ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಸಿಸಿ ವರ್ಷದ ಟಿ20 ತಂಡಕ್ಕೆ ಸೂರ್ಯಕುಮಾರ್ ನಾಯಕ

Published 22 ಜನವರಿ 2024, 16:32 IST
Last Updated 22 ಜನವರಿ 2024, 16:32 IST
ಅಕ್ಷರ ಗಾತ್ರ

ದುಬೈ: ಭಾರತ ಕ್ರಿಕೆಟ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್‌ ಸೂರ್ಯಕುಮಾರ್ ಯಾದವ್ ಐಸಿಸಿ ವರ್ಷದ ಪುರುಷರ ಟಿ20 ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ. ಇದರಲ್ಲಿ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್, ಸ್ಪಿನ್ನರ್ ರವಿ ಬಿಷ್ಣೋಯ್ ಮತ್ತು ಎಡಗೈ ವೇಗಿ ಅರ್ಷ್‌ದೀಪ್ ಸಿಂಗ್ ಸೇರಿದ್ದಾರೆ.

ಬ್ಯಾಟಿಂಗ್, ಬೌಲಿಂಗ್ ಅಥವಾ ಅವರ ಆಲ್‌ರೌಂಡ್‌ ಸಾಧನೆಗಳಿಂದ ವರ್ಷವಿಡೀ ಪ್ರಭಾವ ಬೀರಿದ 11 ಅತ್ಯುತ್ತಮ ವ್ಯಕ್ತಿಗಳನ್ನು ಐಸಿಸಿ ವರ್ಷದ ತಂಡ ಗುರುತಿಸುತ್ತದೆ.  ಸೂರ್ಯಕುಮಾರ್ ಸತತ ಎರಡನೇ ವರ್ಷ ತಂಡದಲ್ಲಿ ಸ್ಥಾನ ಪಡೆದಿದ್ದಾರೆ ಮತ್ತು ವರ್ಷದ ಟಿ20 ಪುರುಷರ ಕ್ರಿಕೆಟಿಗ ಪ್ರಶಸ್ತಿಯ ಸ್ಪರ್ಧೆಯಲ್ಲಿದ್ದಾರೆ.

ಮುಂಬೈನ ಬಲಗೈ ಆಟಗಾರ 2023 ರಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಶ್ರೀಲಂಕಾ ವಿರುದ್ಧ ಕೇವಲ ಏಳು ರನ್ ಗಳಿಸುವ ಮೂಲಕ ವರ್ಷದ ಮೊದಲ ಇನಿಂಗ್ಸ್ ಆರಂಭಿಸಿದರು. ಬಳಿಕ ಅವರು ಮುಂದಿನ ಎರಡು ಪಂದ್ಯಗಳಲ್ಲಿ 51 (36) ಮತ್ತು ಅಜೇಯ 112 (51) ರನ್ ಗಳಿಸಿದರು.

ವರ್ಷದ ಕೊನೆಯಲ್ಲಿ ರೋಹಿತ್ ಶರ್ಮಾ ವಿರಾಮ ತೆಗೆದುಕೊಂಡಿದ್ದಾಗ ಸೂರ್ಯ ಕುಮಾರ್‌ ಭಾರತ ತಂಡದ ನಾಯಕರಾದರು.

ಭಾರತದ ನಾಲ್ವರು ಆಟಗಾರರ ಜೊತೆಗೆ ಇಂಗ್ಲೆಂಡ್‌ನ ಫಿಲ್ ಸಾಲ್ಟ್, ವಿಕೆಟ್ ಕೀಪರ್ ಆಗಿ ವೆಸ್ಟ್ ಇಂಡೀಸ್‌ನ ನಿಕೋಲಸ್ ಪೂರನ್, ನ್ಯೂಜಿಲೆಂಡ್‌ನ ಮಾರ್ಕ್ ಚಾಪ್‌ಮನ್, ಜಿಂಬಾಬ್ವೆಯ ಸಿಕಂದರ್ ರಜಾ, ಉಗಾಂಡಾದ ಆಲ್‌ರೌಂಡರ್‌ ಅಲ್ಪೇಶ್ ರಾಮ್‌ಜಾನಿ, ಇರಾಲ್ಯಾಂಡ್‌ನ ಮಾರ್ಕ್ ಅಡೈರ್ ಮತ್ತು ಜಿಂಬಾಬ್ವೆಯ ರಿಚರ್ಡ್ ಎನ್ಗರವಾ ಅವರು 11 ಸದಸ್ಯರ ತಂಡದಲ್ಲಿದ್ದಾರೆ.

ಮಹಿಳೆಯರ ವಿಭಾಗದಲ್ಲಿ ಆಫ್ ಸ್ಪಿನ್ನರ್ ದೀಪ್ತಿ ಶರ್ಮಾ ಅವರು ಶ್ರೀಲಂಕಾದ ಚಮರಿ ಅಟಪಟ್ಟು ನೇತೃತ್ವದ 11 ಸದಸ್ಯರ ತಂಡದಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯರಾಗಿದ್ದಾರೆ.

ಮಹಿಳಾ ತಂಡದಲ್ಲಿ ಆಸ್ಟ್ರೇಲಿಯಾದ ಬೆತ್ ಮೂನಿ (ವಿಕೆಟ್ ಕೀಪರ್), ಎಲಿಸ್ ಪೆರ್ರಿ, ಆಶ್ ಗಾರ್ಡನರ್ ಮತ್ತು ಮೆಗಾನ್ ಶುಟ್, ಇಂಗ್ಲೆಂಡ್‌ನ ನ್ಯಾಟ್ ಸ್ಕಿವರ್-ಬ್ರಂಟ್ ಮತ್ತು ಸೋಫಿ ಎಕ್ಲೆಸ್ಟೋನ್, ದಕ್ಷಿಣ ಆಫ್ರಿಕಾದ ಲಾರಾ ವೊಲ್ವಾರ್ಡ್ಟ್, ವೆಸ್ಟ್ ಇಂಡೀಸ್‌ನ ಹೇಲಿ ಮ್ಯಾಥ್ಯೂಸ್ ಮತ್ತು ನ್ಯೂಜಿಲೆಂಡ್‌ನ ಅಮೆಲಿಯಾ ಕೆರ್ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT