ಸೋಮವಾರ, ನವೆಂಬರ್ 18, 2019
25 °C

ಎಲ್ಗರ್‌ ತಲೆಗೆ ಅಪ್ಪಳಿಸಿದ ಬೌನ್ಸರ್‌

Published:
Updated:
Prajavani

ರಾಂಚಿ: ಸೋಮವಾರದ ಆಟದ ವೇಳೆ ಭಾರತದ ಉಮೇಶ್‌ ಯಾದವ್‌ ಅವರ ಬೌನ್ಸರ್‌, ದಕ್ಷಿಣ ಆಫ್ರಿಕಾದ ಆರಂಭಿಕ ಬ್ಯಾಟ್ಸ್‌ಮನ್‌ ಡೀನ್‌ ಎಲ್ಗರ್‌ ಅವರ ತಲೆಗೆ ಅಪ್ಪಳಿಸಿತು.

ಚಹಾ ವಿರಾಮಕ್ಕೆ ಒಂದು ನಿಮಿಷ ಬಾಕಿ ಇದ್ದಾಗ ಈ ಘಟನೆ ನಡೆಯಿತು. ಕ್ರೀಸ್‌ನಲ್ಲೇ ಕುಸಿದು ಬಿದ್ದ ಎಲ್ಗರ್‌ ಅವರಿಗೆ ತಕ್ಷಣವೇ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಬಳಿಕ ತಂಡದ ವೈದ್ಯಕೀಯ ಸಿಬ್ಬಂದಿ, ಡೀನ್‌ ಅವರನ್ನು ಅಂಗಳದಿಂದ ಹೊರಗೆ ಕರೆದುಕೊಂಡು ಹೋದರು. ಅಂಗಳ ತೊರೆಯುವ ವೇಳೆ 29 ಎಸೆತಗಳಲ್ಲಿ 16ರನ್‌ ಗಳಿಸಿದ್ದ ಅವರು ಬಳಿಕ ಬ್ಯಾಟಿಂಗ್‌ಗೆ ಬರಲಿಲ್ಲ.

ಅವರ ಬದಲು ಕ್ರೀಸ್‌ಗೆ ಇಳಿದ ತೆವುನಿಶ್‌ ಡಿ ಬ್ರ್ಯೂನ್‌ (ಬ್ಯಾಟಿಂಗ್‌ 30; 42ಎ, 4ಬೌಂ, 1ಸಿ) ತಂಡಕ್ಕೆ ಆಸರೆಯಾದರು.

ಪ್ರತಿಕ್ರಿಯಿಸಿ (+)