ಮಿಥಾಲಿ ಪಡೆಗೆ ಜಯ ಅನಿವಾರ್ಯ

7

ಮಿಥಾಲಿ ಪಡೆಗೆ ಜಯ ಅನಿವಾರ್ಯ

Published:
Updated:
Deccan Herald

ಬೆಂಗಳೂರು: ಆಡಿರುವ ಎರಡು ಪಂದ್ಯಗಳಲ್ಲೂ ಸೋತಿರುವ ಇಂಡಿಯಾ ಬ್ಲೂ ತಂಡ ಈಗ ಅಗ್ನಿ ಪರೀಕ್ಷೆಗೆ ಸಜ್ಜಾಗಿದೆ.

ಶುಕ್ರವಾರ ನಡೆಯುವ ಮಹಿಳಾ ಟ್ವೆಂಟಿ–20 ಚಾಲೆಂಜರ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಮಿಥಾಲಿ ರಾಜ್‌ ಸಾರಥ್ಯದ ಬ್ಲೂ ತಂಡ ಇಂಡಿಯಾ ರೆಡ್‌ ಸವಾಲು ಎದುರಿಸಲಿದೆ. ಈ ಹಣಾಹಣಿಯಲ್ಲಿ ಬ್ಲೂ ತಂಡ ಗೆಲ್ಲಲೇಬೇಕಿದೆ.

ಬ್ಲೂ ತಂಡ ಹಿಂದಿನ ಎರಡು ಹೋರಾಟಗಳಲ್ಲೂ ಬ್ಯಾಟಿಂಗ್‌ ವೈಫಲ್ಯ ಕಂಡಿತ್ತು. ಮಿಥಾಲಿ ಅವರನ್ನು ಬಿಟ್ಟು ಉಳಿದೆಲ್ಲಾ ಆಟಗಾರ್ತಿಯರು ದೊಡ್ಡ ಮೊತ್ತ ಪೇರಿಸಲು ವಿಫಲರಾಗಿದ್ದರು. ಹಿಂದಿನ ನಿರಾಸೆ ಮರೆಯ ಬೇಕಾದರೆ ರೆಡ್‌ ವಿರುದ್ಧ ಈ ತಂಡದ ಬ್ಯಾಟ್ಸ್‌ವುಮನ್‌ಗಳು ಅಬ್ಬರಿಸಬೇಕಿದೆ. ಬೌಲಿಂಗ್‌ನಲ್ಲೂ ತಂಡ ಪರಿಣಾಮಕಾರಿ ಸಾಮರ್ಥ್ಯ ತೋರುವುದು ಅನಿವಾರ್ಯವಾಗಿದೆ.

ಆಡಿರುವ ಎರಡು ಪಂದ್ಯಗಳಲ್ಲೂ ವಿಜಯಿಯಾಗಿರುವ ದೀಪ್ತಿ ಶರ್ಮಾ ನಾಯಕತ್ವದ ರೆಡ್‌ ತಂಡ ವಿಶ್ವಾಸದಿಂದ ಬೀಗುತ್ತಿದೆ. ದೀಪ್ತಿ ಬಳಗ ಶುಕ್ರವಾರವೂ ಆಲೂರಿನ ಮೂರನೆ ಮೈದಾನದಲ್ಲಿ ಗೆಲುವಿನ ತೋರಣ ಕಟ್ಟಿ ‘ಹ್ಯಾಟ್ರಿಕ್‌’ ಸಾಧನೆ ಮಾಡಲು ಕಾತರವಾಗಿದೆ. ಈ ತಂಡ ಆಟದ ಎಲ್ಲಾ ವಿಭಾಗಗಳಲ್ಲೂ ಬಲಿಷ್ಠವಾಗಿದೆ.

ಆರಂಭ: ಬೆಳಿಗ್ಗೆ 10.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !