ರಾವಲ್ಪಿಂಡಿ: ಪಾಕಿಸ್ತಾನ ಪ್ರವಾಸದಲ್ಲಿರುವ ಶ್ರೀಲಂಕಾ ಕ್ರಿಕೆಟ್ ತಂಡದ ಭದ್ರತೆಯನ್ನು ಸರ್ಕಾರವು ಸೇನೆಗೆ ವಹಿಸಿಲಾಗಿದೆ ಎಂದು ಪಿಸಿಬಿ ಮುಖ್ಯಸ್ಥ ಮೊಹ್ಸಿನ್ ನಖ್ವಿ ಅವರು ಹೇಳಿದ್ದಾರೆ.

ಇತ್ತೀಚೆಗೆ ಇಸ್ಲಾಮಾಬಾದ್ನಲ್ಲಿ ಆತ್ಮಾಹುತಿ ಬಾಂಬ್ ದಾಳಿಯಾಗಿತ್ತು. ನಂತರ ಶ್ರೀಲಂಕಾ ಆಟಗಾರರು ಭದ್ರತಾ ಕಾರಣದಿಂದ ಪಾಕಿಸ್ತಾನ ತೊರೆಯಲು ನಿರ್ಧರಿಸಿದ್ದರು. ಆದರೆ, ಶ್ರೀಲಂಕಾ ಸರ್ಕಾರ ಮತ್ತು ಕ್ರಿಕೆಟ್ ಮಂಡಳಿಯ ನಿರ್ಧಾರದಂತೆ ಉಳಿದ ಪಂದ್ಯಗಳಲ್ಲಿ ಆಟಗಾರರು ಪಾಲ್ಗೊಳ್ಳುತ್ತಿದ್ದಾರೆ.

ಪ್ರವಾಸಿ ಶ್ರೀಲಂಕಾ ತಂಡದ ಭದ್ರತಾ ಹೊಣೆಯನ್ನು ಸೇನೆಗೆ ವಹಿಸಿಲಾಗಿದೆ. ಪೊಲೀಸರು ಕೂಡ ಅವರಿಗೆ ಸಹಕಾರ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.

ಆತ್ಮಾಹುತಿ ಬಾಂಬ್ ದಾಳಿಯ ನಂತರ ಶ್ರೀಲಂಕಾ ಆಟಗಾರರು ತವರಿಗೆ ಮರಳಲು ಸಿದ್ದರಾಗಿದ್ದರು. ಉಭಯ ದೇಶಗಳ ನಾಯಕರ ಸಹಕಾರದಿಂದ ಟೂರ್ನಿ ಮುಂದುವರಿಯುತ್ತಿದೆ. ಸೇನಾ ಮುಖ್ಯಸ್ಥ ಮುನೀರ್ ಅವರು ಆಟಗಾರರ ಭದ್ರತೆಯ ಕುರಿತು ಲಂಕಾ ರಕ್ಷಣಾ ಸಚಿವರಿಗೆ ಆಶ್ವಾಸನೆ ನೀಡಿದ್ದಾರೆ ಎಂದು ಹೇಳಿದ್ದಾರೆ.

ಗುರುವಾರ ರಾತ್ರಿ ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡದ ಆಟಗಾರರನ್ನು ಮೊಹ್ಸಿನ್ ನಖ್ವಿ ಅವರು ಕ್ರೀಡಾಂಗಣದಲ್ಲಿ ಭೇಟಿಯಾಗಿದ್ದರು.

ಶ್ರೀಲಂಕಾ ಮತ್ತು ಪಾಕಿಸ್ತಾನ ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ಜರುಗುತ್ತಿದೆ. ಬಾಂಬ್ ಸ್ಪೋಟದ ನಂತರ ಸರಣಿಯ ವೇಳಾಪಟ್ಟಿಯನ್ನು ಮರುನಿಗದಿ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.