ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಹ್ಲಿ ಮಾದರಿಯಾದರೆ ಅವರಂತೆಯೇ ಆಟವಾಡಿ: ಬಾಬರ್‌ಗೆ ಅಖ್ತರ್ ಸಲಹೆ

Last Updated 24 ಜೂನ್ 2019, 19:05 IST
ಅಕ್ಷರ ಗಾತ್ರ

ಲಂಡನ್‌: ವಿರಾಟ್‌ ಕೊಹ್ಲಿ ಅಭಿಮಾನಿಯೆಂದು ಹೇಳಿಕೊಳ್ಳುವ ಬಾಬರ್ ಆಜಂ, ಅವರಂತೆಯೇ ಆಡುವುದನ್ನು ಕಲಿಯಬೇಕು. ಉತ್ತಮ ಆರಂಭ ಪಡೆದ ನಂತರ ಅದನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸುವುದನ್ನು ಕಲಿಯಬೇಕು ಎಂದು ಪಾಕಿಸ್ತಾನದ ಮಾಜಿ ವೇಗದ ಬೌಲರ್‌ ಶೋಯೆಬ್‌ ಅಖ್ತರ್‌ ಹೇಳಿದ್ದಾರೆ.

ಮೂರನೇ ಕ್ರಮಾಂಕದ ಆಟಗಾರ ಬಾಬರ್‌, ಪಾಕಿಸ್ತಾನ ತಂಡಕ್ಕೆ ಕೆಲವು ಸಂದರ್ಭಗಳಲ್ಲಿ ಉಪಯುಕ್ತ ಕಾಣಿಕೆ ನೀಡುತ್ತ ಬಂದಿದ್ದಾರೆ. ಆದರೆ ಲಯ ಕಂಡುಕೊಂಡ ಮೇಲೆ ಪೂರ್ಣ ಸಾಮರ್ಥ್ಯ ತೋರಲು ವಿಫಲರಾಗಿದ್ದಾರೆ ಎಂದು ಅಖ್ತರ್‌ ಸೋಮವಾರ ಹೇಳಿದ್ದಾರೆ. ಭಾನುವಾರ ದಕ್ಷಿಣ ಆಫ್ರಿಕ ವಿರುದ್ಧ ನಡೆದ ಪಂದ್ಯದಲ್ಲಿ ಬಾಬರ್‌ ಅರ್ಧ ಶತಕ (80 ಎಸೆತಗಳಲ್ಲಿ 69) ಹೊಡೆದಿದ್ದರು.

‘ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ, ಕೇನ್‌ ವಿಲಿಯಮ್ಸನ್‌ ಅಂಥವರ ಆಟದ ಕಡೆ ನೋಡಿ, ಇವರೆಲ್ಲ ಅರ್ಧ ಶತಕ ದಾಟಿದ ಮೇಲೆ ರನ್‌ ವೇಗ ಹೆಚ್ಚಿಸುತ್ತ ಹೋಗುತ್ತಾರೆ. ಬಾಬರ್‌ ಅವರಿಂದ ಕಲಿಯಬೇಕು. ಅವರ ಬತ್ತಳಿಕೆಯಿಂದ ವೈವಿಧ್ಯಮಯ ಹೊಡೆತಗಳು ಬರಬೇಕು’ ಎಂದು ಯು–ಟ್ಯೂಬ್‌ ಚಾನೆಲ್‌ಗೆ ಪೋಸ್ಟ್‌ ಮಾಡಿದ ವಿಡಿಯೊದಲ್ಲಿ ಅಖ್ತರ್‌ ‘ಸಲಹೆ’ ನೀಡಿದ್ದಾರೆ.

ಭಾನುವಾರ ನಡೆದ 59 ಎಸೆತಗಳಲ್ಲಿ 89 ರನ್‌ ಚಚ್ಚಿದ ಹ್ಯಾರಿಸ್‌ ಸೊಹೇಲ್‌ ಅವರನ್ನು ಅಖ್ತರ್ ಶ್ಲಾಘಿಸಿದ್ದಾರೆ. ‘ಸೊಹೇಲ್‌ ಅವರನ್ನು ಆಡುವ 11ರ ತಂಡದಲ್ಲಿ ಸೇರಿಸುವಂತೆ ನಾನು ಪದೇ ಪದೇ ಹೇಳುತ್ತಿದ್ದೆ. ಅವರು ಪ್ರಬಲ ಆಟಗಾರ. ದಕ್ಷಿಣ ಆಫ್ರಿಕಾ ವಿರುದ್ಧ ಅವರು ಆಜಂಗಿಂತ ಚೆನ್ನಾಗಿ ಕಂಡರು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT