ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇಗದ ಅರ್ಧ ಶತಕ ಸಿಡಿಸಿ ದಾಖಲೆ ಬರೆದ ಸ್ಮತಿ ಮಂದಾನ

Last Updated 30 ಜುಲೈ 2018, 4:18 IST
ಅಕ್ಷರ ಗಾತ್ರ

ಟೌನ್ಟನ್: ಇಂಗ್ಲೆಂಡ್ ನ ಟೌನ್ಟನ್ ನಲ್ಲಿ ಭಾನುವಾರ ನಡೆದ ಕೆಐಎಸೂಪರ್ ಲೀಗ್ (ಕೆಎಸ್‍ಎಲ್) ಟಿ20 ಪಂದ್ಯದಲ್ಲಿ ಭಾರತದ ಸ್ಮೃತಿ ಮಂದಾನ ವೇಗದ ಅರ್ಧ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ.
ವೆಸ್ಟರ್ನ್ ಸ್ಟೋಮ್ ತಂಡದ ಪರವಾಗಿ ಆಡುತ್ತಿರುವ ಸ್ಮೃತಿ 18 ಬಾಲ್‍ಗಳಲ್ಲಿ ಅರ್ಧ ಶತಕ ಸಿಡಿಸಿದ್ದಾರೆ.5 ಬೌಂಡರಿ ಮತ್ತು 4 ಸಿಕ್ಸರ್ ಹೊಡೆದ ಇವರು 19 ಬಾಲ್‍ಗಳಲ್ಲಿ 52 ರನ್ ಗಳಿಸಿ ಅಜೇಯರಾಗಿ ಉಳಿದರು.

ಸ್ಮೃತಿಯ ಹೊಡೆ ಬಡಿ ಬ್ಯಾಟಿಂಗ್ ಸಹಾಯದಿಂದ ವೆಸ್ಟರ್ನ್ ಸ್ಟೋಮ್ ತಂಡ ಲಾಘ್ಬೊರಫ್ ಲೈಟನಿಂಗ್ ವಿರುದ್ಧ ಗೆಲುವು ಸಾಧಿಸಿತು.

ಮೊದಲಿಗೆ ಬ್ಯಾಟಿಂಗ್ ಮಾಡಿದ ವೆಸ್ಟರ್ನ್ ಸ್ಟೋಮ್ 2 ವಿಕೆಟ್ ಕಳೆದು ಕೊಂಡು 85 ರನ್ ಕಲೆ ಹಾಕಿತ್ತು.ಈ ಗುರಿಯನ್ನು ಬೆನ್ನಟ್ಟಿದ ಲಾಘ್ಬೊರಫ್ ಲೈಟನಿಂಗ್ ತಂಡಕ್ಕೆ ನಿಗದಿತ ಓವರ್‍ ನಲ್ಲಿ ವಿಕೆಟ್ ನಷ್ಟವಿಲ್ಲದೆ 67 ರನ್ ಗಳನ್ನಷ್ಚೇ ಗಳಿಸಲು ಸಾಧ್ಯವಾಯಿತು.

ಮಹಿಳೆಯರ ಟಿ20 ಕ್ರಿಕೆಟ್‍ನಲ್ಲಿ ವೇಗದ ಅರ್ಧ ಶತಕ ಸಿಡಿಸಿದ ದಾಖಲೆ ನ್ಯೂಜಿಲೆಂಡ್‍ನ ಸೋಫಿ ಡೆವಿನ್ಹೆಸರಲ್ಲಿದೆ. ಇದೀಗ ಸ್ಮೃತಿ ಮಂದಾನ, ಸೋಫಿ ಜತೆ ಸರಿ ಸಮಾನ ದಾಖಲೆ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT