ಸೋಮವಾರ, ಏಪ್ರಿಲ್ 12, 2021
28 °C
ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ ಟೂರ್ನಿ: ಹಿಮಾಂಶು ಮಂತ್ರಿ, ಸಾರಾಂಶ್ ಜೈನ್ ಶತಕ

ಸುಜಿತ್ ತಾಳ್ಮೆಯ ಆಟ; ಜಯದತ್ತ ಕೋಲ್ಟ್ಸ್ ಓಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಆರಂಭಿಕ ಆಟಗಾರ ನಿಕಿನ್ ಜೋಸ್ ಎರಡನೇ ದಿನವಾದ ಬುಧವಾರ ಮೂರಂಕಿ ಮೊತ್ತ ಗಳಿಸಿದ್ದ ಅಂಗಣದಲ್ಲಿ ಮೂರನೇ ದಿನ ಸುಜಿತ್ ಎನ್‌.ಗೌಡ (153; 264 ಎಸೆತ, 4 ಸಿಕ್ಸರ್‌, 18 ಬೌಂಡರಿ) ಶತಕ ಗಳಿಸಿ ಮಿಂಚಿದರು.

ಅವರ ತಾಳ್ಮೆಯ ಆಟದ ಬಲದಿಂದ ಕೆಎಸ್‌ಸಿಎ ಕೋಲ್ಟ್ಸ್ ಬೃಹತ್ ಮೊತ್ತ ಗಳಿಸಿತು. ಇಲ್ಲಿನ ರಾಜೇಂದ್ರ ಸಿಂಘ್‌ಜಿ ಸಂಸ್ಥೆಯ ಮೈದಾನದಲ್ಲಿ ನಡೆಯುತ್ತಿರುವ ಕ್ಯಾಪ್ಟನ್ ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್ ಟೂರ್ನಿಯಲ್ಲಿ ಟೀಮ್ ರಾಜಸ್ಥಾನ್ ಎದುರಿನ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಕೋಲ್ಟ್ಸ್‌ ಎಂಟು ವಿಕೆಟ್‌ಗಳಿಗೆ 530 ರನ್‌ ಗಳಿಸಿತು.

ಮೊದಲ ಇನಿಂಗ್ಸ್‌ನಲ್ಲಿ 161 ರನ್‌ಗಳ ಹಿನ್ನಡೆ ಅನಭವಿಸಿದ ಟೀಮ್ ರಾಜಸ್ಥಾನ ಎರಡನೇ ಇನಿಂಗ್ಸ್‌ ಆರಂಭಿಸಿದ್ದು ಆರು ಓವರ್‌ಗಳಲ್ಲಿ ವಿಕೆಟ್ ಕಳೆದುಕೊಳ್ಳದೆ 22 ರನ್ ಗಳಿಸಿದೆ. ಇನಿಂಗ್ಸ್ ಸೋಲು ತಪ್ಪಿಸಿಕೊಳ್ಳಲು ತಂಡಕ್ಕೆ ಇನ್ನೂ 139 ರನ್‌ಗಳು ಬೇಕು.

ಸಂಕ್ಷಿಪ್ತ ಸ್ಕೋರು: ಆರ್‌ಎಸ್‌ಐ ಮೈದಾನ: ಟೀಮ್ ರಾಜಸ್ಥಾನ, ಮೊದಲ ಇನಿಂಗ್ಸ್‌:  369; ಕೆಎಸ್‌ಸಿಎ ಕೋಲ್ಟ್ಸ್‌: 8ಕ್ಕೆ 530 (ಸುಜಿತ್ ಎನ್‌.ಗೌಡ 153, ಸುಜಯ್ 44, ರಿಷಿ ಬೋಪಣ್ಣ 42;ಮಹಿಪಾಲ್ ಲೊಮ್ರರ್‌ 94ಕ್ಕೆ5); ಟೀಮ್ ರಾಜಸ್ಥಾನ, ಎರಡನೇ ಇನಿಂಗ್ಸ್‌: 6 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 22.

ಆಲೂರು 2ನೇ ಮೈದಾನ: ಮೊದಲ ಇನಿಂಗ್ಸ್‌:ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ: 380; ಬಂಗಾಳ ಕ್ರಿಕೆಟ್ ಸಂಸ್ಥೆ: 178; ದ್ವಿತೀಯ ಇನಿಂಗ್ಸ್‌: ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆ: 52 ಓವರ್‌ಗಳಲ್ಲಿ 2ಕ್ಕೆ 243 (ಪ್ರಿಯಾಂಶು ಖಂಡೂರಿ 58, ಪ್ರಶಾಂತ್ ಚೋಪ್ರಾ 42, ಸುಮಿತ್ ವರ್ಮಾ 104, ಅಂಕಿತ್‌ ಕಾಳಸಿ 33); ಬಂಗಾಳ ಕ್ರಿಕೆಟ್ ಸಂಸ್ಥೆ: 32 ಓವರ್‌ಗಳಲ್ಲಿ 4ಕ್ಕೆ 113 (ಖಾಜಿ ಜುನೈದ್ ಸೈಫಿ 46, ರನೋಜ್ ಸಿಂಗ್ ಖೈರ 48;ಆಯುಷ್‌ ಜಮ್ವಾಲ್ 44ಕ್ಕೆ2).

ಚಿನ್ನಸ್ವಾಮಿ ಕ್ರೀಡಾಂಗಣ: ಮೊದಲ ಇನಿಂಗ್ಸ್‌: ಡಾ.ಡಿ.ವೈ.ಪಾಟೀಲ ಕ್ರಿಕೆಟ್ ಅಕಾಡೆಮಿ: 331;ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ: 306; ದ್ವಿತೀಯ ಇನಿಂಗ್ಸ್‌: ಡಾ.ಡಿ.ವೈ.ಪಾಟೀಲ ಕ್ರಿಕೆಟ್ ಅಕಾಡೆಮಿ: 68 ಓವರ್‌ಗಳಲ್ಲಿ 8ಕ್ಕೆ274 (ನೌಶಾದ್ ಶೇಕ್ 108, ಸರ್ಫರಾಜ್ ಖಾನ್ 36, ಇಕ್ಬಾಲ್ ಅಬ್ದುಲ್ಲ 42; ತಸ್ಕಿನ್ ಅಹಮ್ಮದ್ 69ಕ್ಕೆ4).

ಕಿಣಿ ಸ್ಪೋರ್ಟ್ಸ್ ಅರೆನಾ: ಮೊದಲ ಇನಿಂಗ್ಸ್‌: ವಿದರ್ಭ ಕ್ರಿಕೆಟ್ ಸಂಸ್ಥೆ: 635; ಕೆಎಸ್‌ಸಿಎ ಕಾರ್ಯದರ್ಶಿಗಳ ಇಲೆವನ್: 379; ಎರಡನೇ ಇನಿಂಗ್ಸ್‌:ಕೆಎಸ್‌ಸಿಎ ಕಾರ್ಯದರ್ಶಿಗಳ ಇಲೆವನ್ (ಫಾಲೊ ಆನ್): 3 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 5.

ಭಾರತೀಯ ವಾಯುಪಡೆ ಮೈದಾನ: ಮೊದಲ ಇನಿಂಗ್ಸ್‌: ಕೆಎಸ್‌ಸಿಎ ಇಲೆವನ್‌: 497; ಕೇರಳ ಕ್ರಿಕೆಟ್ ಸಂಸ್ಥೆ: 246; ದ್ವಿತೀಯ ಇನಿಂಗ್ಸ್‌: ಕೆಎಸ್‌ಸಿಎ ಇಲೆವನ್: 47 ಓವರ್‌ಗಳಲ್ಲಿ 4ಕ್ಕೆ 215 (ಆರ್‌.ಸಮರ್ಥ್‌ 78, ಅಭಿಷೇಕ್ ರೆಡ್ಡಿ 57, ಸಿದ್ಧಾರ್ಥ್‌ 45, ಕರುಣ್ ನಾಯರ್ 26; ರೋಹನ್ ಪ್ರೇಮ್ 48ಕ್ಕೆ4).

ಎಸ್‌ಜೆಸಿಇ ಮೈದಾನ, ಮೈಸೂರು: ಮೊದಲ ಇನಿಂಗ್ಸ್‌: ಕೆಎಸ್‌ಸಿಎ ಅಧ್ಯಕ್ಷರ ಇಲೆವನ್: 269; ಆಂದ್ರ ಕ್ರಿಕೆಟ್ ಸಂಸ್ಥೆ: 116; ಎರಡನೇ ಇನಿಂಗ್ಸ್‌:ಕೆಎಸ್‌ಸಿಎ ಅಧ್ಯಕ್ಷರ ಇಲೆವನ್: 62.1 ಓವರ್‌ಗಳಲ್ಲಿ 212 (ಪವನ್ ದೇಶಪಾಂಡೆ 57, ಅವಿನಾಶ್ ಡಿ 55, ರಿತೇಶ್ ಭಟ್ಕಳ್ 43; ಕೆ.ವಿ.ಶಶಿಕಾಂತ್ 38ಕ್ಕೆ3, ಕಾರ್ತಿಕ್ ರಾಮನ್ 49ಕ್ಕೆ3, ಜಿ.ಮನೀಷ್ 60ಕ್ಕೆ2); ಆಂದ್ರ ಕ್ರಿಕೆಟ್ ಸಂಸ್ಥೆ: 49 ಓವರ್‌ಗಳಲ್ಲಿ 1ಕ್ಕೆ 150 (ಸಿ.ಆರ್‌.ಗಣೇಶ್ವರ್ 85, ಡಿ.ಬಿ.ಪ್ರಶಾಂತ್ ಕುಮಾರ್ 49).

ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣ: ಮೊದಲ ಇನಿಂಗ್ಸ್‌: ಜಾರ್ಖಂಡ್‌ ಕ್ರಿಕೆಟ್ ಸಂಸ್ಥೆ: 228; ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆ: 146 ಓವರ್‌ಗಳಲ್ಲಿ 6ಕ್ಕೆ 501 (ಹಿಮಾಂಶು ಮಂತ್ರಿ 105, ಸಾರಾಂಶ್ ಜೈನ್ 103; ರಾಹುಲ್ ಶುಕ್ಲಾ 96ಕ್ಕೆ2, ವರುಣ್ ಆ್ಯರನ್ 65ಕ್ಕೆ3, ಅಲೋಕ್‌ ಶರ್ಮಾ 24ಕ್ಕೆ1); ದ್ವಿತೀಯ ಇನಿಂಗ್ಸ್‌: ಜಾರ್ಖಂಡ್ ಕ್ರಿಕೆಟ್ ಸಂಸ್ಥೆ: 29 ಓವರ್‌ಗಳಲ್ಲಿ 4ಕ್ಕೆ 68 (ಅರ್ಣವ್ ಸಿನ್ಹಾ 23; ಮಿಹಿರ್ ಹಿರ್ವಾನಿ 18ಕ್ಕೆ2).

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು