ವೆಂಕಟೇಶ್ ಪ್ರಸಾದ್‌ ಜನ್ಮದಿನಕ್ಕೆ ಬಿಸಿಸಿಐ ವಿಶೇಷ ಸಂದೇಶ

7

ವೆಂಕಟೇಶ್ ಪ್ರಸಾದ್‌ ಜನ್ಮದಿನಕ್ಕೆ ಬಿಸಿಸಿಐ ವಿಶೇಷ ಸಂದೇಶ

Published:
Updated:

ಮುಂಬೈ: ಹಿರಿಯ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್‌ಗೆ ಭಾನು ವಾರ ತಮ್ಮ 49ನೇ ಜನ್ಮದಿನ ಆಚರಿಸಿಕೊಂಡರು. ಅವರಿಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ವಿಶಿಷ್ಟ ರೀತಿಯಲ್ಲಿ ಶುಭಾಶಯ ಕೋರಿದೆ.

ಬೆಂಗಳೂರಿನಲ್ಲಿ ನಡೆದಿದ್ದ 1996ರ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್‌ಫೈನಲ್‌ನಲ್ಲಿ ವೆಂಕಟೇಶ್ ಪ್ರಸಾದ್ ಮತ್ತು ಪಾಕಿಸ್ತಾನದ ಬ್ಯಾಟ್ಸ್‌ಮನ್ ಅಮೀರ್ ಸೊಹೇಲ್ ಅವರ ನಡುವಿನ ಜಟಾಪಟಿಯ ವಿಡಿಯೊ ತುಣುಕನ್ನು ಟ್ವಿಟರ್‌ಗೆ ಹಾಕಿರುವ ಬಿಸಿಸಿಐ, ‘ಈ ಘಟನೆಯು ಕ್ರಿಕೆಟ್‌ ಅಭಿಮಾನಿಗಳ ಮನಸ್ಸಿನಿಂದ ಮಾಸಲು ಸಾಧ್ಯವೇ ಇಲ್ಲ. ಇದನ್ನು ನೆನಪಿಸಿಕೊಳ್ಳಲು ಇವತ್ತು ಸೂಕ್ತ ಸಮಯ’ ಎಂದು ಬರೆದಿದೆ.

‘ನಿಧಾನಗತಿಯ ಎಸೆತಗಳನ್ನು ಕರಾರುವಕ್ಕಾಗಿ ಪ್ರಯೋಗಿಸಿ ಬ್ಯಾಟ್ಸ್‌ಮನ್‌ಗಳಿಗೆ ಆಘಾತ ನೀಡುತ್ತಿದ್ದ ನಿಸ್ಸೀಮ್ ವೆಂಕಟೇಶ್ ಪ್ರಸಾದ್‌ಗೆ ಶುಭಾಶಯಗಳು’ ಎಂದು ಸಚಿನ್ ತೆಂಡೂಲ್ಕರ್ ಟ್ವೀಟ್ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !