ಸಚಿನ್ ದಾಖಲೆ ಮುರಿದ ಸೂರ್ಯ
ಸೂರ್ಯಕುಮಾರ್ ಅವರು ಈ ಪಂದ್ಯದಲ್ಲಿ ಅರ್ಧ ಶತಕ ಹೊಡೆಯುವ ಹಾದಿಯಲ್ಲಿ, ಐಪಿಎಲ್ ಒಂದೇ ಋತುವಿನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಮುಂಬೈ ಇಂಡಿಯನ್ಸ್ ಆಟಗಾರ ಎನಿಸಿದರು. ಈ ಹಿಂದಿನ ದಾಖಲೆ, ದಿಗ್ಗಜ ಬ್ಯಾಟರ್ ಸಚಿನ್ ತೆಂಡೂಲ್ಕರ್ (2010ರ ಆವೃತ್ತಿಯಲ್ಲಿ 618 ರನ್) ಹೆಸರಿನಲ್ಲಿತ್ತು. ಸೂರ್ಯ ಈ ಪಂದ್ಯದವರೆಗೆ 628 ರನ್ ಗಳಿಸಿದ್ದಾರೆ. ಭಾರತ ಟಿ20 ತಂಡದ ನಾಯಕ ಸೂರ್ಯ ಅವರು ಸತತ 14 ಇನಿಂಗ್ಸ್‌ಗಳಲ್ಲಿ 25ಕ್ಕಿಂತ ಹೆಚ್ಚಿನ ಮೊತ್ತ ಗಳಿಸಿದ್ದಾರೆ.