ಶುಕ್ರವಾರ, ಜುಲೈ 1, 2022
24 °C

ಹಳೆಯ ಟ್ವೀಟ್ ಕೆದಕಿದ್ದು ಅಸಂಮಜಸ : ಮೈಕೆಲ್ ವಾನ್ ಅಸಮಾಧಾನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಂಡನ್: ಜನಾಂಗೀಯ ನಿಂದನೆ ಕುರಿತು ಹಳೆಯ ಟ್ವೀಟ್ ಸಂದೇಶಗಳನ್ನು ಮುಂದಿಟ್ಟುಕೊಂಡು ಆಟಗಾರರನ್ನು ‘ಬೇಟೆ‘ ಆಡುತ್ತಿರುವುದು ಅಪಹಾಸ್ಯದ ಪರಮಾವಧಿಯಾಗಿದೆ ಎಂದು ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಮೈಕೆಲ್ ವಾನ್ ಆಕ್ರೋಶವ್ಯಕ್ತಪಡಿಸಿದ್ದಾರೆ. 

ಇಂಗ್ಲೆಂಡ್‌ನ ಸೀಮಿತ ಓವರ್‌ಗಳ ಕ್ರಿಕೆಟ್ ತಂಡದ ನಾಯಕ ಏಯಾನ್ ಮಾರ್ಗನ್ ಮತ್ತು ವಿಕೆಟ್‌ಕೀಪರ್ ಜೋಸ್ ಬಟ್ಲರ್ ಅವರು ಕೆಲವು ವರ್ಷಗಳ ಹಿಂದೆ ಮಾಡಿದ ಟ್ವೀಟ್ ಸಂದೇಶಗಳು ಭಾರತದ ಆಟಗಾರರನ್ನು ಜನಾಂಗೀಯ ನಿಂದನೆ ಮಾಡುವಂತಿದ್ದವು ಎಂಬ ಆರೋಪ ಎದುರಿಸುತ್ತಿದ್ದಾರೆ. ಬುಧವಾರ ಅವರನ್ನು ಇಂಗ್ಲೆಂಡ್ ಮತ್ತು ವೇಲ್ಸ್‌ ಕ್ರಿಕೆಟ್ ಮಂಡಳಿ (ಇಸಿಬಿ) ಯು ವಿಚಾರಣೆಗೊಳಪಡಿಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ವಾನ್, ‘ಮಾರ್ಗನ್, ಬಟ್ಲರ್ ಮತ್ತು ಆ್ಯಂಡರ್ಸನ್ ಅವರು ಟ್ವೀಟ್ ಮಾಡಿದ ಕಾಲಘಟ್ಟದಲ್ಲಿ ಅವರು ಆಕ್ಷೇಪಾರ್ಹವಾಗಿದ್ದವು. ಇಷ್ಟು ವರ್ಷಗಳ ನಂತರವೂ  ಅವುಗಳನ್ನು ಅದೇ ದೃಷ್ಟಿಕೋನದಲ್ಲಿ ನೋಡುವುದು ಎಷ್ಟು ಸರಿ‘ ಎಂದು ಟ್ವೀಟ್ ಮಾಡಿದ್ದಾರೆ.

‘ಸರ್‘ ಎಂಬ ಪದಬಳಕೆ ಮಾಡಿ ಭಾರತೀಯ ಆಟಗಾರರನ್ನು ಅಪಹಾಸ್ಯ ಮಾಡಿದ್ದನ್ನು ಇಸಿಬಿ ಗಂಭೀರವಾಗಿ ಪರಿಗಣಿಸಿದೆ. ಈ ಸಂದೇಶಗಳನ್ನು ಬಟ್ಲರ್ ಸ್ಕ್ರೀನ್ ಶಾಟ್ ಮಾಡಿಕೊಂಡು ಬೇರೆಯವರೆಗೂ ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿದ್ದರೆನ್ನಲಾಗಿದೆ.

 2012–13ರಲ್ಲಿ ಜನಾಂಗೀಯ ನಿಂದನೆ ಟ್ವೀಟ್ ಮಾಡಿದ್ದ ಇಂಗ್ಲೆಂಡ್ ಆಟಗಾರ ಒಲಿ ರಾಬಿನ್ಸನ್ ಅವರನ್ನು ಕಳೆದ ವಾರ ತಂಡದಿಂದ ಅಮಾನತು ಮಾಡಲಾಗಿತ್ತು. ಮಿಮ್ಮಿ ಆ್ಯಂಡರ್ಸನ್ 2010ರಲ್ಲಿ ಮಾಡಿದ್ದ ಟ್ವೀಟ್ ಕುರಿತೂ ತನಿಖೆ ಆರಂಭಿಸಲಾಗಿತ್ತು.

ತನಿಖೆಯ ನಂತರ ತಪ್ಪು ಸಾಬೀತಾದರೆ ಎಲ್ಲರ ಮೇಲೂ ತಕ್ಕ ಕ್ರಮ ಕೈಗೊಳ್ಳಲಾಗುವುದು ಎಂದು ಇಸಿಬಿ ಈಗಾಗಲೇ ಸ್ಪಷ್ಟಪಡಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು