ಸೋಮವಾರ, ಡಿಸೆಂಬರ್ 6, 2021
23 °C

ಮೆಂಡಿಸ್ ದಾಳಿಗೆ ತತ್ತರಿಸಿದ ವಿಂಡೀಸ್: ಟೆಸ್ಟ್‌ನಲ್ಲಿ ಶ್ರೀಲಂಕಾ ತಂಡಕ್ಕೆ ಜಯ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಗಾಲ್: ರಮೇಶ್ ಮೆಂಡಿಸ್ (67ಕ್ಕೆ5) ಮತ್ತು ಲಸಿತ್ ಎಂಬುಲ್ದೆನಿಯಾ (43ಕ್ಕೆ4) ಬೌಲಿಂಗ್ ಬಲದಿಂದ ಶ್ರೀಲಂಕಾ ತಂಡವು ಗುರುವಾರ ಮುಕ್ತಾಯವಾದ ಟೆಸ್ಟ್‌ನಲ್ಲಿ ವೆಸ್ಟ್ ಇಂಡೀಸ್ ಎದುರು 187 ರನ್‌ಗಳಿಂದ ಜಯಿಸಿತು.

348 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ ವಿಂಡೀಸ್ ತಂಡವು 79 ಓವರ್‌ಗಳಲ್ಲಿ 160 ರನ್ ಗಳಿಸಿ ಆಲೌಟ್ ಆಯಿತು. ಮೂರು ಟೆಸ್ಟ್‌ಗಳ ಸರಣಿಯಲ್ಲಿ ಶ್ರೀಲಂಕಾ 1–0 ಮುನ್ನಡೆ ಸಾಧಿಸಿತು. ಮೊದಲ ಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು. ಇನ್ನೊಂದು ಪಂದ್ಯ ಬಾಕಿಯಿದೆ.

ಸಂಕ್ಷಿಪ್ತ ಸ್ಕೋರು
ಮೊದಲ ಇನಿಂಗ್ಸ್:
ಶ್ರೀಲಂಕಾ 133.5 ಓವರ್‌ಗಳಲ್ಲಿ 386. ವೆಸ್ಟ್ ಇಂಡೀಸ್: 85.5 ಓವರ್‌ಗಳಲ್ಲಿ 230, ಎರಡನೇ ಇನಿಂಗ್ಸ್: 40.5 ಓವರ್‌ಗಳಲ್ಲಿ 4ಕ್ಕೆ 191 ಡಿಕ್ಲೆರ್ಡ್
ವೆಸ್ಟ್ ಇಂಡೀಸ್: 79 ಓವರ್‌ಗಳಲ್ಲಿ 160 (ಎನ್‌ಕ್ರುಮಾ ಬಾನರ್ ಔಟಾಗದೆ 68, ಜೋಶುವಾ 54, ರಮೇಶ್ ಮೆಂಡಿಸ್ 67ಕ್ಕೆ5, ಲಸಿತ್ ಎಂಬುಲ್ದೆನಿಯಾ 43ಕ್ಕೆ4)
ಫಲಿತಾಂಶ: ಶ್ರೀಲಂಕಾ ತಂಡಕ್ಕೆ 187 ರನ್‌ಗಳ ಜಯ. ಸರಣಿಯಲ್ಲಿ 1–0 ಮುನ್ನಡೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು