ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸಿಬಿಗೆ ಮೇಲ್ಮನವಿ ಸಲ್ಲಿಸಿ- ದಾನಿಶ್‌ ಕನೇರಿಯಾಗೆ ಪಿಸಿಬಿ ಸಲಹೆ

Last Updated 10 ಜುಲೈ 2020, 16:24 IST
ಅಕ್ಷರ ಗಾತ್ರ

ಕರಾಚಿ: ‘ನಿಮ್ಮ ಮೇಲಿನ ಆಜೀವ ನಿಷೇಧ ಶಿಕ್ಷೆಯನ್ನು ಹಿಂದಕ್ಕೆ ಪಡೆಯುವಂತೆ ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿಗೆ (ಇಸಿಬಿ) ಮೇಲ್ಮನವಿ ಸಲ್ಲಿಸಿ’ ಎಂದು ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯು (ಪಿಸಿಬಿ), ಹಿರಿಯ ಕ್ರಿಕೆಟಿಗ ದಾನಿಶ್‌ ಕನೇರಿಯಾಗೆ ಸಲಹೆ ನೀಡಿದೆ.

ಸ್ಪಾಟ್‌ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದು ಸಾಬೀತಾದ ಕಾರಣ 2013ರಲ್ಲಿಕನೇರಿಯಾಮೇಲೆ ಆಜೀವ ನಿಷೇಧ ಹೇರಲಾಗಿತ್ತು.ನಿಷೇಧ ಹಿಂದಕ್ಕೆ ಪಡೆದು ದೇಶಿಯ ಟೂರ್ನಿಗಳಲ್ಲಿ ಆಡಲು ಅವಕಾಶ ಮಾಡಿಕೊಡಿ ಎಂದು ದಾನಿಶ್‌ ಅವರು ಇತ್ತೀಚೆಗೆ ಪಿಸಿಬಿಗೆ ಮನವಿ ಮಾಡಿದ್ದರು.

‘ಇಸಿಬಿಯ ಭ್ರಷ್ಟಾಚಾರ ತಡೆ ನಿಯಮದ ಅನ್ವಯ ದಾನಿಶ್‌ ಮೇಲೆ ನಿಷೇಧ ಹೇರಲಾಗಿದೆ. ನಿಷೇಧ ಹಿಂಪಡೆಯುವ ಇಲ್ಲವೇ ರದ್ದು ಮಾಡುವ ಅಧಿಕಾರವು ಇಸಿಬಿಯ ಭ್ರಷ್ಟಾಚಾರ ತಡೆ ನ್ಯಾಯಮಂಡಳಿಗೆ ಮಾತ್ರ ಇದೆ ಎಂಬುದನ್ನು ಆದೇಶದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಹೀಗಾಗಿ ಕನೇರಿಯಾ ಅವರು ಇಸಿಬಿಗೆ ಮೇಲ್ಮನವಿ ಸಲ್ಲಿಸುವುದು ಒಳಿತು’ ಎಂದು ಪಿಸಿಬಿ ಶುಕ್ರವಾರ ಪ್ರಕಟಣೆಯಲ್ಲಿ ತಿಳಿಸಿದೆ.

39 ವರ್ಷ ವಯಸ್ಸಿನಕನೇರಿಯಾ, ಟೆಸ್ಟ್‌ ಮಾದರಿಯಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದಿರುವ ಪಾಕಿಸ್ತಾನದ ಬೌಲರ್‌ ಎಂಬ ಹಿರಿಮೆ ಹೊಂದಿದ್ದಾರೆ.

61 ಪಂದ್ಯಗಳನ್ನು ಆಡಿರುವ ಅವರು 34.79ರ ಸರಾಸರಿಯಲ್ಲಿ 261 ವಿಕೆಟ್‌ಗಳನ್ನು ಉರುಳಿಸಿದ್ದಾರೆ. 2001ರಿಂದ 2007ರ ಅವಧಿಯಲ್ಲಿ ಪಾಕ್‌ ಪರ ಒಟ್ಟು 18 ಏಕದಿನ ಪಂದ್ಯಗಳನ್ನು ಆಡಿ 15 ವಿಕೆಟ್‌ ಕಬಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT