ಮಂಗಳವಾರ, ಆಗಸ್ಟ್ 20, 2019
25 °C

ಮಿಂಚಿದ ವಾರ್ನರ್‌, ಸ್ಮಿತ್‌: ಆಸ್ಟ್ರೇಲಿಯ ಜಯಭೇರಿ

Published:
Updated:

ಬ್ರಿಸ್ಬೇನ್‌: ಚೆಂಡು ವಿರೂಪ ಪ್ರಕರಣದಲ್ಲಿ ಅಮಾನತಿಗೆ ಒಳಗಾದ ನಂತರ ಮೊದಲ ಬಾರಿ ರಾಷ್ಟ್ರೀಯ ತಂಡದ ಪರವಾಗಿ ಕಣಕ್ಕೆ ಇಳಿದ ಡೇವಿಡ್‌ ವಾರ್ನರ್‌ ಮತ್ತು ಸ್ಟೀವ್ ಸ್ಮಿತ್‌ ಮಿಂಚಿದರು.

ವಾರ್ನರ್‌ ಗಳಿಸಿದ 39 ರನ್‌ ಮತ್ತು ಸ್ಮಿತ್‌ ಅವರ 22 ರನ್‌ಗಳ ನೆರವಿನಿಂದ ಆಸ್ಟ್ರೇಲಿಯಾ ತಂಡ ನ್ಯೂಜಿಲೆಂಡ್‌ ಇಲೆವನ್‌ ವಿರುದ್ಧ ನಡೆದ ಅಭ್ಯಾಸ ಪಂದ್ಯದಲ್ಲಿ ರೋಚಕ ಒಂದು ವಿಕೆಟ್‌ ಜಯ ಸಾಧಿಸಿತು.

ಅಲನ್‌ ಬಾರ್ಡರ್‌ ಕ್ರೀಡಾಂಗಣದಲ್ಲಿ ನಡೆದ ಹಣಾಹಣಿಯಲ್ಲಿ 216 ರನ್ ಗೆಲುವಿನ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ದಿಟ್ಟ ಆಟದ ನೆರವಿನಿಂದ 10 ಎಸೆತಗಳು ಬಾಕಿ ಇರುವಾಗ ಗೆದ್ದಿತು. ನಾಯಕ ಆ್ಯರನ್‌ ಫಿಂಚ್ ಅರ್ಧಶತಕ ಸಿಡಿಸಿದರು.

43 ಎಸೆತ ಎದುರಿಸಿದ ವಾರ್ನರ್‌ 39 ರನ್‌ ಗಳಿಸಿ ಟಾಡ್‌ ಆ್ಯಸ್ಲೆಗೆ ವಿಕೆಟ್‌ ಒಪ್ಪಿಸಿದರು. ಬಳಿಕ ಬಂದ ಸ್ಮಿತ್ ಆರಂಭದಲ್ಲಿ ತಿಣುಕಾಡಿದರೂ ಎರಡು ಬೌಂಡರಿ ಗಳಿಸುವ ಮೂಲಕ ಆತ್ಮವಿಶ್ವಾಸ ಹೆಚ್ಚಿಸಿಕೊಂಡರು. ಸ್ಮಿತ್‌ ಔಟಾದ ನಂತರ ಆತಿಥೇಯರು 42 ರನ್‌ ಗಳಿಸುವಲ್ಲಿ ಐದು ವಿಕೆಟ್‌ ಕಳೆದುಕೊಂಡಿತು. ನೇಥನ್‌ ಕೌಲ್ಟರ್‌ನೈಲ್‌ 34 ರನ್‌ ಗಳಿಸಿ ತಂಡದ ಜಯಕ್ಕೆ ಕಾರಣರಾದರು.

ನ್ಯೂಜಿಲೆಂಡ್‌ ಪರ ಟಾಮ್‌ ಬ್ಲಂಡೆಲ್‌ ಗರಿಷ್ಠ ರನ್‌ 77 ಗಳಿಸಿದದರು.

ಸಂಕ್ಷಿಪ್ತ ಸ್ಕೋರ್‌: ನ್ಯೂಜಿಲೆಂಡ್‌ 46.1 ಓವರ್‌ಗಳಲ್ಲಿ 215 (ಟಾಮ್‌ ಬ್ಲಂಡೆಲ್‌ 77, ಯೂಂಗ್‌ 60; ಕಮಿನ್ಸ್ 36ಕ್ಕೆ 3); ಆಸ್ಟ್ರೇಲಿಯಾ 48.2 ಓವರ್‌ಗಳಲ್ಲಿ 9ಕ್ಕೆ219 (ಆ್ಯರನ್‌ ಫಿಂಚ್‌ 52, ಡೇವಿಡ್‌ ವಾರ್ನರ್ 39, ನೇಥನ್‌ ಕೌಲ್ಟರ್‌ನೈಲ್ 34; ಹೆನ್ರಿ 40ಕ್ಕೆ3).

Post Comments (+)