ಬುಧವಾರ, ಆಗಸ್ಟ್ 10, 2022
25 °C

ಕೆ.ಎಲ್‌ ರಾಹುಲ್‌ಗೆ ಸರ್ಜರಿ: ಜರ್ಮನಿಗೆ ಅತಿಯಾ ಶೆಟ್ಟಿ ಜತೆ ತೆರಳಿದ ಕ್ರಿಕೆಟಿಗ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

K L Rahul Instagram

ಬೆಂಗಳೂರು: ಟೀಂ ಇಂಡಿಯಾ ಆಟಗಾರ ಕೆ. ಎಲ್. ರಾಹುಲ್ ಇತ್ತೀಚಿನ ಸರಣಿ ವೇಳೆ ಗಾಯಾಳುವಾಗಿದ್ದು, ಅದರ ಶಸ್ತ್ರಚಿಕಿತ್ಸೆ ಸಲುವಾಗಿ ಜರ್ಮನಿಗೆ ತೆರಳಿದ್ದಾರೆ. ಆದರೆ, ಈ ಬಾರಿ ರಾಹುಲ್ ಜತೆಗೆ ಅವರ ಪ್ರಿಯತಮೆ ಕೂಡ ಜರ್ಮನಿಗೆ ಹೋಗಿದ್ದಾರೆ.

ರಾಹುಲ್ ಅವರು ಬಾಲಿವುಡ್‌ ನಟ ಸುನೀಲ್ ಶೆಟ್ಟಿ ಪುತ್ರಿ ಅತಿಯಾ ಶೆಟ್ಟಿ ಜತೆ ಡೇಟಿಂಗ್ ಮಾಡುತ್ತಿದ್ದಾರೆ. ಅಲ್ಲದೆ, ತಮ್ಮ ಸಂಬಂಧದ ಕುರಿತು ಅಧಿಕೃತವಾಗಿ ಇಬ್ಬರೂ ಹೇಳಿಕೊಂಡಿದ್ದಾರೆ.

ಗಾಯದ ಸಮಸ್ಯೆಯಿಂದ ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸದಿಂದ ರಾಹುಲ್ ದೂರ ಉಳಿದಿದ್ದರು.

ರಾಹುಲ್ ಮತ್ತು ಅತಿಯಾ ಜತೆಯಾಗಿ ಜರ್ಮನಿಗೆ ತೆರಳುತ್ತಿರುವ ಫೋಟೊಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡಿವೆ. ಶಸ್ತ್ರಚಿಕಿತ್ಸೆ ಮುಗಿದ ಬಳಿಕ ವಿಶ್ರಾಂತಿ ಪಡೆದುಕೊಂಡು ಈ ಜೋಡಿ ವಾಪಸ್ ಆಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು