ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌: ವಿಭೂಷಣ್‌ ಅಬ್ಬರದ ದ್ವಿಶತಕ

Last Updated 20 ಮೇ 2019, 19:32 IST
ಅಕ್ಷರ ಗಾತ್ರ

ಬೆಂಗಳೂರು: ವಿಭೂಷಣ್‌ (ಔಟಾಗದೆ 299; 174ಎ, 37ಬೌಂ, 14ಸಿ) ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಹಮ್ಮಂಡ್ಸ್‌ ಕ್ಲಬ್‌ ತಂಡವು ಕೆಎಸ್‌ಸಿಎ 16 ವರ್ಷದೊಳಗಿನವರ ಅಂತರ ಕ್ಲಬ್‌ (ಗುಂಪು–1, ಡಿವಿಷನ್‌ 1,2,3) ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಜಯಭೇರಿ ಮೊಳಗಿಸಿದೆ.

ಸೋಮವಾರ ನಡೆದ ಹೋರಾಟದಲ್ಲಿ ಹಮ್ಮಂಡ್ಸ್‌ ಕ್ಲಬ್‌ 299 ರನ್‌ಗಳಿಂದ ಜುಪಿಟರ್‌ ಕ್ರಿಕೆಟರ್ಸ್‌ ಸಂಸ್ಥೆ ತಂಡವನ್ನು ಸೋಲಿಸಿತು.

ಮೊದಲು ಬ್ಯಾಟ್‌ ಮಾಡಿದ ಹಮ್ಮಂಡ್ಸ್‌ ಕ್ಲಬ್‌ 50 ಓವರ್‌ಗಳಲ್ಲಿ 2 ವಿಕೆಟ್‌ಗೆ 396ರನ್‌ ದಾಖಲಿಸಿತು. ಕಠಿಣ ಗುರಿ ಬೆನ್ನಟ್ಟಿದ ಜು‍ಪಿಟರ್‌ ಕ್ರಿಕೆಟರ್ಸ್‌ 25.3 ಓವರ್‌ಗಳಲ್ಲಿ 97ರನ್‌ಗಳಿಗೆ ಆಲೌಟ್‌ ಆಯಿತು.

ವಿಭೂಷಣ್‌, ಬೌಂಡರಿ ಮತ್ತು ಸಿಕ್ಸರ್‌ಗಳ ಮೂಲಕವೇ 232ರನ್‌ ದಾಖಲಿಸಿದರು. ಇದು ಅವರ ಅಬ್ಬರಕ್ಕೆ ಸಾಕ್ಷಿಯಂತಿತ್ತು.

ಸಂಕ್ಷಿಪ್ತ ಸ್ಕೋರ್‌: ಹಮ್ಮಂಡ್ಸ್‌ ಕ್ಲಬ್‌: 50 ಓವರ್‌ಗಳಲ್ಲಿ 2 ವಿಕೆಟ್‌ಗೆ 396 (ವಿಭೂಷಣ್ ಔಟಾಗದೆ 299, ರಿಷಭ್‌ ಅಪ್ಪಚ್ಚು 36, ಕೆ.ಪಿ.ಕಾರ್ತಿಕೇಯ 20, ಸೋಹನ್‌ ರೆಡ್ಡಿ ಔಟಾಗದೆ 30). ಜುಪಿಟರ್‌ ಕ್ರಿಕೆಟರ್ಸ್‌: 25.3 ಓವರ್‌ಗಳಲ್ಲಿ 97 (ಹಿತೇಶ್‌ 27, ವರುಣ್‌ 37; ಕೆ.ಪಿ.ಕಾರ್ತಿಕೇಯ 22ಕ್ಕೆ4, ಮಾಲತೇಶ್‌ 4ಕ್ಕೆ2). ಫಲಿತಾಂಶ: ಹಮ್ಮಂಡ್ಸ್‌ ಕ್ಲಬ್‌ಗೆ 299ರನ್‌ಗಳ ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT