ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಗೂಲಿಗೆ ಕೊರೊನಾ ಸೋಂಕು ಇಲ್ಲ

Last Updated 25 ಜುಲೈ 2020, 20:02 IST
ಅಕ್ಷರ ಗಾತ್ರ

ಕೋಲ್ಕತ್ತ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷ ಸೌರವ್ ಗಂಗೂಲಿ ಅವರಿಗೆ ಕೊರೊನಾ ವೈರಸ್ ಸೋಂಕು ತಗುಲಿಲ್ಲ.

ಶುಕ್ರವಾರ ಸಂಜೆ ಬಂದ ಪರೀಕ್ಷಾ ವರದಿಯಲ್ಲಿ ನೆಗೆಟಿವ್ ಎಂದು ದೃಢಪಟ್ಟಿದೆ.

ತಮ್ಮ ಸಹೋದರ ಹೋದ ವಾರ ಸ್ನೇಹಾಶೀಶ್ ಗಂಗೂಲಿ ಅವರಿಗೆ ಕೋವಿಡ್ –19 ಇರುವುದು ದೃಢಪಟ್ಟಿತ್ತು. ಆದ್ದರಿಂದ ಸೌರವ್ ಕೂಡ ತಪಾಸಣೆಗೊಳಗಾಗಿದ್ದರು. ಅಲ್ಲದೇ ’ಗೃಹಬಂಧನ‘ದಲ್ಲಿದ್ದರು.

’ಸೌರವ್ ಅವರು ತಮ್ಮ ತಾಯಿ ಹಾಗೂ ಕುಟುಂಬದ ಸದಸ್ಯರೊಂದಿಗೆ ಒಂದೇ ಮನೆಯಲ್ಲಿದ್ದಾರೆ. ಆದ್ದರಿಂದಲೇ ಅವರು ಸ್ವಯಂತಪಾಸಣೆ ಮಾಡಿಸಿಕೊಂಡರು. ಆದರೆ ಅವರು ಸುರಕ್ಷಿತವಾಗಿದ್ದಾರೆ‘ ಗಂಗೂಲಿ ಆಪ್ತರು ತಿಳಿಸಿದ್ದಾರೆ.

’ಆಸ್ಪತ್ರೆಯಲ್ಲಿರುವ ಸ್ನೇಹಾಶಿಶ್ ಚೇತರಿಸಿಕೊಳ್ಳುತ್ತಿದ್ದಾರೆ. ಬಂಗಾಳ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿಯೂ ಆಗಿರುವ ಸ್ನೇಹಾಶಿಶ್ ಆಸ್ಪತ್ರೆಯಲ್ಲಿದ್ದುಕೊಂಡೇ ಕಚೇರಿಯ ಕೆಲವು ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ‘ ಎಂದು ಕುಟುಂಬದ ಆಪ್ತರು ತಿಳಿಸಿದ್ದಾರೆ.

ಸ್ನೇಹಾಶಿಶ್ ಅವರ ಪತ್ನಿ, ಅತ್ತೆ, ಮಾವ ಮತ್ತು ಮನೆಯ ಸಹಾಯಕನಿಗೂ ಕೋವಿಡ್ –19 ಇರುವುದು ಜೂನ್ 20ರಂದು ಖಚಿತವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT