಶತಕದ (115, 164 ಎಸೆತ) ಕೊಡುಗೆ ನೀಡಿದರು.

ಸೊಗಸಾದ ಬ್ಯಾಟಿಂಗ್‌ ಮಾಡಿದ ಗಿಲ್‌ ಅವರ 279 ಎಸೆತಗಳ ಆಟದಲ್ಲಿ 22 ಬೌಂಡರಿ, ನಾಲ್ಕು ಸಿಕ್ಸರ್‌ ಇದ್ದವು. 

ಬ್ಯಾಟಿಂಗ್‌ ಕಷ್ಟಕರವಾಗಿದ್ದ ಪಿಚ್‌ನಲ್ಲಿ ಭಾರತ ‘ಎ’ ತಂಡದ ಪ್ರದರ್ಶನ ಗಮನಸೆಳೆಯಿತು. ಮೊದಲ ಇನಿಂಗ್ಸ್‌ನಲ್ಲಿ ವಿಹಾರಿ ಬಳಗ 216 ರನ್‌ ಗಳಿಸಿತ್ತು. ಉತ್ತರವಾಗಿ ನ್ಯೂಜಿಲೆಂಡ್‌ ‘ಎ’ ತಂಡ, ಏಳು ವಿಕೆಟ್‌ಗೆ 562 ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡಿತ್ತು.

ಸಂಕ್ಷಿಪ್ತ ಸ್ಕೋರ್‌: ಭಾರತ ‘ಎ’ ಮೊದಲ ಇನಿಂಗ್ಸ್ 216 ಮತ್ತು 101.1 ಓವರ್‌ಗಳಲ್ಲಿ 3 ವಿಕೆಟ್‌ಗೆ 448 (ಶುಭಮನ್‌ ಗಿಲ್‌ ಔಟಾಗದೆ 204, ಹನುಮ ವಿಹಾರಿ ಔಟಾಗದೆ 100, ಪ್ರಿಯಾಂಕ್ ಪಾಂಚಾಲ್‌ 115; ಅಜಾಜ್‌ ಪಟೇಲ್‌ 145ಕ್ಕೆ 2). ನ್ಯೂಜಿಲೆಂಡ್‌ ‘ಎ’ ಮೊದಲ ಇನಿಂಗ್ಸ್ 7 ವಿಕೆಟ್‌ಗೆ 562. ಫಲಿತಾಂಶ: ಪಂದ್ಯ ಡ್ರಾ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು