ದಕ್ಷಿಣ ಆಫ್ರಿಕಾ ತಂಡವು ‘ವಿಶ್ವ ಟೆಸ್ಟ್ ಕ್ರಿಕೆಟ್ ಚಾಂಪಿಯನ್ಷಿಪ್’ ಗೆಲ್ಲುವಲ್ಲಿ ತೆಂಬಾ ಬವುಮಾ ಪಾತ್ರ ಮಹತ್ವದ್ದು. ಅವರ ಸಾಧನೆ, ಆಟದ ಅಂಗಳದಲ್ಲಿ ದೊರೆತ ಗೆಲುವು ಮಾತ್ರವಲ್ಲದೆ, ಕಪ್ಪು ವರ್ಣೀಯರ ಹೋರಾಟಕ್ಕೆ ಸಂದ ಯಶಸ್ಸೂ ಹೌದು. ಅವರ ಯಶಸ್ಸು ದಕ್ಷಿಣ ಆಫ್ರಿಕಾಕ್ಕೆ ಸೀಮಿತವಲ್ಲ. ಜಿಂಬಾಬ್ವೆ ಮತ್ತು ಕೆನ್ಯಾ ತಂಡಗಳಿಗೂ ತೆಂಬಾ ಪ್ರೇರಣೆಯಾಗಬಲ್ಲರು.

‘ಆಫ್ರಿಕಾದ ಕಪ್ಪು ಜನಾಂಗದ ಕ್ರಿಕೆಟರ್ ಎಂದಷ್ಟೇ ನನ್ನ ಹೆಸರು ಇತಿಹಾಸದ ಪುಟದಲ್ಲಿ ಉಳಿಯಬಾರದು. ಅದನ್ನು ಮೀರಿ ಬೆಳೆದವ ಎಂದು ದಾಖಲಾಗಬೇಕು...’

ವಿಶ್ವ ಟೆಸ್ಟ್ ಕ್ರಿಕೆಟ್ ಚಾಂಪಿಯನ್ಷಿಪ್ (ಡಬ್ಲ್ಯುಟಿಸಿ) ಗೆದ್ದ ದಕ್ಷಿಣ ಆಫ್ರಿಕಾ ತಂಡದ ನಾಯಕ ತೆಂಬಾ ಬವುಮಾ ಅವರ ಭಾವುಕ ನುಡಿಗಳಿವು. ಅವರ ಈ ಮಾತಿನ ಹಿಂದೆ ಹಲವು ಭಾವಗಳಿವೆ. ತಾವು ಜನಿಸಿದ ಜನಾಂಗವು ತಲೆಮಾರುಗಳಿಂದ ಅನುಭವಿಸಿದ ತಾರತಮ್ಯದ ನೋವು, ಅವಮಾನ ಮತ್ತು ಹೋರಾಟದ ಹಾದಿಯ ಭಾವಗಳು ಅವು. ಇವೆಲ್ಲವನ್ನೂ ಮೀರಿ ಜಗತ್ತಿಗೆ ತಮ್ಮ ಸಾಮರ್ಥ್ಯ ತೋರುವ ತೆಂಬಾ ಛಲವೇ ದಕ್ಷಿಣ ಆಫ್ರಿಕಾ ತಂಡಕ್ಕೆ ವಿಶ್ವ ಕಿರೀಟ ತಂದುಕೊಟ್ಟಿದೆ.

ಕಡುಹಸಿರು ಬಣ್ಣದ ಕೋಟು, ತಲೆಗೂ ಅದೇ ಬಣ್ಣದ ಕ್ಯಾಪ್ ಧರಿಸಿಕೊಂಡು, ಕೈಯಲ್ಲಿ ಮಿರಿ ಮಿರಿ ಮಿಂಚುವ ‘ಐಸಿಸಿ ಗದೆ’ ಹಿಡಿದ ತೆಂಬಾ ‘ಕ್ರಿಕೆಟ್ ಕಾಶಿ’ ಲಾರ್ಡ್ಸ್ನಲ್ಲಿ ಕಪ್ಪುವರ್ಣೀಯರ ಆಶಾಕಿರಣವಾಗಿ ಹೊರಹೊಮ್ಮಿದರು. ನೂರಾರು ವರ್ಷಗಳ ಕಾಲ ತಮ್ಮ ಜನಾಂಗವನ್ನು ದಾಸ್ಯದ ಸಂಕೋಲೆಯಲ್ಲಿ ಬಿಗಿದಿಟ್ಟ ಶ್ವೇತವರ್ಣೀಯರ ನೆಲದಲ್ಲಿಯೇ ಟೆಸ್ಟ್ ಕ್ರಿಕೆಟ್ ಲೋಕದ ಸಾಮ್ರಾಟನಾಗಿ ಮೆರೆಯುವುದೆಂದರೆ ಸಾಮಾನ್ಯವೇ?

ಡಬ್ಲ್ಯುಟಿಸಿ ಫೈನಲ್ನಲ್ಲಿ ಆಸ್ಟ್ರೇಲಿಯಾದಂತಹ ಬಲಾಢ್ಯ ತಂಡವನ್ನು ಮಣಿಸಿದ್ದು ಕೂಡ ಮಹಾಸಾಧನೆಯೇ ಸರಿ. ಸಮಸಮಾಜದ ಪ್ರತಿಪಾದಕ ನೆಲ್ಸನ್ ಮಂಡೇಲಾ ಅವರ ನಾಡಿನ ‘ವಾಮನಮೂರ್ತಿ’ ತೆಂಬಾ ಈ ಎತ್ತರಕ್ಕೆ ಬೆಳೆದಿದ್ದು ಒಂದಿಡೀ ಜನಾಂಗದ ಯಶೋಗಾಥೆಯನ್ನು ಹೇಳುತ್ತದೆ ಎಂಬುದರಲ್ಲಿ ಅನುಮಾನವೇ ಇಲ್ಲ. ದಕ್ಷಿಣ ಆಫ್ರಿಕಾ ತಂಡದ ಮೊದಲ ಕಪ್ಪುವರ್ಣೀಯ ಹಾಗೂ ಎರಡನೇ ಬಿಳಿಯೇತರ ನಾಯಕ ಎಂಬ ಹೆಗ್ಗಳಿಕೆ ಅವರದ್ದು. 2006ರಲ್ಲಿ ನಾಯಕರಾಗಿದ್ದ ಆಷ್ವೆಲ್ ಪ್ರಿನ್ಸ್ ಶ್ವೇತವರ್ಣೀಯರಾಗಿರಲಿಲ್ಲ. ಅವರು ಕೂಡ ತಂಡದೊಳಗಿನ ‘ವರ್ಣಭೇದ’ ಬಿಸಿಯನ್ನು ಎದುರಿಸಿದ್ದವರು.

‘ಬ್ಲ್ಯಾಕ್ ಕೋಟಾ’ ನಾಯಕ ಎಂಬ ಮೂದಲಿಕೆಯನ್ನೂ ತೆಂಬಾ ಅನುಭವಿಸಿದ್ದಾರೆ. 2014ರಲ್ಲಿ ಅವರು ದಕ್ಷಿಣ ಆಫ್ರಿಕಾ ತಂಡಕ್ಕೆ ಪದಾರ್ಪಣೆ ಮಾಡಿದರು. 70ರ ದಶಕದಲ್ಲಿ ವರ್ಣಭೇದ ತಾರತಮ್ಯದ ಕಾರಣ ದಕ್ಷಿಣ ಅಫ್ರಿಕಾ ತಂಡವನ್ನು ನಿಷೇಧಿಸಲಾಗಿತ್ತು. 1991ರಿಂದ ನಿಷೇಧ ತೆರವಾದ ಮೇಲೆ ತಂಡವು ಅಂತರ
ರಾಷ್ಟ್ರೀಯ ಕ್ರಿಕೆಟ್ ಆಡುತ್ತಿದೆ.

ಆದರೆ ಆ ದೇಶದ ಬಹುಸಂಖ್ಯಾತರಾಗಿರುವ ಕಪ್ಪು ಜನಾಂಗದವರ ಪೈಕಿ ಇಲ್ಲಿಯವರೆಗೆ ಬರೀ 20 ಆಟಗಾರರಷ್ಟೇ ಪುರುಷರ ತಂಡವನ್ನು ಪ್ರತಿನಿಧಿಸಿದ್ದಾರೆ. ಅದರಲ್ಲೂ ಬ್ಯಾಟರ್ಗಳಾಗಿ ಆಡಿದವರು ಮೂವರು ಮಾತ್ರ. 2006ರಲ್ಲಿ ಲೂಟ್ಸ್ ಬಾಸ್ಮನ್ ಅವರು ಏಕದಿನ ತಂಡವನ್ನು ಪ್ರತಿನಿಧಿಸಿದ್ದರು. ಅವರ ನಂತರ ಖಾಯಾ ಝೋಂಡೊ ಅವರಿಗೆ ಕೇವಲ 5 ಟೆಸ್ಟ್ಗಳಲ್ಲಿ ಆಡುವ ಅವಕಾಶ ಸಿಕ್ಕಿತ್ತು. ಇವರನ್ನು ಬಿಟ್ಟರೆ ಉಳಿದವರೆಲ್ಲರೂ ಬೌಲರ್ಗಳೇ. ‘ಬ್ಯಾಟರ್ಗಳೇ ಶ್ರೇಷ್ಠ’ ಎಂಬ ಧೋರಣೆಯಿಂದ ಬಿಳಿಯರೇ ಹೆಚ್ಚು ಬ್ಯಾಟಿಂಗ್ ಮಾಡಿದ ಪರಿಣಾಮವೂ ಇದಾಗಿದೆ.

ಅದಕ್ಕೆ ಕಾರಣವೆಂದರೆ, ಬೌಲಿಂಗ್ ಕೌಶಲಗಳು ಮತ್ತು ದೇಹದಾರ್ಢ್ಯವು ಇಲ್ಲಿಯ ಜನರಲ್ಲಿ ಸಹಜವಾಗಿಯೇ ಮೇಳೈಸಿವೆ. ಆದ್ದರಿಂದ ಹೆಚ್ಚು ತರಬೇತಿಯ ಅಗತ್ಯವಿಲ್ಲ. ಆದರೆ, ಬ್ಯಾಟಿಂಗ್ ಕಲಿಯಲು ಪ್ರತಿಷ್ಠಿತ ಕ್ಲಬ್ಗಳಲ್ಲಿ ತರಬೇತಿಗೆ ಹೋಗಬೇಕು. ಅದಕ್ಕಾಗಿ ಬಹಳಷ್ಟು ದುಡ್ಡು ಖರ್ಚು ಮಾಡಬೇಕು. ಆದರೆ, ಆರ್ಥಿಕ ಸಬಲತೆ ಇರುವ ಕಪ್ಪುವರ್ಣದವರ ಕುಟುಂಬಗಳು ಕಡಿಮೆ. ಬ್ಯಾಟರ್ಗಳು ಹೆಚ್ಚು ಸಂಖ್ಯೆಯಲ್ಲಿ ಬರದಿರಲು ಇದೂ ಒಂದು ಕಾರಣ ಎಂದು ಕೆಲ ವರ್ಷಗಳ ಹಿಂದೆ ದಿಗ್ಗಜ ಬ್ಯಾಟರ್ ಹಾಶೀಂ ಆಮ್ಲಾ ಹೇಳಿದ್ದರು.

ಈಗ ತೆಂಬಾ ಬವುಮಾ ಬ್ಯಾಟರ್ ಆಗಿಯೂ ಯಶಸ್ವಿಯಾಗಿರುವುದು ದಕ್ಷಿಣ ಆಫ್ರಿಕಾದಲ್ಲಿ ಹೊಸ ಅಲೆ ಸೃಷ್ಟಿಯಾಗಿದೆ. ಡಬ್ಲ್ಯುಟಿಸಿ ಫೈನಲ್ನಲ್ಲಿ ಏಡನ್ ಮರ್ಕರಂ ಜೊತೆಗೆ ಅವರ ಜೊತೆಯಾಟ ತಂಡದ ಯಶಸ್ಸಿನಲ್ಲಿ ಮಹತ್ವದ ಪಾತ್ರ ವಹಿಸಿತು. ಎರಡು ಇನಿಂಗ್ಸ್ ಸೇರಿ ಒಟ್ಟು 102 ರನ್ ಗಳಿಸಿದರು. ಅವರ ಪ್ರೇರಣೆಯಿಂದ ಬ್ಯಾಟರ್ಗಳಾಗುವ ಕನಸು ಕಾಣುವ ಹುಡುಗರ ಸಂಖ್ಯೆ ಹೆಚ್ಚುತ್ತಿದೆ.

ತೆಂಬಾ ಅವರು 2014ರಲ್ಲಿ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಆಗ ತಂಡದಲ್ಲಿ ಎಬಿ ಡಿವಿಲಿಯರ್ಸ್, ಡೇವಿಡ್ ಮಿಲ್ಲರ್, ಫಾಫ್ ಡುಪ್ಲೆಸಿ, ಕ್ವಿಂಟನ್ ಡಿಕಾಕ್ ಅವರಂತಹ ಖ್ಯಾತನಾಮರು ಮಿಂಚುತ್ತಿದ್ದರು. ಅವರ ನಡುವೆ ತಮ್ಮ ಜಾಗ ಉಳಿಸಿಕೊಳ್ಳಲು ತೆಂಬಾ ಪಟ್ಟ ಶ್ರಮ ಅಷ್ಟಿಷ್ಟಲ್ಲ. ಬೆಂಚ್ನಲ್ಲಿ ಕಾಲ ಕಳೆದಿದ್ದೇ ಹೆಚ್ಚು. ಆದರೆ, 2016ರಲ್ಲಿ ಇಂಗ್ಲೆಂಡ್ ಎದುರಿನ ಟೆಸ್ಟ್ ಪಂದ್ಯದಲ್ಲಿ ಅವರ ಶತಕದ ಆಟಕ್ಕೆ ಮನಸೋಲದವರೇ ಇಲ್ಲ. ಟೆಸ್ಟ್ ಶತಕ ದಾಖಲಿಸಿದ ದಕ್ಷಿಣ ಆಫ್ರಿಕಾದ ಪ್ರಥಮ ಕಪ್ಪುವರ್ಣದ ಬ್ಯಾಟರ್ ಎಂಬ ಹೆಗ್ಗಳಿಕೆ ಅವರದು.

ತಂಡದಲ್ಲಿ ಶ್ವೇತವರ್ಣೀಯರಲ್ಲದ ಆರು ಆಟಗಾರರು ಇರುವುದು ಕಡ್ಡಾಯ, ಇಬ್ಬರು ಕಪ್ಪುಜನಾಂಗದವರು ಇರಬೇಕು ಎಂಬ ನಿಯಮ 2016ರಲ್ಲೇ ಜಾರಿಗೆ ಬಂದಿತು. ಇದಕ್ಕೆ ಬಹಳಷ್ಟು ವಿರೋಧಗಳೂ ವ್ಯಕ್ತವಾದವು. ಎಷ್ಟರಮಟ್ಟಿಗೆ ಎಂದರೆ, 2024ರಲ್ಲಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡಿದ ತಂಡದಲ್ಲಿ ಬರೀ ಒಬ್ಬ ಕಪ್ಪುವರ್ಣೀಯ ಆಟಗಾರ ಕಗಿಸೊ ರಬಾಡಗೆ ಮಾತ್ರ ಸ್ಥಾನ ನೀಡಲಾಗಿತ್ತು. ಕೊನೆಯ ಕ್ಷಣದಲ್ಲಿ ಲುಂಗಿ ಎನ್ಗಿಡಿ ಅವರನ್ನು ಟ್ರಾವೆಲ್ ರಿಸರ್ವ್ ಆಗಿ ಘೋಷಿಸಲಾಯಿತು. ಉಳಿದಂತೆ ಶ್ವೇತವರ್ಣೀಯ ರಲ್ಲದ ಕೇಶವ್ ಮಹಾರಾಜ್, ರೀಜಾ ಹೆನ್ರಿಕ್ಸ್, ಬಿಜಾರ್ನ್ ಫಾರ್ಚುನ್, ತಬ್ರೇಜ್ ಶಮ್ಸಿ ಮತ್ತು ಒಟ್ನೀಲ್ ಬಾರ್ತಮನ್ ಅವರನ್ನು ಸೇರಿಸಲಾಗಿತ್ತು. ಇದು ಬಹಳಷ್ಟು ಚರ್ಚೆಗೆ ಕಾರಣವಾಗಿತ್ತು. ಇದೆಲ್ಲದರ ನಡುವೆ ತೆಂಬಾ ಟೆಸ್ಟ್ ತಂಡದ ನಾಯಕರಾದಾಗ ಬಹಳಷ್ಟು ಜನರ ಹುಬ್ಬೇರಿದ್ದವು. ಸಾಮಾಜಿಕ ಜಾಲತಾಣಗಳಲ್ಲಿ ಅವರನ್ನು ಹಂಗಿಸುವ ಮೀಮ್ಗಳು ಹರಿದಾಡಿದ್ದವು. ಆದರೆ ಈಗ ಅದೇ ಸಾಮಾಜಿಕ ಜಾಲತಾಣ ತೆಂಬಾಗೆ ಬಹುಪರಾಕ್ ಹೇಳತೊಡಗಿವೆ. ಇದಲ್ಲವೇ ಸಾಧನೆಯೆಂದರೆ?

ತೆಂಬಾ ಅವರ ಯಶಸ್ಸು ಬರೀ ದಕ್ಷಿಣ ಆಫ್ರಿಕಾಕ್ಕೆ ಮಾತ್ರ ಸೀಮಿತವಲ್ಲ. ವೆಸ್ಟ್ ಇಂಡೀಸ್ ತಂಡಕ್ಕೂ ಪ್ರೇರಣೆಯಾಗಬೇಕು. ಬ್ರಿಟಿಷರು ಪರಿಚಯಿಸಿದ ಈ ಆಟವನ್ನು ದಶಕಗಳ ಹಿಂದೆ ಅಕ್ಷರಶಃ ಆಳಿದವರು ವಿಂಡೀಸ್ ತಂಡದವರು. ಏಕದಿನ ಕ್ರಿಕೆಟ್ನಲ್ಲಿ ಮೊದಲೆರಡೂ ವಿಶ್ವಕಪ್ ಗೆದ್ದವರು. 90ರ ದಶಕದವರೆಗೂ ಟೆಸ್ಟ್ ಮತ್ತು ಏಕದಿನ ಮಾದರಿಯಲ್ಲಿ ತಂಡವು ಬಲಶಾಲಿಯಾಗಿತ್ತು.ಕ್ಲೈವ್ ಲಾಯ್ಡ್ ಅವರಿಂದ ಕ್ರಿಸ್ ಗೇಲ್ವರೆಗೂ ಹಲವು ದಿಗ್ಗಜರನ್ನು ನೀಡಿದ ದೇಶ ಇದು. ಆದರೆ ನಂತರದಲ್ಲಿ ಕ್ಷೀಣವಾಯಿತು. ಈಗಂತೂ ವಿಶ್ವಕಪ್ ಟೂರ್ನಿಗಳಲ್ಲಿ ಅರ್ಹತೆ ಗಿಟ್ಟಿಸಲೂ ಸಾಧ್ಯವಾಗದಷ್ಟು ಸೊರಗಿದೆ. ದಕ್ಷಿಣ ಆಫ್ರಿಕಾ ಯಶಸ್ಸು ಕೆರಿಬಿಯನ್ ದ್ವೀಪಗಳಲ್ಲಿ ಪ್ರೇರಣೆಯ ಗಾಳಿಯಾಗಿ ಬೀಸಬಹುದೇ ಎಂದು ಕಾದು ನೋಡಬೇಕಷ್ಟೇ. ಈ ಹಾದಿಯಲ್ಲಿ
ಜಿಂಬಾಬ್ವೆ ಮತ್ತು ಕೆನ್ಯಾ ತಂಡಗಳಿಗೂ ತೆಂಬಾ ಪ್ರೇರಣೆಯಾಗಬಹುದು.

ಇನ್ನೊಂದೆಡೆ ಭಾರತ ಕ್ರಿಕೆಟ್ ತಂಡದ ಹೊಸ ಪರ್ವ ಆರಂಭವಾಗಲಿದೆ. ಯುವ ನಾಯಕ ಶುಭಮನ್ ಗಿಲ್ ನಾಯಕತ್ವದ ತಂಡವು ಇದೇ 20ರಿಂದ ಇಂಗ್ಲೆಂಡ್ನಲ್ಲಿ ಐದು ಪಂದ್ಯಗಳ ಟೆಸ್ಟ್ ಸರಣಿ ಆಡಲು ಸಿದ್ಧವಾಗಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಆರ್. ಅಶ್ವಿನ್ ನಿವೃತ್ತಿ ಘೋಷಿಸಿರುವ ಕಾರಣ ತಂಡದಲ್ಲಿ ಯುವ ಆಟಗಾರರಿಗೆ ಅವಕಾಶ ಸಿಕ್ಕಿದೆ. ತಮ್ಮ ಸಾಮರ್ಥ್ಯ ಸಾಬೀತು ಮಾಡುವುದರ ಜೊತೆಗೆ, 18 ವರ್ಷಗಳ ನಂತರ ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಸರಣಿ ಜಯದ ಕನಸು ನನಸು ಮಾಡಬೇಕಾದ ಗುರಿಯೂ ಅವರ ಮುಂದಿದೆ.

ಕನ್ನಡಿಗ ಕೆ.ಎಲ್. ರಾಹುಲ್, ಎಂಟು ವರ್ಷಗಳ ನಂತರ ಭಾರತ ತಂಡಕ್ಕೆ ಮರಳಿರುವ ಕರುಣ್ ನಾಯರ್, ಗಾಯದ ಸಮಸ್ಯೆಯ ಮಧ್ಯೆಯೂ ಬ್ಯಾಟರ್ಗಳಿಗೆ ದುಃಸ್ವಪ್ನವಾಗಿರುವ ಜಸ್ಪ್ರೀತ್ ಬೂಮ್ರಾ, ವೃತ್ತಿಜೀವನದ ಸಂಧ್ಯಾಕಾಲದಲ್ಲಿ ರುವ ರವೀಂದ್ರ ಜಡೇಜ ಅವರು ತಂಡದಲ್ಲಿರುವ ಹೆಚ್ಚು ಅನುಭವಿ ಆಟಗಾರರು. ಯಶಸ್ವಿ ಜೈಸ್ವಾಲ್, ಸಾಯಿ ಸುದರ್ಶನ್, ಧ್ರುವ್ ಜುರೇಲ್, ಅಭಿಮನ್ಯು ಈಶ್ವರನ್, ರಿಷಭ್ ಪಂತ್, ನಿತೀಶ್ ರೆಡ್ಡಿ ಹಾಗೂ ಪ್ರಸಿದ್ಧಕೃಷ್ಣ ಅವರಿಗೆ ತಾವು ದೂರ ಓಟದ ಕುದುರೆಗಳು ಎಂಬುದನ್ನು ಸಾಬೀತುಪಡಿಸುವ ಸಂದರ್ಭವೂ ಇದಾಗಿದೆ. ಇಂಗ್ಲೆಂಡ್ ನೆಲದಲ್ಲಿ ಭಾರತ ಇದುವರೆಗೆ 3 ಬಾರಿ ಮಾತ್ರ ಸರಣಿ ಗೆಲುವಿನ ಸಿಹಿ ಉಂಡಿದೆ.

ಇಂಗ್ಲೆಂಡ್ನಲ್ಲಿ ಆಡುವ ಭಾರತ ತಂಡವು ಎದುರಾಳಿ ಬಳಗದ 11 ಆಟಗಾರರ ಸವಾಲಿನ ಜೊತೆಗೆ ಅಲ್ಲಿಯ ಹವಾಮಾನ, ಕಟುವಾದ ಮೂದಲಿಕೆ, ವ್ಯಂಗ್ಯಗಳ ಮೂಲಕ ಕೆಣಕುವ ಪ್ರೇಕ್ಷಕರು, ಕಾಲೆಳೆಯುವ ಸ್ಥಳೀಯ ಮಾಧ್ಯಮಗಳೆಲ್ಲವನ್ನೂ ಎದುರಿಸಬೇಕು. ಅದಕ್ಕಾಗಿ ಗಟ್ಟಿಯಾದ ಮನೋಬಲ ಬೇಕು. ಇವೆಲ್ಲದರ ಪರಿಚಯ ಇರುವ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರಿಗೂ ಈ ಸರಣಿ ‘ಟೆಸ್ಟ್’ ಆಗಲಿದೆ ಎಂಬುದರಲ್ಲಿ ಅನುಮಾನವೇ ಇಲ್ಲ. ಸ್ವಾತಂತ್ರ್ಯಪೂರ್ವದಲ್ಲಿಯೇ ಇಂಗ್ಲಿಷರಿಗೆ ಕ್ರಿಕೆಟ್ನಲ್ಲಿ ‘ಪಾಠ’ ಕಲಿಸಿದ ದಲಿತ ಆಟಗಾರ ಬಾಲೂ ಪಲ್ವಂಕರ್, ಇಂಗ್ಲೆಂಡ್, ಆಸ್ಟ್ರೇಲಿಯಾ ತಂಡಗಳ ವಿರುದ್ಧ ದಿಟ್ಟವಾಗಿ ಆಡುವುದು ಹೇಗೆಂದು ತೋರಿಸಿಕೊಟ್ಟ ಕರ್ನಲ್ ಸಿ.ಕೆ. ನಾಯ್ಡು, ಮನ್ಸೂರ್ ಅಲಿಖಾನ್ ಪಟೌಡಿ, ಅಜಿತ್ ವಾಡೇಕರ್, ಬಿ.ಎಸ್. ಚಂದ್ರಶೇಖರ್, ಎರ್ರಪಳ್ಳಿ ಪ್ರಸನ್ನ, ಕಪಿಲ್ ದೇವ್, ಮಹೇಂದ್ರಸಿಂಗ್ ಧೋನಿ, ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರೆಲ್ಲರ ಯಶೋಗಾಥೆಗಳೂ ಭಾರತಕ್ಕೆ ದಾರಿದೀಪವಾಗಬಲ್ಲವು.

ಇಲ್ಲಿಯವರೆಗೆ ಆಗಿರುವ ಮೂರು ಆವೃತ್ತಿಗಳ ಪೈಕಿ ಮೊದಲೆರಡರಲ್ಲಿ ಭಾರತ ರನ್ನರ್ಸ್ ಅಪ್ ಆಗಿತ್ತು. ಅದರಲ್ಲಿ ಒಂದು ಸಲ ವಿರಾಟ್ ಮತ್ತು ಮತ್ತೊಂದು ಬಾರಿ ರೋಹಿತ್ ನಾಯಕರಾಗಿದ್ದರು. ಹೋದ ಸಲ ರೋಹಿತ್ ನಾಯಕತ್ವ ತಂಡವು ಫೈನಲ್ ಪ್ರವೇಶಿಸುವಲ್ಲಿ ವಿಫಲವಾಗಿತ್ತು. ಇದೀಗ ಡಬ್ಲ್ಯುಟಿಸಿ ನಾಲ್ಕನೇ ಆವೃತ್ತಿಯಲ್ಲಿ ಭಾರತ ಆಡುತ್ತಿರುವ ಮೊದಲ ಸರಣಿ ಇದಾಗಿದ್ದು, ಐದು ಟೆಸ್ಟ್ಗಳನ್ನು ಆಡಲಿದೆ. ಆ ಮೂರು ಆವೃತ್ತಿಗಳಲ್ಲಿ ಆಡಿರುವ ಅನುಭವ ಗಿಲ್ ಅವರಿಗೆ ಇದೆ.

ಉಪನಾಯಕ ರಿಷಭ್ ಪಂತ್ ಅವರಿಗೆ ವಿದೇಶಿ ನೆಲದಲ್ಲಿ ಮಿಂಚಿದ ಚೆಂದದ ನೆನಪುಗಳಿವೆ. ಬೂಮ್ರಾ ಎಂಬ ‘ವಿಕೆಟ್ ಯಂತ್ರದ’ ಬಲ ತಂಡಕ್ಕಿದೆ. ಹೋದ ವರ್ಷ ಆಸ್ಟ್ರೇಲಿಯಾದಲ್ಲಿ ಮಿಂಚಿದ್ದ ನಿತೀಶ್ ಕುಮಾರ್ ರೆಡ್ಡಿ, ವೇಗಿ ಪ್ರಸಿದ್ಧಕೃಷ್ಣ ಮತ್ತು ಸ್ಪಿನ್ನರ್ ಕುಲದೀಪ್ ಯಾದವ್ ಅವರಿಗೆ ತಮ್ಮ ಪ್ರತಿಭೆಯನ್ನು ಪಣಕ್ಕೊಡ್ಡುವ ಸುವರ್ಣಾವಕಾಶವಾಗಿದೆ. ಉತ್ತಮ ಆರಂಭ ಯಶಸ್ವಿ ಮುಕ್ತಾಯಕ್ಕೆ ಮುನ್ನುಡಿಯಾಗಬಲ್ಲದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.