ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದಿನ ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್‌ಗೆ ಕಠಿಣ ಹಾದಿ

ಶ್ರೀಲಂಕಾ, ನಮೀಬಿಯಾ, ಸ್ಕಾಟ್ಲೆಂಡ್‌ ತಂಡಗಳ ಜೊತೆ ಅರ್ಹತಾ ಸುತ್ತಿನಲ್ಲಿ ಸೆಣಸು
Last Updated 7 ನವೆಂಬರ್ 2021, 11:25 IST
ಅಕ್ಷರ ಗಾತ್ರ

ದುಬೈ: ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡ ಮುಂದಿನ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟ್ವೆಂಟಿ–20 ವಿಶ್ವಕಪ್ ಟೂರ್ನಿಯ ಸೂಪರ್ 12ರ ಹಂತ ತಲುಪಬೇಕಾದರೆ ಅರ್ಹತಾ ಸುತ್ತಿನಲ್ಲಿ ಆಡಬೇಕಾಗಿದೆ. ಶ್ರೀಲಂಕಾ ಕೂಡ ಅರ್ಹತಾ ಸುತ್ತಿನಲ್ಲಿ ಸೆಣಸಬೇಕಾಗಿದ್ದು ಬಾಂಗ್ಲಾದೇಶ ಮತ್ತು ಅಫ್ಗಾನಿಸ್ತಾನ ತಂಡಗಳು ನೇರ ಪ್ರವೇಶ ಲಭಿಸುವ ನಿರೀಕ್ಷೆಯಲ್ಲಿವೆ.

ಈಗ ನಡೆಯುತ್ತಿರುವ ಟೂರ್ನಿಯ ವಿಜೇತ ಮತ್ತು ರನ್ನರ್ ಅಪ್ ತಂಡಗಳು ಯಾವುವು ಎಂದು ನಿರ್ಧಾರವಾದ ನಂತರ ಮುಂದಿನ ವಿಶ್ವಕಪ್‌ನ ಸೂಪರ್ 12ರ ಹಂತಕ್ಕೆ ನೇರ ಪ್ರವೇಶ ಗಿಟ್ಟಿಸುವ ತಂಡಗಳ ಚಿತ್ರಣ ಸಿಗಲಿದೆ. ಶನಿವಾರದ ವರೆಗಿನ ಪಂದ್ಯಗಳ ಆಧಾರದಲ್ಲಿ ಇಂಗ್ಲೆಂಡ್‌, ಪಾಕಿಸ್ತಾನ, ಭಾರತ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳು ನೇರ ಅರ್ಹತೆ ಪಡೆಯುವತ್ತ ಹೆಜ್ಜೆ ಹಾಕಿವೆ.

ಶನಿವಾರ ನಡೆದ ಆಸ್ಟ್ರೇಲಿಯಾ ಎದುರಿನ ಪಂದ್ಯದಲ್ಲಿ ಸೋತ ನಂತರ ವೆಸ್ಟ್ ಇಂಡೀಸ್ 10ನೇ ಸ್ಥಾನಕ್ಕೆ ಕುಸಿದಿದೆ. ಬಾಂಗ್ಲಾದೇಶ ಎಲ್ಲ ಪಂದ್ಯಗಳನ್ನು ಸೋತಿದೆ. ಆದರೆ ತವರಿನಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ವಿರುದ್ಧ ನಡೆದ ಟೂರ್ನಿಗಳಲ್ಲಿ ಅಮೋಘ ಜಯ ಸಾಧಿಸಿರುವುದು ತಂಡದ ಕೈ ಹಿಡಿದಿದೆ.

ಈ ಬಾರಿ ಸೂಪರ್ 12ರ ಹಂತಕ್ಕೆ ಪ್ರವೇಶ ಪಡೆದಿದ್ದ ನಮೀಬಿಯಾ ಮತ್ತು ಸ್ಕಾಟ್ಲೆಂಡ್‌ ತಂಡಗಳು ಕೂಡ ಮುಂದಿನ ವರ್ಷ ಅರ್ಹತಾ ಸುತ್ತಿನಲ್ಲಿ ಆಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT