ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಲಂಕಾ–ಬಾಂಗ್ಲಾದೇಶ ಟೆಸ್ಟ್ ಡ್ರಾದಲ್ಲಿ ಮುಕ್ತಾಯ

Last Updated 25 ಏಪ್ರಿಲ್ 2021, 12:48 IST
ಅಕ್ಷರ ಗಾತ್ರ

ಪಲ್ಲೆಕೆಲೆ, ಶ್ರೀಲಂಕಾ: ಒಂದು ದ್ವಿಶತಕ ಮತ್ತು ಮೂರು ಶತಕಗಳನ್ನು ಕಂಡ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತು.

ನಾಯಕ ದಿಮುತ್ ಕರುಣರತ್ನೆ (244; 437 ಎಸೆತ, 26 ಬೌಂಡರಿ) ಅವರ ಚೊಚ್ಚಲ ದ್ವಿಶತಕ ಹಾಗೂ ಧನಂಜಯ ಡಿಸಿಲ್ವ (166; 291 ಎ, 22 ಬೌಂ) ಅವರ ಶತಕದ ನೆರವಿನಿಂದ ಆತಿಥೇಯ ಶ್ರೀಲಂಕಾ ಶನಿವಾರ ಮೂರು ವಿಕೆಟ್‌ಗಳಿಗೆ 512 ರನ್‌ ಗಳಿಸಿತ್ತು. ಕೊನೆಯ ದಿನವಾದ ಭಾನುವಾರ ಮೊತ್ತವು 8ಕ್ಕೆ 648 ಆದಾಗ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.

7ಕ್ಕೆ 541 ರನ್ ಗಳಿಸಿ ಮೊದಲ ಇನಿಂಗ್ಸ್‌ ಡಿಕ್ಲೇರ್ ಮಾಡಿಕೊಂಡಿದ್ದ ಬಾಂಗ್ಲಾದೇಶ ಎರಡನೇ ಇನಿಂಗ್ಸ್‌ನಲ್ಲಿ ಎರಡು ವಿಕೆಟ್ ಕಳೆದುಕೊಂಡು 100 ರನ್ ಗಳಿಸಿದ್ದಾಗ ಪಂದ್ಯವನ್ನು ಮುಕ್ತಾಯಗೊಳಿಸಲು ನಿರ್ಧರಿಸಲಾಯಿತು.

ಶನಿವಾರ ದಿನಪೂರ್ತಿ ಬ್ಯಾಟಿಂಗ್ ಮಾಡಿದ್ದ ದಿಮುತ್ ಹಾಗೂ ಧನಂಜಯ ನಾಲ್ಕನೇ ವಿಕೆಟ್‌ಗೆ 322 ರನ್‌ ಕಲೆ ಹಾಕಿದ್ದರು. ಭಾನುವಾರ ಈ ಮೊತ್ತಕ್ಕೆ 33 ರನ್ ಗಳಿಸಿದಾಗ ಧನಂಜಯ ಔಟಾದರು. ಸ್ವಲ್ಪದರಲ್ಲೇ ದಿಮುತ್ ಕೂಡ ಮರಳಿದರು. ವಿಕೆಟ್ ಕೀಪರ್ ನಿರೋಷನ್ ಡಿಕ್ವೆಲ್ಲಾ ಮತ್ತು ವನಿಂದು ಹಸರಂಗ ಡಿ‘ಸಿಲ್ವಾ ಏಳನೇ ವಿಕೆಟ್‌ಗೆ 32 ರನ್ ಸೇರಿಸಿರು. ಎಂಟನೇ ವಿಕೆಟ್‌ಗೆ ವನಿಂದು ಮತ್ತು ಸುರಂಗ ಲಕ್ಮಲ್ 62 ರನ್ ಗಳಿಸಿದರು. ವನಿಂದು ಔಟಾದ ಕೂಡಲೇ ಇನಿಂಗ್ಸ್ ಡಿಕ್ಲೇರ್ ಮಾಡಲಾಯಿತು.

ಮೊದಲ ಇನಿಂಗ್ಸ್‌ನಲ್ಲಿ 10 ರನ್‌ಗಳಿಂದ ಶತಕ ವಂಚಿತರಾಗಿದ್ದ ಬಾಂಗ್ಲಾದ ಆರಂಭಿಕ ಬ್ಯಾಟ್ಸ್‌ಮನ್ ತಮೀಮ್ ಇಕ್ಬಾಲ್ (74; 98 ಎ, 10 ಬೌಂ, 3 ಸಿ) ಎರಡನೇ ಇನಿಂಗ್ಸ್‌ನಲ್ಲೂ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಮೊದಲ ಇನಿಂಗ್ಸ್‌ನ ಶತಕ ವೀರ ನಜ್ಮುಲ್ ಹೊಸೇನ್ ಶೂನ್ಯಕ್ಕೆ ಮರಳಿದರು. ಮೊಮಿನುಲ್ ಹಕ್ ಮತ್ತು ತಮೀಮ್ ಮೂರನೇ ವಿಕೆಟ್‌ಗೆ 73 ರನ್‌ಗಳ ಜೊತೆಯಾಟ ಆಡಿದರು. ಮೊಮಿನುಲ್ ಮೊದಲ ಇನಿಂಗ್ಸ್‌ನಲ್ಲಿ ಶತಕ ಸಿಡಿಸಿದ್ದರು.

ಸಂಕ್ಷಿಪ್ತ ಸ್ಕೋರು: ಬಾಂಗ್ಲಾದೇಶ, ಮೊದಲ ಇನಿಂಗ್ಸ್‌: 173 ಓವರ್‌ಗಳಲ್ಲಿ 7ಕ್ಕೆ 541 ಡಿಕ್ಲೇರ್; ಶ್ರೀಲಂಕಾ, ಮೊದಲ ಇನಿಂಗ್ಸ್‌(ಶನಿವಾರ 149 ಓವರ್‌ಗಳಲ್ಲಿ 3ಕ್ಕೆ 512): 179 ಓವರ್‌ಗಳಲ್ಲಿ 8ಕ್ಕೆ 648 ಡಿಕ್ಲೇರ್ (ದಿಮುತ್ ಕರುಣರತ್ನೆ 244, ಧನಂಜಯ ಡಿ ಸಿಲ್ವಾ 166, ನಿರೋಷನ್ ಡಿಕ್ವೆಲ್ಲಾ 31, ವನಿಂದು ಹಸರಂಗ ಡಿ ಸಿಲ್ವಾ 43, ಸುರಂಗ ಲಕ್ಮಲ್ ಔಟಾಗದೆ 22; ತಸ್ಕಿನ್ ಅಹಮ್ಮದ್ 112ಕ್ಕೆ3, ಎಬದತ್ ಹೊಸೇನ್ 99ಕ್ಕೆ1, ಮೆಹದಿ ಹಸನ್‌ 161ಕ್ಕೆ1, ತೈಜುಲ್ ಇಸ್ಲಾಂ 162ಕ್ಕೆ 2); ಬಾಂಗ್ಲಾದೇಶ, ಎರಡನೇ ಇನಿಂಗ್ಸ್‌: 33 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 100 (ತಮೀಮ್ ಇಕ್ಬಾಲ್ 74, ಮೊಮಿನುಲ್ ಹಕ್ ಔಟಾಗದೆ 23; ಸುರಂಗ್ ಲಕ್ಮಲ್ 21ಕ್ಕೆ2). ಫಲಿತಾಂಶ: ಪಂದ್ಯ ಡ್ರಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT