ಬುಧವಾರ, ಫೆಬ್ರವರಿ 26, 2020
19 °C

ಮಾಸಾಂತ್ಯಕ್ಕೆ ಹೊಸ ಆಯ್ಕೆಗಾರರು: ಗಂಗೂಲಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ರಾಷ್ಟ್ರೀಯ ಸೀನಿಯರ್‌ ಆಯ್ಕೆ ಸಮಿತಿಯ ಎರಡು ಸ್ಥಾನಗಳಿಗೆ ಈ ತಿಂಗಳ ಅಂತ್ಯದೊಳಗೆ ನೇಮಕ ಮಾಡಲಾಗುವುದು ಎಂದು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ ಅಧ್ಯಕ್ಷ ಸೌರವ್‌ ಗಂಗೂಲಿ ಸೋಮವಾರ ತಿಳಿಸಿದ್ದಾರೆ.

ಸಮಿತಿಯ ಅಧ್ಯಕ್ಷ ಹಾಗೂ ದಕ್ಷಿಣ ವಲಯದ ಎಂ.ಎಸ್‌.ಕೆ. ಪ್ರಸಾದ್‌ ಮತ್ತು ಕೇಂದ್ರ ವಲಯದ ಗಗನ್‌ ಖೋಡಾ ಅವರ ಸ್ಥಾನಕ್ಕೆ ಮಂಡಳಿಯು ಈಗಾಗಲೇ ಅರ್ಜಿಗಳನ್ನು ಆಹ್ವಾನಿಸಿದೆ. ಸಮಿತಿಯು ಐವರು ಸದಸ್ಯರನ್ನು ಒಳಗೊಂಡಿದೆ. 

‌ಮಂಡಳಿಯು ಇತ್ತೀಚೆಗಷ್ಟೇ ಕ್ರಿಕೆಟ್‌ ಸಲಹಾ ಸಮಿತಿ  (ಸಿಎಸಿ) ಯನ್ನು ಹೊಸದಾಗಿ ರೂಪಿಸಿದ್ದು, ಮಾಜಿ ಆಟಗಾರರಾದ ಮದನ್‌ ಲಾಲ್‌, ರುದ್ರಪ್ರತಾಪ್‌ ಸಿಂಗ್ ಮತ್ತು ಸುಲಕ್ಷಣಾ ನಾಯಕ್‌ ಅವರನ್ನು ನೇಮಕ ಮಾಡಿತ್ತು. ‘ಹೊಸ ಸಿಎಸಿಯನ್ನು ರೂಪಿಸಲಾಗಿದೆ. ಈ ತಿಂಗಳ ಕೊನೆಯೊಳಗೆ ಅವರು ಇಬ್ಬರು ನೂತನ ಆಯ್ಕೆಗಾರರನ್ನು ಆರಿಸಲಿದ್ದಾರೆ’ ಎಂದು ಗಂಗೂಲಿ ತಿಳಿಸಿದರು.

ಅಜಿತ್‌ ಅಗರಕರ್‌, ಲಕ್ಷ್ಮಣ್‌ ಶಿವರಾಮಕೃಷ್ಣನ್‌, ಅಮೇಯ್‌ ಖುರಾಸಿಯಾ ಮತ್ತು ನಯನ್‌ ಮೋಂಗಿಯಾ ಆಯ್ಕೆಗಾರ ಸ್ಥಾನಕ್ಕೆ ಅರ್ಜಿ ಹಾಕಿದವರಲ್ಲಿ ಒಳಗೊಂಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು