ಬ್ಯಾಟಿಂಗ್‌ಗೆ ಬಲ ತುಂಬುವ ಹಂಬಲ

ಬುಧವಾರ, ಮಾರ್ಚ್ 27, 2019
26 °C
ಇಂಗ್ಲೆಂಡ್‌ ಮಹಿಳಾ ತಂಡದ ಎದುರು ಸ್ಮೃತಿ ಮಂದಾನ ಬಳಗದ ಟ್ವೆಂಟಿ–20 ಪಂದ್ಯ

ಬ್ಯಾಟಿಂಗ್‌ಗೆ ಬಲ ತುಂಬುವ ಹಂಬಲ

Published:
Updated:
Prajavani

ಗುವಾಹಟಿ : ಎರಡು ಪಂದ್ಯ ಗಳಲ್ಲಿ ನೀರಸ ಆಟ ಆಡಿರುವ ಭಾರತ ಮಹಿಳಾ ತಂಡದವರು ಇಂಗ್ಲೆಂಡ್ ಎದುರಿನ ಟ್ವೆಂಟಿ–20 ಕ್ರಿಕೆಟ್ ಸರಣಿಯ ಅಂತಿಮ ಪಂದ್ಯದಲ್ಲಿ ಶನಿವಾರ ಗೆಲುವಿಗಾಗಿ ಪ್ರಯತ್ನಿಸಲಿದ್ದಾರೆ.

ಮೂರು ಪಂದ್ಯಗಳ ಸರಣಿಯ ಮೊದಲ ಎರಡೂ ಪಂದ್ಯಗಳಲ್ಲಿ ಸ್ಮೃತಿ ಮಂದಾನ ಬಳಗ ರನ್ ಗಳಿಕೆಯಲ್ಲಿ ಹಿನ್ನಡೆ ಅನುಭವಿಸಿತ್ತು. ಹೀಗಾಗಿ ಬ್ಯಾಟಿಂಗ್‌ಗೆ ಬಲ ತುಂಬಲು ತಂಡ
ಪ್ರಯತ್ನಿಸಬೇಕಾಗಿದೆ. 

ಏಕದಿನ ಸರಣಿಯಲ್ಲಿ 2–1ರ ಗೆಲುವು ಸಾಧಿಸಿದ ಭಾರತ ತಂಡ ಟ್ವೆಂಟಿ–20 ಸರಣಿಯ ಆರಂಭದಲ್ಲೇ ಮುಗ್ಗರಿಸಿತ್ತು.

ಚುಟುಕು ಕ್ರಿಕೆಟ್‌ನಲ್ಲಿ ಮೊದಲ ಬಾರಿ ತಂಡವನ್ನು ಮುನ್ನಡೆಸಿದ ಸ್ಮೃತಿ ಮಂದಾನ ಬ್ಯಾಟಿಂಗ್‌ನಲ್ಲಿ ಮಿಂಚ ಲಿಲ್ಲ. ಉಳಿದ ಆಟಗಾರ್ತಿಯರಿಗೂ ಉತ್ತಮ ಕಾಣಿಕೆ ನೀಡಲು ಸಾಧ್ಯವಾಗಲಿಲ್ಲ. ಹೀಗಾಗಿ ಪಂದ್ಯದಲ್ಲಿ ತಂಡ 41 ರನ್‌ಗಳಿಂದ ಸೋತಿತ್ತು. ಎರಡನೇ ಪಂದ್ಯದಲ್ಲೂ ಕಳಪೆ ಆಟ ಮುಂದುವರಿಯಿತು.

ಹೀಗಾಗಿ ಐದು ವಿಕೆಟ್‌ಗಳಿಂದ ಎದುರಾಳಿಗಳಿಗೆ ಶರಣಾಯಿತು. ಇದು ಟ್ವೆಂಟಿ–20 ಕ್ರಿಕೆಟ್‌ನಲ್ಲಿ ತಂಡದ ಸತತ ಆರನೇ ಸೋಲಾಗಿತ್ತು.

ಏಕದಿನ ಕ್ರಿಕೆಟ್‌ನಲ್ಲಿ ಸಾಮರ್ಥ್ಯ ಮೆರೆಯುವ ತಂಡ ಟ್ವೆಂಟಿ–20 ಪಂದ್ಯಗಳಲ್ಲಿ ಸೋಲುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಮುಂದಿನ ವರ್ಷ ಟ್ವೆಂಟಿ–20 ವಿಶ್ವಕಪ್ ಟೂರ್ನಿ ನಡೆಯಲಿರುವುದರಿಂದ ತಂಡ ಈಗ ಪುಟಿದೇಳಬೇಕಾಗಿದೆ.

ಇಂಗ್ಲೆಂಡ್‌ ಎದುರಿನ ಸರಣಿಯ ಸೋಲಿಗಿಂತ ಮೊದಲು ಭಾರತ ತಂಡ ನ್ಯೂಜಿಲೆಂಡ್‌ ವಿರುದ್ಧದ ಸರಣಿಯಲ್ಲೂ ಸೋತಿತ್ತು. ಮೊದಲು ಬ್ಯಾಟಿಂಗ್ ಮಾಡಿ ದಾಗ ಉತ್ತಮ ಮೊತ್ತ ಕಲೆ ಹಾಕಲು ವಿಫಲವಾಗಿದ್ದ ತಂಡ ಗುರಿ ಬೆನ್ನತ್ತಿದ ಸಂದರ್ಭದಲ್ಲೂ ರನ್ ಗಳಿಕೆಯಲ್ಲಿ ಹಿನ್ನಡೆ ಗಳಿಸಿತ್ತು.

ಸ್ಮೃತಿ ಮಂದಾನ, ಮಿಥಾಲಿ ವಿಫಲ: ಯುವ ಆಟಗಾರ್ತಿ ಹರ್ಲಿನ್‌ ಡಿಯೋಲ್‌, ಅನುಭವಿ ಸ್ಮೃತಿ ಮಂದಾನ ಮತ್ತು ಜೆಮಿಮಾ ರಾಡ್ರಿ ಗಸ್ ಅಗ್ರ ಕ್ರಮಾಂಕದಲ್ಲಿ ಮಿಂಚಲು ವಿಫಲ ರಾಗಿದ್ದರು. ಮಧ್ಯಮ ಕ್ರಮಾಂಕದಲ್ಲಿ ಮಿಥಾಲಿ ರಾಜ್‌ ಅವರಿಗೂ ನಿರೀಕ್ಷಿತ ಆಟ ಆಡಲು ಆಗಲಿಲ್ಲ.

ಬೌಲಿಂಗ್‌ನಲ್ಲಿ ಏಕ್ತಾ ಬಿಶ್ಠ್‌, ಪೂನಂ ಯಾದವ್ ಮತ್ತು ದೀಪ್ತಿ ಶರ್ಮಾ ಮಿಂಚಿದ್ದರೂ ಇಂಗ್ಲೆಂಡ್‌ನ ಬಲಿಷ್ಠ ಬ್ಯಾಟಿಂಗ್ ಶಕ್ತಿಗೆ ಕಡಿವಾಣ ಹಾಕಲು ಆಗಲಿಲ್ಲ. ಆದ್ದರಿಂದ ಬೌಲರ್‌ಗಳಿಗೂ ಶನಿವಾರದ ಪಂದ್ಯ ಸವಾಲಿನದ್ದಾಗಿದೆ.

ಪಂದ್ಯ ಆರಂಭ: ಬೆಳಿಗ್ಗೆ 11.

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !