ಅಹಮದಾಬಾದ್: ಹಾಲಿ ಚಾಂಪಿಯನ್ ಕರ್ನಾಟಕ ತಂಡವು ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಸರಣಿಯಲ್ಟಿ ಈಗಾಗಲೇ ಕ್ವಾರ್ಟರ್ಫೈನಲ್ ಪ್ರವೇಶಿಸಿದೆ. ಇದೀಗ ಎ ಗುಂಪಿನಲ್ಲಿ ಕೊನೆಯ ಪಂದ್ಯವನ್ನು ಆಡಲು ಸಿದ್ಧವಾಗಿದೆ.

ಟೂರ್ನಿಯುದ್ದಕ್ಕೂ ಸೋಲಿಲ್ಲದೇ ಮುನ್ನುಗ್ಗಿರುವ ಮಯಂಕ್ ಅಗರವಾಲ್ ನಾಯಕತ್ವದ ತಂಡವು ಅಂತಿಮ ಪಂದ್ಯದಲ್ಲಿ ಮಧ್ಯಪ್ರದೇಶ ತಂಡವನ್ನು ಎದುರಿಸಲಿದೆ. ಆಲ್ರೌಂಡರ್ ವೆಂಕಟೇಶ್ ಅಯ್ಯರ್ ನಾಯಕತ್ವದ ಮಧ್ಯಪ್ರದೇಶ ತಂಡಕ್ಕೆ ಇದು ಮಹತ್ವದ ಪಂದ್ಯವಾಗಿದೆ. ಗುಂಪಿನ ಮೊದಲ ನಾಲ್ಕು ಪಂದ್ಯಗಳಲ್ಲಿ ಸತತ ಗೆಲುವು ಸಾಧಿಸಿದ್ದ ತಂಡವು ಅಗ್ರಸ್ಥಾನದಲ್ಲಿಯೇ ಇತ್ತು. ಆದರೆ ಕಳೆದೆರಡು ಪಂದ್ಯಗಳಲ್ಲಿ ಪುದುಚೇರಿ ಮತ್ತು ಜಾರ್ಖಂಡ್ ತಂಡಗಳ ಎದುರು ಸೋತಿತ್ತು. ಅದರಿಂದಾಗಿ ನಾಲ್ಕನೇ ಸ್ಥಾನಕ್ಕೆ ಕುಸಿದಿತ್ತು.

ಇದರಿಂದಾಗಿ ಎರಡನೇ ಸ್ಥಾನದಲ್ಲಿರುವ ಕೇರಳ, ಮೂರನೇಯ ಸ್ಥಾನದಲ್ಲಿರುವ ಜಾರ್ಖಂಡ್ ಹಾಗೂ ಮಧ್ಯಪ್ರದೇಶ ತಂಡಗಳು ತಲಾ 16 ಅಂಕ ಗಳಿಸಿವೆ. ಜಾರ್ಖಂಡ್ ತಂಡವು ತ್ರಿಪುರಾ ಮತ್ತು ಕೇರಳ ಬಳಗವು ತಮಿಳುನಾಡು ವಿರುದ್ಧ ಕೊನೆಯ ಪಂದ್ಯ ಆಡಲಿವೆ.

ಒಂದೊಮ್ಮೆ ಮೂರು ತಂಡಗಳೂ ತಮ್ಮ ಪಾಲಿನ ಪಂದ್ಯಗಳಲ್ಲಿ ಗೆದ್ದುಬಿಟ್ಟರೆ ಪಾಯಿಂಟ್ ಸಮಬಲ ಸಾಧಿಸುತ್ತವೆ. ಆಗ ನೆಟ್ ರನ್ರೇಟ್ ಆಧಾರದಲ್ಲಿ ಎರಡನೇ ಸ್ಥಾನ ಪಡೆದು ಕ್ವಾರ್ಟರ್ಫೈನಲ್ ಪ್ರವೇಶಿಸುವ ತಂಡವನ್ನು ನಿರ್ಧರಿಸಲಾಗುತ್ತದೆ. ಇದರಿಂದಾಗಿ ಕೊನೆಯ ಸುತ್ತಿನ ಪಂದ್ಯಗಳು ಕುತೂಹಲ ಕೆರಳಿಸಿವೆ. ಆದರೆ 24 ಅಂಕ ಗಳಿಸಿರುವ ಕರ್ನಾಟಕದ ಅಗ್ರಸ್ಥಾನಕ್ಕೆ ಮಾತ್ರ ಯಾವುದೇ ಕಂಟಕವಿಲ್ಲ. ಅಜೇಯ ಓಟವನ್ನು ಮುಂದುವರಿಸುವ ಛಲದಲ್ಲಿ ಮಯಂಕ್ ಬಳಗವಿದೆ.

ನಾಲ್ಕು ಶತಕ ಗಳಿಸಿರುವ ದೇವದತ್ತ ಪಡಿಕ್ಕಲ್, ತಲಾ ಎರಡು ಶತಕ ಸಾಧಿಸಿರುವ ಮಯಂಕ್ ಅಗರವಾಲ್ ಮತ್ತು ಕರುಣ್ ನಾಯರ್, ಉತ್ತಮ ಲಯದಲ್ಲಿರುವ ಅಭಿನವ್ ಮನೋಹರ್, ಸ್ಮರಣ್ ರವಿಚಂದ್ರನ್, ಕೆ.ಎಲ್. ಶ್ರೀಜಿತ್, ಆಲ್ರೌಂಡರ್ ಶ್ರೇಯಸ್ ಗೋಪಾಲ್ ಅವರು ತಂಡದ ಶಕ್ತಿಯಾಗಿದ್ದಾರೆ.

ಬೌಲಿಂಗ್ ವಿಭಾಗದ ಹೊಣೆ ವೈಶಾಖ ವಿಜಯಕುಮಾರ್, ಅಭಿಲಾಷ್ ಶೆಟ್ಟಿ ಅವರ ಮೇಲೆ ಬೀಳಲಿದೆ. ಹೊಸ ಪ್ರತಿಭೆ ಧ್ರುವ ಪ್ರಭಾಕರ್ ಕೂಡ ಅವಕಾಶ ಪಡೆಯಬಹುದು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ರಜತ್ ಪಾಟೀದಾರ್, ವೆಂಕಟೇಶ್ ಅಯ್ಯರ್ ಅವರು ಮಧ್ಯಪ್ರದೇಶ ತಂಡದ ಬ್ಯಾಟಿಂಗ್ ವಿಭಾಗದ ಪ್ರಮುಖರಾಗಿದ್ದಾರೆ.

ಬೌಲರ್ಗಳಾದ ಕುಮಾರ ಕಾರ್ತಿಕೇಯ, ಮಂಗೇಶ್ ಯಾದವ್, ಸಾರಾಂಶ್ ಜೈನ್, ಶುಭಂ ಶರ್ಮಾ ಹಾಗೂ ಶಿವಾಂಗ್ ಕುಮಾರ್ ಅವರ ಮುಂದೆ ಕರ್ನಾಟಕದ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕುವ ಸವಾಲಿದೆ.

ಪಂದ್ಯ ಆರಂಭ: ಬೆಳಿಗ್ಗೆ 9

ನಾಕೌಟ್ಗೆ ಮಯಂಕ್ ಬಳಗ

ಬೆಂಗಳೂರಿನ ಬಿಸಿಸಿಐ ಶ್ರೇಷ್ಠತಾ ಕೇಂದ್ರದಲ್ಲಿ ಇದೇ 12ರಿಂದ ನಡೆಯಲಿರುವ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ನಾಕೌಟ್ ಹಂತದ ಪಂದ್ಯಗಳೀಗೆ ಕರ್ನಾಟಕ ತಂಡವನ್ನು ಆಯ್ಕೆ ಮಾಡಿದೆ. ಕಳೆದೆರಡು ಪಂದ್ಯಗಳಲ್ಲಿ ಆಡಿದ್ದ ಕೆ.ಎಲ್. ರಾಹುಲ್ ಮತ್ತು ಪ್ರಸಿದ್ಧ ಕೃಷ್ಣ ಅವರು ನ್ಯೂಜಿಲೆಂಡ್ ಎದುರಿನ ಏಕದಿನ ಸರಣಿಯಲ್ಲಿ ಆಡಲು ಭಾರತ ತಂಡವನ್ನು ಸೇರಿಕೊಂಡಿದ್ದಾರೆ.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಬುಧವಾರ ಪ್ರಕಟಿಸಿರುವ 15 ಆಟಗಾರರ ತಂಡ ಇಂತಿದೆ

ಮಯಂಕ್ ಅಗರವಾಲ್ (ನಾಯಕ) ಕರುಣ್ ನಾಯರ್ (ಉಪನಾಯಕ) ದೇವದತ್ತ ಪಡಿಕ್ಕಲ್ ಆರ್. ಸ್ಮರಣ್ ಕೆ.ಎಲ್. ಶ್ರೀಜಿತ್ ಅಭಿನವ್ ಮನೋಹರ್ ಶ್ರೇಯಸ್ ಗೋಪಾಲ್ ವಿ. ವೈಶಾಖ ಎಲ್. ಮನ್ವಂತ್ ಕುಮಾರ್ ಶ್ರೀಷಾ ಆಚಾರ್ ಅಭಿಲಾಷ್ ಶೆಟ್ಟಿ ಬಿ.ಆರ್. ಶರತ್ ಹರ್ಷಿಲ್ ಧರ್ಮಾನಿ ಧ್ರುವ ಪ್ರಭಾಕರ್ ವಿದ್ಯಾಧರ್ ಪಾಟೀಲ. ಕೆ. ಯರೇಗೌಡ (ಕೋಚ್) ಮನ್ಸೂರ್ ಅಲಿ ಖಾನ್ (ಸಹಾಯಕ ಕೋಚ್) ಶಬರೀಶ್ ಮೋಹನ್ (ಫೀಲ್ಡಿಂಗ್ ಕೋಚ್) ಪಿ.ವಿ. ಸುಮಂತ್ (ಮ್ಯಾನೇಜರ್). ಅಭಿಷೇಕ್ ಕುಲಕರ್ಣಿ (ಫಿಸಿಯೊ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.