ಭಾನುವಾರ, ಡಿಸೆಂಬರ್ 5, 2021
27 °C

ಕ್ರಿಕೆಟ್: ಜಯದ ಸನಿಹ ಶ್ರೀಲಂಕಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗಾಲ್: ಆತಿಥೇಯ ಶ್ರೀಲಂಕಾ ತಂಡವು ವೆಸ್ಟ್ ಇಂಡೀಸ್ ಎದುರಿನ ಟೆಸ್ಟ್ ಪಂದ್ಯದಲ್ಲಿ ಗೆಲುವಿನ ಸನಿಹ ಇದೆ. ಇನ್ನೂ ನಾಲ್ಕು ವಿಕೆಟ್ ಗಳಿಸಿದರೆ ಜಯ ಖಚಿತವಾಗಲಿದೆ.

ಬುಧವಾರ ನಾಲ್ಕನೇ ದಿನದಾಟದಲ್ಲಿ ಶ್ರೀಲಂಕಾ ತಂಡವುವೆಸ್ಟ್ ಇಂಡೀಸ್‌ಗೆ ಗೆಲುವಿಗಾಗಿ 348 ರನ್‌ಗಳ ಗುರಿ ನೀಡಿತು. ವಿಂಡೀಸ್ ತಂಡವು ಎರಡನೇ ಇನಿಂಗ್ಸ್‌ನಲ್ಲಿ 25.3 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 52 ರನ್ ಗಳಿಸಿತು. ರಮೇಶ್ ಮೆಂಡಿಸ್ (17ಕ್ಕೆ4) ವಿಂಡೀಸ್‌ನ ಪ್ರಮುಖ ವಿಕೆಟ್‌ಗಳನ್ನು ಗಳಿಸಿದರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಶ್ರೀಲಂಕಾ 386 ಮತ್ತು ವೆಸ್ಟ್ ಇಂಡೀಸ್: 230. ಎರಡನೇ ಇನಿಂಗ್ಸ್: ಶ್ರೀಲಂಕಾ: 40.5 ಓವರ್‌ಗಳಲ್ಲಿ 4ಕ್ಕೆ191 ಡಿಕ್ಲೆರ್ಡ್ (ಕರುಣಾರತ್ನೆ 83, ಏಂಜೆಲೊ ಮ್ಯಾಥ್ಯೂಸ್ ಔಟಾಗದೆ 69, ರಹಕೀಮ್ ಕಾರ್ನವಾಲ್ 60ಕ್ಕೆ2, ಜಾಮೆಲ್ ವಾರಿಕನ್ 42ಕ್ಕೆ2), ವೆಸ್ಟ್ ಇಂಡೀಸ್: 25.3 ಓವರ್‌ಗಳಲ್ಲಿ 6ಕ್ಕೆ52 (ಎನ್‌ಕುರ್ಮಾ ಬೊನೆರ್ ಬ್ಯಾಟಿಂಗ್ 18, ಜೊಶುವಾ ಡಿಸಿಲ್ವಾ ಬ್ಯಾಟಿಂಗ್ 15, ಲಸಿತ್ ಎಂಬುಲ್ದೆನಿಯಾ 18ಕ್ಕೆ2, ರಮೇಶ್ ಮೆಂಡಿಸ್ 17ಕ್ಕೆ4).

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.