ಕ್ರಿಕೆಟ್: ಮುರಳಿ ವಿಜಯ್ ಶತಕ; ರಾಹುಲ್ ಅರ್ಧಶತಕ

7
ಆಸ್ಟ್ರೇಲಿಯಾ ಇಲೆವನ್ ವಿರುದ್ಧದ ಪಂದ್ಯ

ಕ್ರಿಕೆಟ್: ಮುರಳಿ ವಿಜಯ್ ಶತಕ; ರಾಹುಲ್ ಅರ್ಧಶತಕ

Published:
Updated:
Deccan Herald

ಸಿಡ್ನಿ: ಭಾರತ ಕ್ರಿಕೆಟ್ ತಂಡದ ಆರಂಭಿಕ ಜೋಡಿ ಮುರಳಿ ವಿಜಯ್ ಮತ್ತು ಕೆ.ಎಲ್‌. ರಾಹುಲ್ ಅಂತೂ ಇಂತೂ ಲಯಕ್ಕೆ ಮರಳಿದರು.

ಶನಿವಾರ ಇಲ್ಲಿ ಆಸ್ಟ್ರೇಲಿಯಾ ಇಲೆವನ್ ಎದುರು ಮುಕ್ತಾಯವಾದ  ಅಭ್ಯಾಸ ಪಂದ್ಯದಲ್ಲಿ ಮುರಳಿ ವಿಜಯ್ (129; 132ಎಸೆತ, 16ಬೌಂಡರಿ, 5 ಸಿಕ್ಸರ್) ಮತ್ತು ರಾಹುಲ್ (62; 98ಎ, 8ಬೌಂ, 1ಸಿ) ಭರ್ಜರಿ ಬ್ಯಾಟಿಂಗ್ ಮಾಡಿದರು. ಪಂದ್ಯ ಡ್ರಾ ಆಯಿತು.

ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಮುರಳಿ ಬ್ಯಾಟಿಂಗ್ ಮಾಡಿರಲಿಲ್ಲ. ಶುಕ್ರವಾರ ಫೀಲ್ಡಿಂಗ್ ಮಾಡುವಾಗ ಪೃಥ್ವಿ ಶಾ ಗಾಯಗೊಂಡಿದ್ದರು. ಅವರ ಎಡ ಪಾದದಲ್ಲಿ ಉರಿಯೂತ ಕಂಡುಬಂದಿದ್ದು, ಮೊದಲ ಟೆಸ್ಟ್‌ನಲ್ಲಿ ಆಡುತ್ತಿಲ್ಲ. ಆದ್ದರಿಂದ  ಮುರಳಿ ವಿಜಯ್ ಅವಕಾಶ ಪಡೆಯುವುದು ಬಹುತೇಕ ಖಚಿತವಾಗಿದೆ. ಅವರು ಶತಕ ಹೊಡೆದಿರುವುದು ತಂಡದಲ್ಲಿ ವಿಶ್ವಾಸ ಹೆಚ್ಚಿಸಿದೆ.

ಪ್ರಥಮ ಇನಿಂಗ್ಸ್‌ನಲ್ಲಿ ರಾಹುಲ್ ಕೇವಲ ಮೂರು ರನ್ ಗಳಿಸಿದ್ದರು. ಇದಕ್ಕಾಗಿ ತಂಡದ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಅವರಿಂದಲೂ ಟೀಕೆಗೊಳಗಾಗಿದ್ದರು. ಆದರೆ  ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ಗಳ ಎದುರು ಭಾರತದ ಬೌಲರ್‌ಗಳು ಬಸವಳಿದರು. ಹ್ಯಾರಿ ನೀಲ್ಸನ್ (100ರನ್) ಮತ್ತು ಆ್ಯರನ್ ಹಾರ್ಡಿ (86 ರನ್) ಅವರ ಅಬ್ಬರದ ಬ್ಯಾಟಿಂಗ್‌ನಿಂದ ತಂಡವು 544 ರನ್‌ಗಳನ್ನು ಪೇರಿಸಿತು.

ಡಿಸೆಂಬರ್ 6ರಿಂದ ಮೊದಲ ಟೆಸ್ಟ್‌ ಆರಂಭವಾಗಲಿದೆ.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಕರ್ನಾಟಕ 358; ಆಸ್ಟ್ರೇಲಿಯಾ ಇಲೆವನ್ 544, ಎರಡನೇ ಇನಿಂಗ್ಸ್: ಕರ್ನಾಟಕ: 43.4 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 211 (ಕೆ.ಎಲ್. ರಾಹುಲ್ 62, ಮುರಳಿ ವಿಜಯ್ 129, ಹನುಮವಿಹಾರಿ ಔಟಾಗದೆ 15) ಫಲಿತಾಂಶ: ಪಂದ್ಯ ಡ್ರಾ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !