ಇತರೆ ರನ್‌ 4; 10 ಮಂದಿ ಶೂನ್ಯಕ್ಕೆ ಔಟ್‌!

ಬುಧವಾರ, ಮೇ 22, 2019
29 °C

ಇತರೆ ರನ್‌ 4; 10 ಮಂದಿ ಶೂನ್ಯಕ್ಕೆ ಔಟ್‌!

Published:
Updated:

ಬೆಂಗಳೂರು: ಎಲ್ಲ 10 ಆಟಗಾರ್ತಿಯರೂ ಶೂನ್ಯಕ್ಕೆ ಔಟ್‌. ತಂಡ ಕೇವಲ ನಾಲ್ಕು ರನ್‌ಗಳಿಗೆ ಆಲೌಟ್‌!

ಕೇರಳದ ಮಲಪ್ಪುರಂ ಜಿಲ್ಲೆಯ ಪೆರಿಂದಲ್‌ಮಣ್ಣ ಕ್ರೀಡಾಂಗಣದಲ್ಲಿ ಬುಧವಾರ ನಡೆದ 19 ವರ್ಷದೊಳಗಿನ ಮಹಿಳೆಯರ ಅಂತರ ಜಿಲ್ಲಾ ಕ್ರಿಕೆಟ್ ಟೂರ್ನಿಯಲ್ಲಿ ಈ ಅಪರೂಪದ ‘ದಾಖಲೆ’ ನಿರ್ಮಾಣವಾಯಿತು.

ವಯನಾಡ್ ಜಿಲ್ಲಾ ತಂಡದ ವಿರುದ್ಧ ಟಾಸ್‌ ಗೆದ್ದ ಕಾಸರಗೋಡು ಜಿಲ್ಲಾ ತಂಡದ ನಾಯಕಿ ಅಕ್ಷತಾ ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ತಂಡದ ಎಲ್ಲ ಆಟಗಾರ್ತಿಯರೂ ಬೌಲ್ಡ್ ಔಟ್ ಆಗಿ ಮರಳಿದರು. ವಯನಾಡ್ ತಂಡದ ಬೌಲರ್‌ಗಳು ನೀಡಿದ ನಾಲ್ಕು ಇತರೆ ರನ್‌ಗಳೇ ತಂಡದ ಗಳಿಕೆಯಾಯಿತು.

ಆರಂಭಿಕ ಆಟಗಾರ್ತಿಯರಾದ ಕೆ.ವೀಕ್ಷಿತ ಮತ್ತು ಎಸ್‌.ಚೈತ್ರ ಮೊದಲ ಎರಡು ಓವರ್‌ ‘ಕೆಚ್ಚೆದೆಯ’ ಆಟವಾಡಿದರು. ಮೂರನೇ ಓವರ್‌ನಲ್ಲಿ ಎದುರಾಳಿ ತಂಡದ ನಾಯಕಿ ನಿತ್ಯಾ ಲೂರ್ದ್‌ ಮೂರು ವಿಕೆಟ್ ಕಬಳಿಸಿದರು. ಇದರೊಂದಿಗೆ ತಂಡದ ಪೆರೇಡ್‌ ಆರಂಭವಾಯಿತು. ವಯನಾಡ್ ತಂಡ ಒಂದೇ ಓವರ್‌ನಲ್ಲಿ ಗುರಿ ಮುಟ್ಟಿತು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 6

  Amused
 • 2

  Sad
 • 0

  Frustrated
 • 2

  Angry

Comments:

0 comments

Write the first review for this !