ಸೋಮವಾರ, ಅಕ್ಟೋಬರ್ 14, 2019
22 °C
ಶ್ರೀಲಂಕಾ, ಪಾಕ್‌ ವಿರುದ್ಧ ಸರಣಿ

ಟಿ–20 ತಂಡಕ್ಕೆ ಮರಳಿದ ಸ್ಮಿತ್– ವಾರ್ನರ್

Published:
Updated:

ಸಿಡ್ನಿ: ಸ್ಟೀವ್‌ ಸ್ಮಿತ್ ಮತ್ತು ಡೇವಿಡ್‌ ವಾರ್ನರ್‌ ಅವರು, ಶ್ರೀಲಂಕಾ ಮತ್ತು ಪಾಕಿಸ್ತಾನ ವಿರುದ್ಧ ಟಿ–20 ಪಂದ್ಯಗಳನ್ನಾಡಲಿರುವ ಆಸ್ಟ್ರೇಲಿಯಾ ತಂಡಕ್ಕೆ ಮರಳಿದ್ದಾರೆ. ಆಸ್ಟ್ರೇಲಿಯದಲ್ಲೇ ಮುಂದಿನ ವರ್ಷದ ಅಕ್ಟೋಬರ್–ನವೆಂಬರ್‌ನಲ್ಲಿ ನಡೆಯಲಿರುವ ಟಿ–20 ವಿಶ್ವಕಪ್‌ಅನ್ನು ದೃಷ್ಟಿಯಲ್ಲಿಟ್ಟುಕೊಂಡು ಇವರಿಬ್ಬರಿಗೆ ಅವಕಾಶ ನೀಡಲಾಗಿದೆ.

ಚೆಂಡು ವಿರೂಪ ಪ್ರಕರಣಕ್ಕೆ ಸಂಬಂಧಿಸಿ ಒಂದು ವರ್ಷದ ನಿಷೇಧ ಅನುಭವಿಸಿದ್ದ ಈ ತಾರಾ ವರ್ಚಸ್ಸಿನ ಆಟಗಾರರು ಟೆಸ್ಟ್‌, ಏಕದಿನ ತಂಡಕ್ಕೆ ಪುನರಾಗಮನ ಮಾಡಿದ ಬಳಿಕ ಇದೀಗ ಟಿ–20ಗೂ ಮರಳಿದ್ದಾರೆ. 14 ಮಂದಿಯ ತಂಡಕ್ಕೆ ಆ್ಯರನ್‌ ಫಿಂಚ್‌ ನಾಯಕರಾಗಿದ್ದಾರೆ. ವಿಕೆಟ್‌ ಕೀಪರ್ ಅಲೆಕ್ಸ್‌ ಕ್ಯಾರಿ ಮತ್ತು ಪ್ಯಾಟ್‌ ಕುಮಿನ್ಸ್‌ ಉಪನಾಯಕರಾಗಿದ್ದಾರೆ.

ಶ್ರೀಲಂಕಾ ವಿರುದ್ಧ ಮೂರು ಪಂದ್ಯಗಳ ಸರಣಿ ಅಕ್ಟೋಬರ್‌ 27ರಂದು ಅಡಿಲೇಡ್‌ನಲ್ಲಿ ಆರಂಭವಾಗಲಿದೆ. ಪಾಕಿಸ್ತಾನ ವಿರುದ್ಧ ಮೂರು ಪಂದ್ಯಗಳ ಇನ್ನೊಂದು ಸರಣಿ ಸಿಡ್ನಿಯಲ್ಲಿ ಆರಂಭವಾಗಲಿದೆ.

‘ಟಿ–20 ಅಂತರರಾಷ್ಟ್ರೀಯ ತಂಡಕ್ಕೆ ಸ್ಮಿತ್ ಮತ್ತು ವಾರ್ನರ್‌ ಅವರನ್ನು ಸ್ವಾಗತಿಸಲು ಖುಷಿಪಡುತ್ತಿದ್ದೇವೆ’ ಎಂದು ಮುಖ್ಯ ಆಯ್ಕೆಗಾರ ಟ್ರೆವರ್‌ ಹಾರ್ನ್ಸ್‌ ತಿಳಿಸಿದ್ದಾರೆ.

ಆಸ್ಟ್ರೇಲಿಯಾ ಇತರ ಮಾದರಿಯಲ್ಲಿ ಹೆಚ್ಚು ಯಶಸ್ಸು ಗಳಿಸಿದ್ದರೂ, ಟಿ–20 ವಿಶ್ವಕಪ್‌ ಒಮ್ಮೆಯೂ ಗೆದ್ದುಕೊಂಡಿಲ್ಲ. 2010ರಲ್ಲಿ ಫೈನಲ್‌ ತಲುಪಿದ್ದೇ ಇದುವರೆಗಿನ ಉತ್ತಮ ಸಾಧನೆ.

‌ತಂಡ ಇಂತಿದೆ: ಆ್ಯರನ್‌ ಫಿಂಚ್‌ (ನಾಯಕ), ಆ್ಯಷ್ಟನ್‌ ಅಗರ್‌, ಅಲೆಕ್ಸ್‌ ಕ್ಯಾರಿ, ಪ್ಯಾಟ್‌ ಕುಮಿನ್ಸ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಬೆನ್‌ ಮೆಕ್‌ಡೆರ್ಮಾಟ್, ಕೇನ್ ರಿಚರ್ಡ್‌ಸನ್‌, ಸ್ಟೀವ್‌ ಸ್ಮಿತ್‌, ಬಿಲಿ ಸ್ಟಾನ್‌ಲೇಕ್‌, ಮಿಚೆಲ್‌ ಸ್ಟಾರ್ಕ್, ಆ್ಯಷ್ಟನ್‌ ಟರ್ನರ್‌, ಆ್ಯಂಡ್ರೂ ಟೈ, ಡೇವಿಡ್‌ ವಾರ್ನರ್‌ ಮತ್ತು ಆ್ಯಢಂ ಝಂಪಾ.

Post Comments (+)