ಅಡಿಲೇಡ್: ಭಾನುವಾರ ಮುಕ್ತಾಯಗೊಂಡ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯದ ವೇಳೆ ಕ್ರೀಡಾಂಗಣದಲ್ಲಿ ವಾಗ್ವಾದ ನಡೆಸಿದ್ದಕ್ಕೆ ಭಾರತದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರಿಗೆ ಐಸಿಸಿಯು ಪಂದ್ಯ ಶುಲ್ಕದ ಶೇ 20ರಷ್ಟು ದಂಡ ವಿಧಿಸಲಾಗಿದೆ. ಆಸ್ಟ್ರೇಲಿಯಾ ಬ್ಯಾಟರ್ ಟ್ರಾವಿಸ್ ಹೆಡ್ ಅವರಿಗೂ ಎಚ್ಚರಿಕೆ ನೀಡಲಾಗಿದೆ.

ಐಸಿಸಿಯ ನೀತಿಸಂಹಿತೆ ಉಲ್ಲಂಘಿಸಿದ್ದ ಕಾರಣ ಸೋಮವಾರ ಈ ಇಬ್ಬರ ವಿಚಾರಣೆ ನಡೆಯಿತು. ‘ಆಟಗಾರರಿಗೆ ಮತ್ತು ಆಟಗಾರರ ನೆರವು ಸಿಬ್ಬಂದಿಗೆ ಇರುವ ನೀತಿಸಂಹಿತೆಯ ವಿಧಿ 2.5ರ ಉಲ್ಲಂಘನೆ ಮಾಡಿದ್ದಕ್ಕೆ ಸಿರಾಜ್ ಅವರಿಗೆ ಪಂದ್ಯ ಶುಲ್ಕದ ಶೇ 20 ದಂಡ ವಿಧಿಸಲಾಗಿದೆ’ ಎಂದು ಐಸಿಸಿ ಹೇಳಿಕೆಯಲ್ಲಿ ತಿಳಿಸಿದೆ. ಈ ವಿಧಿಯು ಎದುರಾಳಿಯನ್ನು ಪ್ರಚೋದಿಸುವ ರೀತಿಯಲ್ಲಿರುವ ಭಾಷೆ, ಸನ್ನೆಗೆ ಸಂಬಂಧಿಸಿದೆ.

ಹೆಡ್ ಅವರು ವಿಧಿ 2.13 ಉಲ್ಲಂಘನೆ ಆಡಿದ್ದಾರೆ ಎಂದು ಐಸಿಸಿ ಹೇಳಿದ್ದು ಅವರಿಗೆ ಎಚ್ಚರಿಕೆ ಮಾತ್ರ ನೀಡಿದೆ. ಅವರು ದಂಡದಿಂದ ತಪ್ಪಿಸಿಕೊಂಡಿದ್ದಾರೆ.

ಇಬ್ಬರಿಗೂ ಶಿಸ್ತು ದಾಖಲೆಯ ಕಡತದಲ್ಲಿ ಒಂದೊಂದು ಡಿಮೆರಿಟ್ ಪಾಯಿಂಟ್ ಸೇರಿಸಲಾಗಿದೆ. ಇದು ಇಬ್ಬರಿಗೂ 24 ತಿಂಗಳಲ್ಲಿ ಮೊದಲನೆಯ ಡಿಮೆರಿಟ್ ಪಾಯಿಂಟ್ ಆಗಿದೆ.

ಇಬ್ಬರೂ ತಪ್ಪು ಒಪ್ಪಿಕೊಂಡಿದ್ದಾರೆ ಎಂದು ಐಸಿಸಿ ತಿಳಿಸಿದೆ.

ಪಂದ್ಯದ ಎರಡನೇ ದಿನ ಹೆಡ್ (140, 141ಎ), ಸಿರಾಜ್ ಬೌಲಿಂಗ್ನಲ್ಲಿ ಬೌಲ್ಡ್ ಔಟ್ ಆಗಿ ನಿರ್ಗಮಿಸುವಾಗ ಪರಿಸ್ಥಿತಿ ಕಾವೇರಿತ್ತು. ಸಿರಾಜ್ ಎದುರಾಳಿ ಬ್ಯಾಟರ್ಗೆ ಸೆಂಡ್ಆಫ್ ನೀಡಿದ ರೀತಿ ಅಕ್ರಮಣದ ರೀತಿಯಲ್ಲಿತ್ತು. ಹೆಡ್ ಬಳಸಿದ ಭಾಷೆಗೆ ಪ್ರತಿಯಾಗಿ ಸಿರಾಜ್ ಕೂಡ ಎದುರು ಆಡಿದ್ದರು. ಪ್ರೇಕ್ಷಕರು ಸಿರಾಜ್ ವಿರುದ್ಧ ಕೂಗೆಬ್ಬಿಸಿದ್ದರು. ‘ನಾನು ವೆಲ್ ಬೌಲ್ಡ್’ ಎಂದಷ್ಟೇ ಹೇಳಿದ್ದೆ’ ಎಂದು ಹೆಡ್ ಸ್ಪಷ್ಟೀಕರಣ ನೀಡಿದ್ದರು. ಆದರೆ ಟಿವಿ ವಾಹಿನಿ ಮುಂದೆ ಮಾತನಾಡಿದ ವೇಳೆ ಇದನ್ನು ನಿರಾಕರಿಸಿದ್ದ ಸಿರಾಜ್, ‘ಅವರು ಹಾಗೆ ಹೇಳಿಲ್ಲ. ನನ್ನನ್ನು ನಿಂದಿಸಿದ್ದರು. ಹೀಗಾಗಿ ನಾನೂ ಎದುರಾಡಿದ್ದೆ’ ಎಂದು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.