ಕ್ರಿಕೆಟ್‌: ದಕ್ಷಿಣ ಆಫ್ರಿಕಾಕ್ಕೆ ಸರಣಿ

7

ಕ್ರಿಕೆಟ್‌: ದಕ್ಷಿಣ ಆಫ್ರಿಕಾಕ್ಕೆ ಸರಣಿ

Published:
Updated:

ಕೇ‍ಪ್‌ಟೌನ್‌: ಡೇಲ್‌ ಸ್ಟೇಯ್ನ್‌ (85ಕ್ಕೆ4) ಮತ್ತು ಕಗಿಸೊ ರಬಾಡ (61ಕ್ಕೆ4) ಅವರ ವೇಗದ ದಾಳಿಗೆ ಪಾಕಿಸ್ತಾನದ ಬ್ಯಾಟ್ಸ್‌ಮನ್‌ಗಳು ತರಗೆಲೆಗಳ ಹಾಗೆ ಉದುರಿದರು.

ಇವರ ಪರಿಣಾಮಕಾರಿ ಬೌಲಿಂಗ್‌ ಬಲದಿಂದ ದಕ್ಷಿಣ ಆಫ್ರಿಕಾ ತಂಡ ನ್ಯೂಲ್ಯಾಂಡ್ಸ್‌ ಕ್ರೀಡಾಂಗಣ ದಲ್ಲಿ ನಡೆದ ಎರಡನೇ ಟೆಸ್ಟ್‌ ಪಂದ್ಯದಲ್ಲಿ 9 ವಿಕೆಟ್‌ಗಳಿಂದ ಗೆದ್ದಿದೆ. ಇದ ರೊಂದಿಗೆ ಇನ್ನೊಂದು ಪಂದ್ಯದ ಆಟ ಬಾಕಿ ಇರುವಂತೆ ಸರಣಿ ಕೈವಶ ಮಾಡಿಕೊಂಡಿದೆ.

ಸಂಕ್ಷಿಪ್ತ ಸ್ಕೋರ್‌: ಪಾಕಿಸ್ತಾನ, ಮೊದಲ ಇನಿಂಗ್ಸ್‌: 51.1 ಓವರ್‌ಗಳಲ್ಲಿ 177 ಮತ್ತು 70.4 ಓವರ್‌ಗಳಲ್ಲಿ 294 (ಶಾನ್‌ ಮಸೂದ್‌ 61, ಅಸಾದ್‌ ಶಫೀಕ್‌ 88, ಬಾಬರ್‌ ಅಜಂ 72; ವರ್ನಾನ್‌ ಫಿಲಾಂಡರ್ 51ಕ್ಕೆ1, ಡೇಲ್‌ ಸ್ಟೇಯ್ನ್‌ 85ಕ್ಕೆ4, ಕಗಿಸೊ ರಬಾಡ 61ಕ್ಕೆ4).

ದಕ್ಷಿಣ ಆಫ್ರಿಕಾ: ಮೊದಲ ಇನಿಂಗ್ಸ್‌, 124.1 ಓವರ್‌ಗಳಲ್ಲಿ 431 ಮತ್ತು 9.5 ಓವರ್‌ಗಳಲ್ಲಿ 1 ವಿಕೆಟ್‌ಗೆ 43 (ಡೀನ್‌ ಎಲ್ಗರ್‌ ಔಟಾಗದೆ 24; ಮೊಹಮ್ಮದ್‌ ಅಬ್ಬಾಸ್‌ 14ಕ್ಕೆ1). ಫಲಿತಾಂಶ: ದಕ್ಷಿಣ ಆಫ್ರಿಕಾಕ್ಕೆ 9 ವಿಕೆಟ್‌ ಗೆಲುವು. 3 ಪಂದ್ಯಗಳ ಸರಣಿಯಲ್ಲಿ 2–0 ಮುನ್ನಡೆ. ಪಂದ್ಯಶ್ರೇಷ್ಠ: ಫಾಫ್‌ ಡು ಪ್ಲೆಸಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !