ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರತ್ ಶತಕ; ಆಸ್ಟ್ರೇಲಿಯಾ ‘ಎ’ ಪರದಾಟ

ಕ್ರಿಕೆಟ್: ಶುಭಮನ್ ಗಿಲ್, ಕುಲದೀಪ್ ಯಾದವ್ ಅರ್ಧಶತಕ
Last Updated 10 ಸೆಪ್ಟೆಂಬರ್ 2018, 17:08 IST
ಅಕ್ಷರ ಗಾತ್ರ

ಬೆಂಗಳೂರು: ಕೊನಾ ಶ್ರೀಕರ್ ಭರತ್ ಗಳಿಸಿದ ಶತಕದ ಬಲದಿಂದ ಭಾರತ ‘ಎ’ ತಂಡವು ಇಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ‘ಎ’ ವಿರುದ್ಧದ ‘ಟೆಸ್ಟ್‌’ನಲ್ಲಿ ಗೆಲುವು ಸಾಧಿಸುವ ಅವಕಾಶ ಲಭಿಸಿದೆ.

ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ಎ ತಂಡವು 346 ರನ್‌ ಗಳಿಸಿತ್ತು. ಅದಕ್ಕುತ್ತರವಾಗಿ ಭಾರತ ‘ಎ’ ತಂಡವು 505 ರನ್‌ ಗಳಿಸಿ ಆಲೌಟ್‌ ಆಯಿತು. ಇದರಿಂದಾಗಿ 159 ರನ್‌ಗಳ ಮುನ್ನಡೆ ಸಾಧಿಸಿತು. ಎರಡನೇ ಸೋಮವಾರ ಮಧ್ಯಾಹ್ನ ಎರಡನೇ ಇನಿಂಗ್ಸ್‌ ಆರಂಭಿಸಿದ ಆಸ್ಟ್ರೇಲಿಯಾ ತಂಡವು ಶುರುವಿನಲ್ಲಿಯೇ ಆಘಾತ ಅನುಭವಿಸಿತು. 14 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 38 ರನ್‌ ಗಳಿಸಿತು. ಟ್ರಾವಿಸ್ ಹೆಡ್ (ಬ್ಯಾಟಿಂಗ್ 4) ಮತ್ತು ಪೀಟರ್ ಹ್ಯಾಂಡ್ಸ್‌ಕಂಬ್ (ಔಟಾಗದೆ 1) ಕ್ರೀಸ್‌ನಲ್ಲಿದ್ದಾರೆ.

ಮಂಗಳವಾರ ಪಂದ್ಯದ ಕೊನೆಯ ದಿನವಾಗಿದೆ. ಆಸ್ಟ್ರೇಲಿಯಾ ‘ಎ’ ತಂಡವು ವಿಕೆಟ್ ಪತನಕ್ಕೆ ಅವಕಾಶ ನೀಡದೇ ಇಡೀ ದಿನ ಆಡಿದರೆ ಡ್ರಾ ಮಾಡಿಕೊಳ್ಳಬಹುದು. ಮೊದಲ ಪಂದ್ಯದಲ್ಲಿ ಗೆದ್ದಿರುವ ಪ್ರವಾಸಿ ಬಳಗವು ಸರಣಿಯನ್ನು ತನ್ನದಾಗಿಸಿಕೊಳ್ಳಬಹುದು. ಇನಿಂಗ್ಸ್‌ನಲ್ಲಿ ಮುನ್ನಡೆ ಗಳಿಸಲು ಇನ್ನೂ 121 ರನ್‌ ಗಳಿಸಬೇಕು. ಆದರೆ ಅಷ್ಟು ರನ್‌ಗಳ ಒಳಗೆ ಉಳಿದ ಎಂಟು ವಿಕೆಟ್‌ಗಳನ್ನು ಕಬಳಿಸಿದರೆ ಅಥವಾ ಚಿಕ್ಕ ಮೊತ್ತದ ಗುರಿ ಲಭಿಸಿದರೆ ಭಾರತ ’ಎ’ ತಂಡವು ಜಯಿಸಬಹುದು.

ಶ್ರೀಕರ ಶತಕದ ಅಬ್ಬರ: ಭಾನುವಾರ ದಿನದಾಟದ ಅಂತ್ಯಕ್ಕೆ ಭಾರತ ‘ಎ’ ತಂಡವು 70 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 223 ರನ್‌ಗಳನ್ನು ಗಳಿಸಿತ್ತು. ಕ್ರೀಸ್‌ನಲ್ಲಿ ಉಳಿದಿದ್ದ ಶ್ರೇಯಸ್ ಅಯ್ಯರ್ ಸೋಮವಾರ ಬೆಳಿಗ್ಗೆ ಮೂರನೇ ಓವರ್‌ನಲ್ಲಿಯೇ ಔಟಾದರು. ಕ್ರೀಸ್‌ಗೆ ಬಂದ ಭರತ್ ಅವರು ಶುಭಮನ್ ಜೊತೆಗೆ ರನ್‌ಗಳನ್ನು ಸೇರಿಸಿದರು. ಸರಣಿಯಲ್ಲಿ ಇದೇ ಮೊದಲ ಅವಕಾಶ ಪಡೆದಿರುವ ಗಿಲ್ (50; 76ಎಸೆತ, 12 ಬೌಂಡರಿ, 1ಸಿಕ್ಸರ್) ಅರ್ಧಶತಕ ಪೂರೈಸಿದರು. ಇಬರಬರೂ ಸೇರಿ ಐದನೇ ವಿಕೆಟ್‌ಗೆ 83 ರನ್‌ ಸೇರಿಸಿದರು. ಇದರಿಂದಾಗಿ ತಂಡವು 300ರ ಗಡಿ ತಲುಪಿತು.ಈ ಹಂತದಲ್ಲಿ ಗಿಲ್ ಅವರು ಟ್ರೆಮೆನ್ ಎಸೆತದಲ್ಲಿ ಔಟಾದರು. ಕೆ.ಗೌತಮ್ (20 ರನ್) ಮತ್ತು ದೀಪಕ್ ಚಃಆರ್ (6 ರನ್) ಬೇಗನಡೆ ಔಟಾ
ದರು.

ಆದರೆ, ಕುಲದೀಪ್ ಯಾದವ್ ಅವರು ಭರತ್‌ಗೆ ಉತ್ತಮ ಜೊತೆ ನೀಡಿದರು. ಇದರಿಂದಾಗಿ ಭರತ್ ಶತಕ ಪೂರೈಸಲು ಸಾಧ್ಯವಾಯಿತು. ಅಲ್ಲದೇ ಕುಲದೀಪ್ ಕೂಡ ಅರ್ಧಶತಕ ಹೊಡೆದರು. ಎಂಟನೇ ವಿಕೆಟ್ ಜೊತೆಯಾಟದಲ್ಲಿ 113 ರನ್‌ಗಳು ಸೇರಿದವು. ಕುಲದೀಪ್ ಔಟಾದ ನಂತರ ಬಂದ ನದೀಂ ಹೀಗೆ ಬಂದು ಹಾಗೆ ಹೋದರು. ಆಷ್ಟನ್ ಅಗರ್ ಬೌಲಿಂಗ್‌ನಲ್ಲಿ ಭರತ್ ಔಟಾದರು. ಇದರೊಂದಿಗೆ ಇನಿಂಗ್ಸ್‌ಗೆ ತೆರೆ ಬಿತ್ತು.

ಸಂಕ್ಷಿಪ್ತ ಸ್ಕೋರ್‌: ಆಸ್ಟ್ರೇಲಿಯಾ ‘ಎ’, ಮೊದಲ ಇನಿಂಗ್ಸ್‌: 346, ಭಾರತ ‘ಎ’, ಮೊದಲ ಇನಿಂಗ್ಸ್‌: 144 ಓವರ್‌ಗಳಲ್ಲಿ 505 (ಶ್ರೇಯಸ್‌ ಅಯ್ಯರ್‌ 42, ಶುಭಮನ್‌ ಗಿಲ್‌ 50, ಕೆ. ಎಸ್‌. ಭರತ್‌ 106, ಕುಲದೀಪ್‌ ಯಾದವ್‌ 52, ಕ್ರಿಸ್‌ ಟ್ರೆಮೆನ್‌ 41ಕ್ಕೆ3, ಆಷ್ಟನ್‌ ಅಗರ್‌ 87ಕ್ಕೆ 3). ಆಸ್ಟ್ರೇಲಿಯಾ ‘ಎ’, ಎರಡನೇ ಇನಿಂಗ್ಸ್‌: 14 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 38 (ಕರ್ಟಿಸ್‌ ಪ್ಯಾಟರ್ಸನ್‌ 04, ಮ್ಯಾಥ್ಯೂ ರೆನ್‌ಶಾ 19, ಟ್ರಾವಿಸ್‌ ಹೆಡ್‌ ಔಟಾಗದೆ 04, ಪೀಟರ್‌ ಹ್ಯಾಂಡ್ಸ್‌ಕಂಬ್‌ ಔಟಾಗದೆ 01, ಶಾಬಾಜ್‌ ನದೀಂ 21ಕ್ಕೆ 1, ಕೃಷ್ಣಪ್ಪ ಗೌತಮ್‌ 3ಕ್ಕೆ 1).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT