ಕೆಐಎ ಸೂಪರ್ ಲೀಗ್‌‍ನಲ್ಲಿ ಶತಕ ಬಾರಿಸಿ ಮಿಂಚಿದ ಸ್ಮೃತಿ ಮಂದಾನ

7

ಕೆಐಎ ಸೂಪರ್ ಲೀಗ್‌‍ನಲ್ಲಿ ಶತಕ ಬಾರಿಸಿ ಮಿಂಚಿದ ಸ್ಮೃತಿ ಮಂದಾನ

Published:
Updated:

ಟೌನ್ಟನ್: ಇಂಗ್ಲೆಂಡ್‍ನ ಟೌನ್ಟನ್‍ನಲ್ಲಿ ನಡೆಯುತ್ತಿರುವ ಕೆಐಎ ಸೂಪರ್ ಲೀಗ್ (ಕೆಎಸ್‍ಎಲ್) ಟಿ20 ಪಂದ್ಯದಲ್ಲಿ ಭಾರತದ ಸ್ಮೃತಿ ಮಂದಾನ 61 ಎಸೆತದಲ್ಲಿ 102 ರನ್ ಗಳಿಸಿದ್ದಾರೆ. ಸ್ಮೃತಿ ಅವರ ಅಬ್ಬರದ ಬ್ಯಾಟಿಂಗ್ ಸಹಾಯದಿಂದ ವೆಸ್ಟರ್ನ್ ಸ್ಟೋಮ್ ತಂಡ ಲಂಕಾಷೈರ್ ಥಂಡರ್ ತಂಡವನ್ನು ಏಳು ವಿಕೆಟ್‍ನಿಂದ ಪರಾಭವಗೊಳಿಸಿದೆ.

ಟಾಸ್ ಸೋತು ಬ್ಯಾಟಿಂಗ್‍ಗಿಳಿದ ಲಂಕಾಷೈರ್ ಥಂಡರ್ ತಂಡ ನಿಗದಿತ 20 ಓವರ್‍‍ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು 153 ರನ್ ಗಳಿಸಿತ್ತು. ಲಂಕಾಷೈರ್ ತಂಡದಲ್ಲಿನ ಭಾರತೀಯ ಆಟಗಾರ್ತಿ ಹರ್ಮನ್  ಪ್ರೀತ್ ಕೌರ್ ಯಾವುದೇ ರನ್ ಗಳಿಸದೆ ನಿರಾಸೆ ಮೂಡಿಸಿದರು.

154 ರನ್ ಗುರಿ ಬೆನ್ನತ್ತಿದ ವೆಸ್ಟರ್ನ್ ಸ್ಟೋಮ್ ತಂಡದ ಸ್ಮೃತಿ 61 ಎಸೆತಗಳಲ್ಲಿ  12 ಬೌಂಡರಿ ಮತ್ತು 4 ಸಿಕ್ಸರ್ ಬಾರಿಸಿ 102 ರನ್ ಗಳಿಸಿದ್ದಾರೆ. ತಮ್ಮ ತಂಡವನ್ನು ಗೆಲುವಿನ ದಡ ಸೇರಿಸಿದ ಸ್ಮೃತಿ 102ನೇ ರನ್ ಬಾರಿಸಿ ಔಟ್ ಆಗಿದ್ದಾರೆ.
ಕೆಐಎ ಸೂಪರ್ ಲೀಗ್ ಪಂದ್ಯದಲ್ಲಿ ಮಿಂಚುತ್ತಿರುವ ಮಂದಾನ, ಕಳೆದ ನಾಲ್ಕು ಇನ್ನಿಂಗ್ಸ್ ನಲ್ಲಿಯೂ ಉತ್ತಮ ಪ್ರದರ್ಶನ ನೀಡಿದ್ದಾರೆ. ಮೊದಲ ಪಂದ್ಯದಲ್ಲಿ 48 ರನ್ ಗಳಿಸಿದ್ದ ಸ್ಮೃತಿ ನಂತರ ಪಂದ್ಯಗಳಲ್ಲಿ ಕ್ರಮವಾಗಿ  37, 52 , 43 ರನ್ ಗಳಿಸಿ ಒಟ್ಟು 282 ರನ್‍ಗಳೊಂದಿಗೆ ಇನ್ನಿಂಗ್ಸ್ ಟಾಪ್ ಸ್ಕೋರರ್ ಪಟ್ಟಿಯಲ್ಲಿ ಮೊದಲಿಗರಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !