ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾ ಕ್ರಿಕೆಟಿಗರ ಸಂಘಕ್ಕೆ ವಾಟ್ಸನ್‌ ಅಧ್ಯಕ್ಷ

Last Updated 12 ನವೆಂಬರ್ 2019, 19:47 IST
ಅಕ್ಷರ ಗಾತ್ರ

ಸಿಡ್ನಿ: ಅನುಭವಿ ಆಲ್‌ ರೌಂಡರ್‌ ಶೇನ್‌ ವಾಟ್ಸನ್‌ ಅವರು ಆಸ್ಟ್ರೇಲಿಯಾ ಕ್ರಿಕೆಟಿಗರ ಸಂಘದ (ಎಸಿಎ) ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

ಸೋಮವಾರ ರಾತ್ರಿ ನಡೆದ ಎಸಿಎ’ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ(ಎಜಿಎಂ) ಈ ನೇಮಕ ಮಾಡಲಾಗಿದೆ. ಎಸಿಎನಲ್ಲಿ 10 ಮಂದಿ ಸದಸ್ಯರಿದ್ದಾರೆ. ಆಸ್ಟ್ರೇಲಿಯಾ ಪುರುಷರ ತಂಡದ ಪ್ಯಾಟ್‌ ಕಮಿನ್ಸ್, ಮಹಿಳಾ ತಂಡದ ಕ್ರಿಸ್ಟನ್‌ ಬೀಮ್ಸ್ ಮತ್ತು ವೀಕ್ಷಕ ವಿವರಣೆಗಾರ್ತಿ ಹಾಗೂ ತಂಡದ ಮಾಜಿ ಆಟಗಾರ್ತಿ ಲೀಸಾ ಸ್ಟಾಲೇಕರ್‌ ಈ ಸಂಘದ ಸದಸ್ಯರಾಗಿ ಇತ್ತೀಚೆಗೆ ನೇಮಕಗೊಂಡಿದ್ದಾರೆ.

‘ಎಸಿಎ ಅಧ್ಯಕ್ಷನಾಗಿ ನೇಮಕಗೊಳ್ಳುವ ಮೂಲಕ ನನಗೆ ನಿಜವಾದ ಗೌರವ ಲಭಿಸಿದೆ. ಸಾಧಕರ ಹೆಜ್ಜೆ ಅನುಸರಿಸುತ್ತೇನೆ. ಕ್ರಿಕೆಟ್‌ ನನಗೆ ಸಾಕಷ್ಟು ನೀಡಿದೆ. ಅದನ್ನು ಮರಳಿಸಲು ಇದೊಂದು ಉತ್ತಮ ಅವಕಾಶ. ಹುದ್ದೆ ವಹಿಸಿಕೊಳ್ಳಲು ಉತ್ಸುಕನಾಗಿದ್ದೇನೆ’ ಎಂದು ವಾಟ್ಸನ್‌ ಟ್ವೀಟ್‌ ಮಾಡಿದ್ದಾರೆ.

ವಾಟ್ಸನ್‌ ಆಸ್ಟ್ರೇಲಿಯಾ ತಂಡದ ಪರ 59 ಟೆಸ್ಟ್‌, 190 ಏಕದಿನ ಹಾಗೂ 58 ಟ್ವೆಂಟಿ–20 ಪಂದ್ಯಗಳಲ್ಲಿ ಆಡಿದ್ದಾರೆ.

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ (ಐಪಿಎಲ್‌) ಅವರು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು
ಪ್ರತಿನಿಧಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT