ದುಬೈ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಶನಿವಾರ ದುಬೈಯಲ್ಲಿ ನಡೆದ ಸೂಪರ್-12 ಹಂತದ ಒಂದನೇ ಗುಂಪಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ ಎಂಟು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.

ಇದರೊಂದಿಗೆ ಟೂರ್ನಿಯಲ್ಲಿ ಸತತ ಮೂರನೇ ಗೆಲುವು ದಾಖಲಿಸಿದ ಇಂಗ್ಲೆಂಡ್,ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಅತ್ತ ಮೊದಲೆರಡು ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದ ಆಸೀಸ್ ಮೂರನೇ ಪಂದ್ಯದಲ್ಲಿ ಹೀನಾಯ ಸೋಲಿನ ಮುಖಭಂಗಕ್ಕೊಳಗಾಗಿದೆ. ಅಲ್ಲದೆ ನಾಲ್ಕು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದೆ.

ಮೊದಲು ಕ್ರಿಸ್ ಜಾರ್ಡನ್ (17ಕ್ಕೆ 3 ವಿಕೆಟ್) ಸೇರಿದಂತೆ ಆಂಗ್ಲರಮಾರಕ ದಾಳಿಗೆ ಸಿಲುಕಿದ ಆಸ್ಟ್ರೇಲಿಯಾ 20 ಓವರ್ಗಳಲ್ಲಿ 120 ರನ್ಗಳಿಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡಿತು.

ಬಳಿಕ ಇಂಗ್ಲೆಂಡ್, ಜೋಸ್ ಬಟ್ಲರ್ ಬಿರುಸಿನ ಅರ್ಧಶತಕದ (71*) ನೆರವಿನಿಂದ 11.4 ಓವರ್ಗಳಲ್ಲೇ ಎರಡು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

ಪಂದ್ಯದ ಯಾವ ಹಂತದಲ್ಲೂ ಆಂಗ್ಲರ ಪಡೆಗೆ ಆಸೀಸ್ ಸವಾಲಾಗಲೇ ಇಲ್ಲ. ಕೇವಲ 32 ಎಸೆತಗಳನ್ನು ಎದುರಿಸಿದ ಬಟ್ಲರ್ ಇನ್ನಿಂಗ್ಸ್ನಲ್ಲಿ ತಲಾ ಐದು ಬೌಂಡರಿ ಹಾಗೂ ಸಿಕ್ಸರ್ಗಳು ಸೇರಿದ್ದವು. ಅಲ್ಲದೆ ಅರ್ಧಶತಕದ ಗಡಿಯನ್ನು ಕೇವಲ 25 ಎಸೆತಗಳಲ್ಲೇ ಕ್ರಮಿಸಿದ್ದರು.

ಇನ್ನುಳಿದಂತೆ ಜೇಸನ್ ರಾಯ್ (22) ಹಾಗೂ ಜಾನಿ ಬೆಸ್ಟೊ (16*) ರನ್ ಗಳಿಸಿದರು.

ಈ ಮೊದಲು ಆಸೀಸ್ 120 ರನ್ಗಳಿಗೆ ಸರ್ವಪತನಗೊಂಡಿತು. ಏಕಾಂಗಿ ಹೋರಾಟ ಪ್ರದರ್ಶಿಸಿದ ನಾಯಕ ಆ್ಯರನ್ ಫಿಂಚ್ ಹೊರತುಪಡಿಸಿದರೂ ಇತರೆ ಯಾವ ಬ್ಯಾಟರ್ ಹೋರಾಟದ ಮನೋಭಾವವನ್ನು ತೋರಲಿಲ್ಲ. 49 ಎಸೆತಗಳನ್ನು ಎದುರಿಸಿದ ಫಿಂಚ್ 44 ರನ್ (4 ಬೌಂಡರಿ) ಗಳಿಸಿದರು.

ಡೇವಿಡ್ ವಾರ್ನರ್ (1), ಸ್ಟೀವ್ ಸ್ಮಿತ್ (1), ಗ್ಲೆನ್ ಮ್ಯಾಕ್ಸ್ವೆಲ್ (6) ಹಾಗೂ ಮಾರ್ಕಸ್ ಸ್ಟೋಯಿನಿಸ್ (0) ನಿರಾಸೆ ಮೂಡಿಸಿದರು. ಪರಿಣಾಮ 51 ರನ್ನಿಗೆ ಐದು ವಿಕೆಟ್ ಕಳೆದುಕೊಂಡಿತು.

ಇನ್ನುಳಿದಂತೆ ಮ್ಯಾಥ್ಯೂ ವೇಡ್ (18), ಆಶ್ಟನ್ ಆಗರ್ (20), ಪ್ಯಾಟ್ ಕಮಿನ್ಸ್ (12) ಹಾಗೂ ಮಿಚೆಲ್ ಸ್ಟಾರ್ಕ್ (13) ಉಪಯುಕ್ತ ಇನ್ನಿಂಗ್ಸ್ ಕಟ್ಟಿ ತಂಡದ ಮೊತ್ತ 100ರ ಗಡಿ ದಾಟಲು ನೆರವಾದರು.

ಇಂಗ್ಲೆಂಡ್ ಪರ ಕ್ರಿಸ್ ಜಾರ್ಡನ್ ಮೂರು ಮತ್ತು ಕ್ರಿಸ್ ವೇಕ್ಸ್ ಹಾಗೂ ಟೈಮಲ್ ಮಿಲ್ಸ್ ತಲಾ ಎರಡು ವಿಕೆಟ್ಗಳನ್ನು ಹಂಚಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.