ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ಕರ ಘಟ್ಟದತ್ತ ದಕ್ಷಿಣ ಆಫ್ರಿಕಾ ಚಿತ್ತ

ಸೆಮಿಫೈನಲ್ ಹಾದಿ ಮುಚ್ಚಿರುವ ಬಾಂಗ್ಲಾದೇಶಕ್ಕೆ ಸಮಾಧಾನಕರ ಗೆಲುವಿನ ಕಸನು
Last Updated 1 ನವೆಂಬರ್ 2021, 14:09 IST
ಅಕ್ಷರ ಗಾತ್ರ

ಅಬುಧಾಬಿ: ಸತತ ಎರಡು ಜಯ ಸಾಧಿಸಿ ಹುಮ್ಮಸ್ಸಿನಲ್ಲಿರುವ ದಕ್ಷಿಣ ಆಫ್ರಿಕಾ ತಂಡ ಟ್ವೆಂಟಿ–20 ವಿಶ್ವಕಪ್ ಕ್ರಿಕೆಟ್‌ ಟೂರ್ನಿಯ ಮೊದಲ ಗುಂಪಿನ ಪಂದ್ಯದಲ್ಲಿ ಮಂಗಳವಾರ ಬಾಂಗ್ಲಾದೇಶವನ್ನು ಎದುರಿಸಲಿದೆ. ಸೂಪರ್ 12ರ ಹಂತದ ಈ ಪಂದ್ಯದಲ್ಲಿ ಗೆದ್ದರೆ ತೆಂಬಾ ಬವುಮಾ ಬಳಗದ ಸೆಮಿಫೈನಲ್ ಹಾದಿ ಸುಲಭವಾಗಲಿದೆ.

ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾವನ್ನು ಮಣಿಸಿರುವ ತಂಡ ಈಗ ಭರವಸೆಯ ಅಲೆಯಲ್ಲಿದೆ. ಗುಂಪಿನ ಪಾಯಿಂಟ್ ಪಟ್ಟಿಯಲ್ಲಿ ತಂಡ ಈಗ ಎರಡನೇ ಸ್ಥಾನದಲ್ಲಿದೆ. ಹೀಗಾಗಿ ಸೆಮಿಫೈನಲ್ ಪ್ರವೇಶಿಸುವ ಸಾಧ್ಯತೆ ಹೆಚ್ಚಿರುವ ತಂಡ ಎಂದೇ ಪರಿಗಣಿಸಲಾಗಿದೆ.

ಬಾಂಗ್ಲಾದೇಶ ಆಡಿರುವ ಮೂರು ಪಂದ್ಯಗಳನ್ನು ಕೂಡ ಸೋತಿದೆ. ಹೀಗಾಗಿ ನಾಲ್ಕರ ಘಟ್ಟ ಪ್ರವೇಶಿಸುವ ಆಸೆ ಕಮರಿದೆ. ಈ ಹಿನ್ನೆಲೆಯಲ್ಲಿ ಸಮಾಧಾನಕರ ಗೆಲುವಿಗಾಗಿ ತಂಡ ಪ್ರಯತ್ನಿಸಲಿದೆ. ವಿಶ್ವ ದರ್ಜೆಯ ವೇಗಿಗಳನ್ನು ಒಳಗೊಂಡಿರುವ ದಕ್ಷಿಣ ಆಫ್ರಿಕಾ ತಂಡದ ಸ್ಪಿನ್ನರ್‌ಗಳು ಕೂಡ ಉತ್ತಮ ಸಾಮರ್ಥ್ಯ ತೋರುತ್ತಿದ್ದಾರೆ. ಇದು, ಎದುರಾಳಿಗಳನ್ನು ನಿಯಂತ್ರಿಸುವ ಯೋಜನೆಗಳು ಸಮರ್ಪಕವಾಗಲು ನೆರವಾಗುತ್ತಿದೆ.

ಆ್ಯನ್ರಿಚ್ ನಾರ್ಕಿಯಾ ಮತ್ತು ಡ್ವೇನ್ ಪ್ರೆಟೋರಿಯಸ್‌ ಅವರಿಗೆ ತಬ್ರೇಜ್ ಶಂಸಿ ಉತ್ತಮ ಬೆಂಬಲ ನೀಡುತ್ತಿದ್ದಾರೆ. ತೆಂಬಾ ಬವುಮಾ, ಡೇವಿಡ್ ಮಿಲ್ಲರ್ ಮತ್ತು ಏಡನ್ ಮರ್ಕರಮ್ ಬ್ಯಾಟಿಂಗ್‌ನಲ್ಲಿ ಮಿಂಚುತ್ತಿದ್ದಾರೆ. ಆದರೆ ಕ್ವಿಂಟನ್ ಡಿ’ಕಾಕ್, ರಸಿ ವ್ಯಾನ್ ಡೆರ್ ಡುಸೆನ್ ಮತ್ತು ರೀಜಾ ಹೆನ್ರಿಕ್ಸ್ ಅವೊಂದಿಗೆ ಮಧ್ಯಮ ಕ್ರಮಾಂಕದವೈಫಲ್ಯ ತಂಡವನ್ನು ಕಾಡುತ್ತಿದೆ.

ಮಂಡಿರಜ್ಜು ನೋವಿನಿಂದಾಗಿ ಟೂರ್ನಿಯಿಂದ ಹೊರಬಿದ್ದಿರುವ ಶಕೀಬ್ ಅಲ್ ಹಸನ್ ಅವರ ಅನುಪಸ್ಥಿತಿ ಬಾಂಗ್ಲಾದೇಶವನ್ನು ಕಾಡಲಿದೆ.

ಆರಂಭ: ಸಂಜೆ 3.30 (ಭಾರತೀಯ ಕಾಲಮಾನ)

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT